Kolar: ಡಿಕೆಶಿ ಹೋದಲ್ಲೆಲ್ಲಾ ಮುಂದಿನ ಸಿಎಂ ಘೋಷಣೆ!

ಹೈಕಮಾಂಡ್ ಎಷ್ಟೇ ಮುಲಾಮು ಹಚ್ಚಿದರೂ ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರೂ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಇಂದು ಕೋಲಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಡಿಕೆಶಿ ಮುಂದಿನ ಸಿಎಂ ಅನ್ನೋ ಘೋಷಣೆ ಕೂಗಿದ್ದಾರೆ.

ಕೋಲಾರ ಕಾರ್ಯಕ್ರಮದಲ್ಲಿ ಡಿಕೆಶಿ

ಕೋಲಾರ ಕಾರ್ಯಕ್ರಮದಲ್ಲಿ ಡಿಕೆಶಿ

  • Share this:
ಚುನಾವಣೆಗೆ (Election) ಏಳೆಂಟು ತಿಂಗಳಿರೋವಾಗ ಕಾಂಗ್ರೆಸ್​​​ನಲ್ಲಿ (Congress)  ಮುಖ್ಯಮಂತ್ರಿ (Chief Minister) ಗಾದಿಗೆ ಫೈಟ್ ಜೋರಾಗಿದೆ. ಹೈಕಮಾಂಡ್ ಎಷ್ಟೇ ಮುಲಾಮು ಹಚ್ಚಿದರೂ ಮಾಜಿ ಸಿಎಂ ಸಿದ್ದರಾಮಯ್ಯ (Siddaramiah) ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK) ಇಬ್ಬರೂ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಹೋದಲ್ಲೆಲ್ಲಾ ಇಬ್ಬರ ಪರವಾಗಿ ಮುಂದಿನ ಸಿಎಂ (Next CM) ಅನ್ನೋ ಘೋಷಣೆಗಳು ಕೇಳ್ತಿದೆ. ಅದರಂತೆ ಇಂದು ಡಿಕೆಶಿ ಕೋಲಾರದಲ್ಲಿ ನಡೆದ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಡಿಕೆಶಿ ಮುಂದಿನ ಸಿಎಂ ಅಂತಾ ಕಾರ್ಯಕರ್ತರು ಕೂಗಿದ್ದಾರೆ. ರೋಡ್ ಶೋ, ವೇದಿಕೆ ಮೇಲೆ ನಡೆದ ಕಾರ್ಯಕ್ರಮದ ವೇಳೆಯೂ ಡಿಕೆಶಿ ಮುಂದಿನ ಸಿಎಂ ಅಂತಾ ಅಭಿಮಾನಿಗಳು ಘೋಷಣೆ ಕೂಗಿದ್ದಾರೆ.

ಕೋಲಾರ ಜಿಲ್ಲೆಯ ಮಾಲೂರಿನ ಮಾಸ್ತಿ ಗ್ರಾಮದಲ್ಲಿ ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಆಯೋಜಿಸಿದ್ದ ಪಾದಯಾತ್ರೆಗೆ ಕೆಪಿಸಿಸಿ ಅಧ್ಯಕ್ಷ್ಯ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು. ಇದೇ ವೇಳೆ ಡಿಕೆಶಿ ಮುಂದಿನ ಸಿಎಂ ಅನ್ನೋ ಘೋಷಣೆಗಳು ಜೋರಾಗಿ ಪ್ರತಿಧ್ವನಿಸಿದವು.

ರೋಡ್ ಶೋನಲ್ಲಿ ಡಿಕೆ ಮುಂದಿನ ಸಿಎಂ ಘೋಷಣೆ

ಕೋಲಾರಕ್ಕೆ ಬರುತ್ತಿದ್ದಂತೆ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದ ಡಿ.ಕೆ.ಶಿವಕುಮಾರ್​ಗೆ ಕಾರ್ಯಕರ್ತರು ಭರ್ಜರಿಯಾಗಿ ಸ್ವಾಗತ ಕೋರಿದರು. ರಸ್ತೆಯುದ್ದಕ್ಕೂ ಡಿಕೆಶಿ ಮುಂದಿನ ಸಿಎಂ ಎಂದು ಕಾರ್ಯಕರ್ತರು ಘೋಷಣೆ ಕೂಗಿದರು. ಅಭಿಮಾನಿಗಳು ರಸ್ತೆಯಲ್ಲಿ ಹೂವಿನ ಸುರಿಮಳೆಯನ್ನೇ ಸುರಿಸಿದರು.

dk sivakumar next cm congress activists announced at program in kolar
ಕೋಲಾರ ಕಾರ್ಯಕ್ರಮದಲ್ಲಿ ಡಿಕೆಶಿ


ಡಿಕೆ ಸಿಎಂ ಆಗಲು ಬೆಂಬಲಿಸಿ ಎಂದ ಕಾಂಗ್ರೆಸ್ ಶಾಸಕ

ಮಾಲೂರು ಕಾಂಗ್ರೆಸ್ ನಾಯಕರು ಮಾತನಾಡುವ ವೇಳೆ, ಡಿಕೆಶಿಯವರೇ ನಮ್ಮ ಮುಂದಿನ ಸಿಎಂ ಎಂದು ಬಹಿರಂಗವಾಗಿ ಹೇಳಿದ್ರು. ಡಿಕೆಶಿ ಸಿಎಂ ಆಗಲು ಶಾಸಕ ನಂಜೇಗೌಡ ಅವರೇ ಬೆಂಬಲಿಸಿ ಎಂದು ಮನವಿ ಮಾಡಿದರು. ಇಷ್ಟೆಲ್ಲಾ ಬೆಳವಣಿಗೆಯಾದರೂ ಡಿಕೆಶಿ ಮಾತ್ರ ವೇದಿಕೆಯಲ್ಲಿ ಏನೂ ಮಾತನಾಡದೇ ಸುಮ್ಮನೆ ಕುಳಿತಿದ್ದರು.

ಇದನ್ನೂ ಓದಿ: ನಿತೀಶ್ ನಮ್ಮ ಜೊತೆ ಕೈಜೋಡಿಸಿದ್ದು ಬಿಜೆಪಿ ಕಪಾಳಕ್ಕೆ ಬಾರಿಸಿದಂತಾಗಿದೆ: ತೇಜಸ್ವಿ ಮಾತು!

ನಾನೂ ಗದೆ ಹಿಡಿಯುತ್ತೇನೆ- ಡಿಕೆಶಿ

ಮಾಸ್ತಿ ಗ್ರಾಮದ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲೂ ಮುಂದಿನ ಸಿಎಂ ಡಿಕೆಶಿ ಅನ್ನೋ ಘೋಷಣೆ ಕೇಳಿಬಂತು. ಬಳಿಕ ಕಾರ್ಯಕ್ರಮದಲ್ಲಿ ಡಿಕೆಶಿಗೆ 3 ಕೆಜಿ ತೂಕದ ಬೆಳ್ಳಿ ಗದೆಯನ್ನ ನೀಡಿ ಶಾಸಕ ನಂಜೇಗೌಡ ಸನ್ಮಾನಿಸಿದರು. ಇದಕ್ಕೆ ಡಿಕೆಶಿ, ನನಗೆ ಬೆಳ್ಳಿ ಗದೆ ನೀಡಿದ್ದೀರಿ. ಅದೇ ಗದೆ ಭೀಮನು ಹಿಡಿದಿದ್ದ. ಅರ್ಜುನನೂ ಹಿಡಿದಿದ್ದ. ರಾಜ್ಯದಲ್ಲಿ ನಾನು ಗದೆ ಹಿಡಿದು ಅನ್ಯಾಯದ ವಿರುದ್ಧ ನಿಲ್ಲುತ್ತೇನೆ ಅಂತಾ ಡಿಕೆಶಿ ಹೇಳಿದರು.

dk sivakumar next cm congress activists announced at program in kolar
ಡಿಕೆಶಿಗೆ ಬೆಳ್ಳಿ ಗದೆ ನೀಡಿ ಸ್ವಾಗತ


ಪಾದಯಾತ್ರೆ ನಡೆಸಲು AICCಗೆ ನಾನು ಮಾಹಿತಿ ಕೊಟ್ಟಿದ್ದೇನೆ. ಪಾದಯಾತ್ರೆ ಕಾರ್ಯಕ್ರಮಕ್ಕೆ ಸೋನಿಯಾ ಗಾಂಧಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಆ.15ರಂದು ಕಾಂಗ್ರೆಸ್ ಪಕ್ಷದ ಬೃಹತ್ ಕಾರ್ಯಕ್ರಮ ಹಿನ್ನೆಲೆ ಜನ ಮೆಟ್ರೋ ಪ್ರಯಾಣ ನಡೆಸುವಂತೆ ಡಿಕೆಶಿ ಮನವಿ ಮಾಡಿದರು.

ಇದನ್ನೂ ಓದಿ: ವಿವಿ ಪುರದಲ್ಲಿ ವಿದೇಶಾಂಗ ಸಚಿವ! ಫುಡ್ ಸ್ಟ್ರೀಟ್​ನಲ್ಲಿ ನಾನಾ ತಿಂಡಿ ಸವಿದ ಎಸ್ ಜೈಶಂಕರ್

ಬೆಂಕಿ ಇಲ್ಲದೆ ಹೊಗೆಯಾಡಲ್ಲ- ಡಿಕೆಶಿ ಕಿಡಿ

ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ‌ಬೆಂಕಿ ಇಲ್ಲದೆ ಹೊಗೆಯಾಡಲ್ಲ. ಬಿಎಸ್​​ವೈ ನಮಗೆ ಏನು ಹೇಳಬೇಕಿಲ್ಲ. ರಾಜ್ಯದ ಮಂತ್ರಿ, ಹಾಲಿ, ಮಾಜಿ ಶಾಸಕರು ಸಿಎಂ ಬದಲಾವಣೆ ವಿಚಾರವನ್ನ ಹೇಳಿಕೊಂಡಿದ್ದಾರೆ. ಬಿಜೆಪಿಯಲ್ಲಿ ಆ ಬಗ್ಗೆ ಗುಸುಗುಸು ಪಿಸುಪಿಸು ನಡೆಯುತ್ತಿದೆ ಎಂದರು.

ಸರ್ಕಾರದ ವಿರುದ್ಧ ಡಿಕೆಶಿ ವಾಗ್ದಾಳಿ

ರಾಜ್ಯದಲ್ಲಿ ನಾವು ಸಮೀಕ್ಷೆ ಮಾಡಿದ್ದು, ಮುಂದೆ ಕಾಂಗ್ರೆಸ್ ಸರ್ಕಾರದ ಬರುವುದಾಗಿ ಡಿಕೆಶಿ ಹೇಳಿದ್ರು. ಬಿಜೆಪಿ ಹೈಕಮಾಂಡ್, ಯಡಿಯೂರಪ್ಪನವರ ಕಣ್ಣಲ್ಲಿ ನೀರು ಸುರಿಸಿತು. ಇದೆಲ್ಲಾ ಒಂದು ದೊಡ್ಡ ಪ್ರಶ್ನೆ ಎಂದರು. ಬಿಜೆಪಿ ಸರ್ಕಾರದಲ್ಲಿ 40% ಆಡಳಿತ ನಡಿತೀದೆ ಅಂತಾ ಕಿಡಿಕಾರಿದ್ರು. ಇನ್ನು ರಾಜ್ಯದಲ್ಲೂ ಮೈತ್ರಿಯ ಸುಳಿವು ಕೊಟ್ಟರು.
Published by:Thara Kemmara
First published: