ಕುಂದಗೋಳ ಉಪಚುನಾವಣೆ: ಡಿಕೆ ಶಿವಕುಮಾರ್​, ಶ್ರೀರಾಮುಲು ಅಸ್ವಸ್ಥ; ಚುನಾವಣಾ ಪ್ರಚಾರ ಮೊಟಕು

ಲೋಕಸಭೆ ಬಳಿಕ ವಿಧಾನಸಭಾ ಉಪಚುನಾವಣೆಗಾಗಿ ಬಿಸಿಲಿನ ನಡುವೆ ಬಿಡುವಿಲ್ಲದ ಪ್ರಚಾರ ನಡೆಸಿದ ಡಿಕೆ ಶಿವಕುಮಾರ್​, ಶ್ರೀರಾಮಲು ಅಸ್ಚಸ್ಥಗೊಂಡಿದ್ದು, ಪ್ರಚಾರ ಮೊಟಕುಗೊಳಿಸಿದ್ದಾರೆ.

Seema.R
Updated:May 8, 2019, 3:59 PM IST
ಕುಂದಗೋಳ ಉಪಚುನಾವಣೆ: ಡಿಕೆ ಶಿವಕುಮಾರ್​, ಶ್ರೀರಾಮುಲು ಅಸ್ವಸ್ಥ; ಚುನಾವಣಾ ಪ್ರಚಾರ ಮೊಟಕು
ಶ್ರೀರಾಮುಲು - ಡಿಕೆ ಶಿವಕುಮಾರ್​​
  • Share this:
ಹುಬ್ಬಳ್ಳಿ (ಮೇ.8): ಕುಂದಗೋಳ ಉಪಚುನಾವಣೆಯ ಉಸ್ತುವಾರಿ ಹೊತ್ತಿರುವ ಕಾಂಗ್ರೆಸ್​ ನಾಯಕ ಡಿಕೆ ಶಿವಕುಮಾರ್​ ಹಾಗೂ ಬಿಜೆಪಿ ನಾಯಕ ಶ್ರೀರಾಮುಲು ಬಿಡುವಿಲ್ಲದ ಪ್ರಚಾರ ನಡೆಸಿದ್ದಾರೆ.  ನಿರಂತರ ಪ್ರಚಾರ ನಡೆಸಿದ ಪರಿಣಾಮ ನಾಯಕರಿಗ ಅಸ್ವಸ್ಥ ಗೊಂಡಿದ್ದು, ಪ್ರಚಾರಕ್ಕೆ ಬ್ರೇಕ್​ ನೀಡಿದ್ದಾರೆ.

ಲೋಕಸಭಾ ಚುನಾವಣೆ ಬಳಿಕ ಕುಂದಗೋಳ ವಿಧಾನಸಭಾ ಉಪಚುನಾವಣೆ ಉಸ್ತುವಾರಿ ಹೊತ್ತಿದ್ದ ಡಿಕೆ ಶಿವಕುಮಾರ್​ ಬಿಡುವಿಲ್ಲದ ಪ್ರಚಾರ ನಡೆಸಿದ್ದರು. ಕ್ಷೇತ್ರದಲ್ಲಿ ಎದ್ದಿದ್ದ ಬಂಡಾಯ ಶಮನದ ಜೊತೆ ಕುಸುಮಾ ಶಿವಳ್ಳಿ ಗೆಲುವಿಗಾಗಿ ನಿರಂತರ ಓಡಾಟ ನಡೆಸಿದ್ದಾರೆ. ಈ ನಡುವೆ ನಿನ್ನೆ ಬರ ಪರಿಸ್ಥಿತಿ ಹಿನ್ನೆಲೆ ರಾಜ್ಯದಲ್ಲಿ ಜಲಸಂಪನ್ಮೂಲ ಇಲಾಖೆ ಕೈಗೊಳ್ಳುವ ಕಾರ್ಯಕ್ರಮದ ಕುರಿತು ಸಭೆ ನಡೆಸಿದ್ದರು.

ಬಿಸಿಲು ಹೆಚ್ಚಾಗಿದ್ದರು ಕೂಡ  ಬಿಡುವಿಲ್ಲದ ಪ್ರಚಾರ ನಡೆಸಿದ ಡಿಕೆ ಶಿವಕುಮಾರ್​ ಈಗ ಚುನಾವಣಾ ಒತ್ತಡದಿಂದ ಅಸ್ವಸ್ಥಗೊಂಡಿದ್ದಾರೆ. ಹೈ ಬಿಪಿ, ಶುಗರ್​ನಿಂದಾಗಿ ಅವರು ಇಂದು ವಿಶ್ರಾಂತಿ ಮೊರೆಹೋಗಿದ್ದಾರೆ. ಹುಬ್ಬಳ್ಳಿಯ ರೆಸಾರ್ಟ್​ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅನಾರೋಗ್ಯದ ಕಾರಣ ಕೊಠಡಿಯಿಂದ ಹೊರ ಬರುತ್ತಿಲ್ಲ. ವೈದ್ಯರ ಸಲಹೆ ಮೇರೆಗೆ ಪ್ರಮುಖ ಮುಖಂಡರನ್ನು ಮಾತ್ರ ಕೊಠಡಿಯೊಳಗೆ ಕರೆಸಿಕೊಂಡು ಚರ್ಚೆ ನಡೆಸುತ್ತಿದ್ದಾರೆ

ಇನ್ನು ಬಿಜೆಪಿ ನಾಯಕ ಶ್ರೀರಾಮುಲು ಕೂಡ ಕೈ ನಾಯಕರಿಗೆ ಪ್ರತಿತಂತ್ರ ರೂಪಿಸಿ ಚುನಾವಣೆಯಲ್ಲಿ ನಿರತರಾಗಿದ್ದರು.  ಪರಿಶಿಷ್ಠ ಜಾತಿ ಮತಗಳನ್ನು ಸೆಳೆಯುವುದು ಸೇರಿದಂತೆ ಇನ್ನಿತರ ಪ್ರಚಾರ ತಂತ್ರಗಳನ್ನು ಅವರು ಅನುಸರಿಸಿದ್ದರು. ಇಂದು  ಜ್ವರ ವಿದ್ದರೂ ಕೂಡ ಕರಡಿಕೊಪ್ಪ, ಬೆಟದೂರು ಗ್ರಾಮದಲ್ಲಿ ರೋಡ್ ಶೋ ನಡೆಸಿದ್ದರು. ಆದರೆ, ಬಿಸಿಲ ತಾಪಕ್ಕೆ ಜ್ವರ ಹೆಚ್ಚಾದ ಹಿನ್ನೆಲೆ ರೋಡ್​ ಶೋವನ್ನು ಅರ್ಥಕ್ಕೆ ಮೊಟಕುಗೊಳಿಸಿದ್ದಾರೆ.

ಇದನ್ನು ಓದಿ: ಮುನಿಸು ಮರೆತ ನಾಯಕರು; ಕುಂದಗೋಳ ಗೆಲುವಿಗೆ ಡಿಕೆ ಶಿವಕುಮಾರ್​​-ಸತೀಶ್​ ಜಾರಕಿಹೊಳಿ ರಣತಂತ್ರ

ಲೋಕಸಭೆ, ವಿಧಾನಸಭಾ ಉಪಚುನಾವಣೆಯಲ್ಲಿ ಬಿಡುವಿಲ್ಲದ ಪ್ರಚಾರ ನಡೆಸಿದ ಪರಿಣಾಮ ಬಳಲಿದ ಅವರಿಗೆ ವಿಶ್ರಾಂತಿ ಅವಶ್ಯಕತೆ ಇದೆ, ಈ ಹಿನ್ನೆಲೆಯಲ್ಲಿ ರೋಡ್​ ಶೋವನ್ನು ಅರ್ಥದಲ್ಲಿಯೇ ಮೊಟಕುಗೊಳಿಸಿ ಅವರು ಬೆಟದೂರಿನಿಂದ ಬಳ್ಳಾರಿಗೆ ಪ್ರಯಾಣಿಸಿದ್ದಾರೆ. ಎರಡು ದಿನಗಳ ವಿಶ್ರಾಂತಿ ಬಳಿಕ ಮತ್ತೆ ಅಂತಿಮ ಹಂತದ ಚುನಾವಣಾ ಪ್ರಚಾರ ನಡೆಸುವುದಾಗಿ ಅವರು ತಿಳಿಸಿದ್ದಾರೆ.

First published:May 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ