ದೆಹಲಿಯತ್ತ ಡಿ.ಕೆ. ಶಿವಕುಮಾರ್​; ಜಾರಿ ನಿರ್ದೇಶನಾಲಯದಿಂದ ಬಚಾವ್​​ ಆಗಲು ತಂತ್ರ

news18
Updated:September 8, 2018, 9:56 PM IST
ದೆಹಲಿಯತ್ತ ಡಿ.ಕೆ. ಶಿವಕುಮಾರ್​; ಜಾರಿ ನಿರ್ದೇಶನಾಲಯದಿಂದ ಬಚಾವ್​​ ಆಗಲು ತಂತ್ರ
news18
Updated: September 8, 2018, 9:56 PM IST
ನ್ಯೂಸ್​ 18 ಕನ್ನಡ

ಬೆಂಗಳೂರು (ಸೆ.8):  ಅಕ್ರಮ ಹಣ ಪತ್ತೆ ಕುರಿತು ಸಚಿವ ಡಿಕೆ ಶಿವಕುಮಾರ್​​ ವಿರುದ್ಧ ಜಾರಿ ನಿರ್ದೇಶನಾಲಯ ಎಫ್​ ಐ ಆರ್​ ದಾಖಲಿಸುವ ಸಾಧ್ಯತೆ ಇದ್ದು, ಇದರಿಂದ ಪಾರಾಗಲು ಡಿಕೆಶಿ ರಣತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.

ಇಂದು ನಡೆದ ಬೆಳವಣಿಗೆಗಳನ್ನು ಅವಲೋಕಿಸಿರುವ ಶಿವಕುಮಾರ್​ ಈ ಕುರಿತು ತಮ್ಮ ವಕೀಲರ ಪರ ಕೂಡ ಚರ್ಚೆ ನಡೆಸಿದ್ದಾರೆ. ಅಲ್ಲದೆ ರಾಷ್ಟ್ರ ಮಟ್ಟದ ಹಿರಿಯ ವಕೀಲರೊಂದಿಗೂ ಈ ಬಗ್ಗೆ ಚರ್ಚಿಸಿ ಯಾವ ರೀತಿ ಕಾನೂನು ಹೋರಾಟ ಕೈಗೊಳ್ಳಬಹುದು ಎಂಬ ಕುರಿತು ಚರ್ಚೆಗೆ ಮುಂದಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಡಿಕೆಶಿವಕುಮಾರ್​ ಇಂದು ರಾತ್ರಿ ದಿಢೀರ್​ ದೆಹಲಿ ಪಯಣ ಬೆಳಸಲಿದ್ದಾರೆ. ಕಾಂಗ್ರೆಸ್​ ನಾಯಕ, ವಕೀಲರಾದ ಕಪಿಲ್ ಸಿಬಲ್, ಅಭಿಷೇಕ್ ಸಿಂಗ್ವಿ ಭೇಟಿ ನಿರೀಕ್ಷಣಾ ಜಾಮೀನು ಪಡೆಯೋ ವಿಚಾರವಾಗಿ ಚರ್ಚೆ ನಡೆಸಲಿದ್ದಾರೆ.

ಇದೇ ವೇಳೆ ಎಐಸಿಸಿ ಖಜಾಂಚಿ ಅಹಮದ್ ಪಟೇಲ್, ಗುಲಾಂನಬೀ ಆಜಾದ್, ಅಶೋಕ್ ಗೆಹ್ಲೋಟ್ ಭೇಟಿ ಮಾಡಿ ರಾಜಕೀಯ ರಣತಂತ್ರ, ಮುಂದಿನ ನಿಲುವಿನ ಬಗ್ಗೆ ಸಲಹೆ ಪಡೆಯಲಿದ್ದಾರೆ.

ಮೋದಿ ಭೇಟಿ ಸಾಧ್ಯತೆ: ದೆಹಲಿಗೆ ಹೊರಟಿರುವ ಶಿವಕುಮಾರ್ ಮೋದಿ ಭೇಟಿ ಮಾಡುವ ಸಾಧ್ಯತೆಗಳು ಇದೆ . ಡಿಕೆಶಿ ಮೇಲೆ ಜಾರಿ ನಿರ್ದೇಶನಾಲಯದಲ್ಲಿ ಎಫ್​ಐಆರ್​ ದಾಖಲು ಮಾಡುವಂತೆ ಕುಮ್ಮಕ್ಕು ನೀಡುತ್ತಿರುವುದು ಬಿಜೆಪಿ ಎಂಬ ಆರೋಪ ಕೂಡ ಕೇಳಿ ಬಂದಿದೆ.

ಈ ಹಿನ್ನಲೆ ಈ ಕುರಿತು ಚರ್ಚೆ ನಡೆಸಲು ಮೋದಿಯನ್ನು ಭೇಟಿಯಾಗುವ ಸಾಧ್ಯತೆ ಇದೆ, ಆದರೆ ಈ ಕುರಿತು ಮಾತನಾಡಿದ ಅವರು, ರಿಲೀಫ್​ ಫಂಡ್​ ವಿಚಾರವಾಗಿ ನಾವು ದೆಹಲಿಗೆ ಚರ್ಚೆ ನಡೆಸಲು ಹೋಗುತ್ತಿದ್ದು, ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬಂದಿಲ್ಲ, ಬಿಜೆಪಿಯವರೆಲ್ಲಾ ನನ್ನ ಸ್ನೇಹಿತರಾಗಿದ್ದು ಅವರು ನನ್ನ ವಿರುದ್ಧ ಷಡ್ಯಂತ್ರ ರೂಪಿಸಲು ಸಾಧ್ಯವಾ ಎಂದು ನಗು ಸುಮ್ಮನಾಗಿದ್ದಾರೆ.
First published:September 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ