ಸೋಲಿನ ಹೊಣೆ ಹೊತ್ತು ಗುಂಡೂರಾವ್​​ ರಾಜೀನಾಮೆ; ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಡಿಕೆಶಿ ಸೇರಿದಂತೆ ಹಲವರು ಲಾಬಿ

ಕೆಪಿಸಿಸಿ ಅಧ್ಯಕ್ಷ ಸ್ಥಾನ ಡಿಕೆಶಿಗೆ ನೀಡಿದರೆ, ಲಿಂಗಾಯತ ಸಮುದಾಯದ ಮತಗಳನ್ನು ಕಳೆದುಕೊಳ್ಳುವ ಭೀತಿಯೂ ಕಾಂಗ್ರೆಸ್​​ಗೆ ಎದುರಾಗಿದೆ. ಹಾಗೆಯೇ ಒಂದು ವೇಳೆ ಕೆಪಿಸಿಸಿ ಅಧ್ಯಕ್ಷರನ್ನಾಗಿ ಎಂಬಿ ಪಾಟೀಲ್​​ರನ್ನು ಆಯ್ಕೆ ಮಾಡಿದರೆ, ಒಕ್ಕಲಿಗ ಸಮುದಾಯದ ಮತಗಳನ್ನು ಕಳೆದುಕೊಳ್ಳುವ ಭಯವೂ ಕಾಂಗ್ರೆಸ್ಸಿಗಿದೆ.

ಡಿ.ಕೆ ಶಿವಕುಮಾರ್​​, ಎಂಬಿ ಪಾಟೀಲ್​​

ಡಿ.ಕೆ ಶಿವಕುಮಾರ್​​, ಎಂಬಿ ಪಾಟೀಲ್​​

 • Share this:
  ಬೆಂಗಳೂರು(ಡಿ.09): ಕರ್ನಾಟಕ ಉಪಚುನಾವಣೆಯಲ್ಲಿ ಕಾಂಗ್ರೆಸ್​​ ಹೀನಾಯ ಸೋಲಿನ ಹೊಣೆ ಹೊತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್​​ ಶಾಸಕಾಂಗ ಪಕ್ಷದ ನಾಯಕ ಮತ್ತು ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬೆನ್ನಲ್ಲೇ ದಿನೇಶ್​ ಗುಂಡೂರಾವ್​​ ಕೂಡ ಸೋಲಿನ ನೈತಿಕ ಜವಾಬ್ದಾರಿ ಹೊತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಡಿ.ಕೆ ಶಿವಕುಮಾರ್​​ ಮತ್ತು ಎಂಬಿ ಪಾಟೀಲ್​​ ಸೇರಿದಂತೆ ಹಲವು ಹಿರಿಯ ನಾಯಕರ ಲಾಬಿ ಜೋರಾಗಿದೆ ಎಂದು ಹೇಳಲಾಗುತ್ತಿದೆ.

  ಹೌದು, ಸಿದ್ದರಾಮಯ್ಯ ಮತ್ತು ದಿನೇಶ್​​ ಗುಂಡೂರಾವ್​​ ರಾಜೀನಾಮೆಯಿಂದ ತೆರವಾದ ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾರಾದರೂ ಪ್ರಬಲ ನಾಯಕರನ್ನು ತಂದು ಕೂರಿಸಬೇಕಾದ ಜವಾಬ್ದಾರಿ ಸೋನಿಯಾ ಗಾಂಧಿ ಮೇಲಿದೆ. ಈ ಸಂಬಂಧ ಕಾಂಗ್ರೆಸ್​ ಹೈಕಮಾಂಡ್​​ ಸೋನಿಯಾ ಗಾಂಧಿ ರಾಜ್ಯ ನಾಯಕರೊಂದಿಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಕೆಪಿಸಿಸಿ ಅಧ್ಯಕ್ಷ ಗಾದಿ ಮತ್ತು ಶಾಸಕಾಂಗ ಪಕ್ಷದ ಸ್ಥಾನಕ್ಕೆ ಯಾರನ್ನು ಕೂರಿಸಬಹುದು ಎಂದು ಹೈಕಮಾಂಡ್​​ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಮತ್ತು ಕೆ.ಸಿ ವೇಣುಗೋಪಲ್​​ಗೆ ಖುದ್ದು ಫೋನ್​ ಮಾಡಿ ಕೇಳಿದ್ದಾರೆ​.

  ಮಾಜಿ ಸಚಿವ ಡಿ.ಕೆ ಶಿವಕುಮಾರ್​​​, ಎಂಬಿ ಪಾಟೀಲ್​​​​, ಕೃಷ್ಣ ಬೈರೇಗೌಡ, ಕೆ.ಎಚ್​​ ಮುನಿಯಪ್ಪ ಸೇರಿದಂತೆ ಎಚ್​​.ಕೆ ಪಾಟೀಲ್​​​​ ಕೆಪಿಸಿಸಿ ಅಧ್ಯಕ್ಷ ಮತ್ತು ಕಾಂಗ್ರೆಸ್​ ಶಾಸಕಾಂಗ ನಾಯಕನ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಪೈಕಿ ಕೆಪಿಸಿಸಿ ಅಧ್ಯಕ್ಷ ಹುದ್ದೆಗಾಗಿ ಡಿ.ಕೆ ಶಿವಕುಮಾರ್​​ ಮತ್ತು ಎಂಬಿ ಪಾಟೀಲ್​​ ನಡುವೇ ನೇರ ಪೈಪೋಟಿ ಇದೆ ಎಂಬ ಚರ್ಚೆ ನಡೆಯುತ್ತಿದೆ.

  ಕೆಪಿಸಿಸಿ ಅಧ್ಯಕ್ಷ ಸ್ಥಾನ ಡಿಕೆಶಿಗೆ ನೀಡಿದರೆ, ಲಿಂಗಾಯತ ಸಮುದಾಯದ ಮತಗಳನ್ನು ಕಳೆದುಕೊಳ್ಳುವ ಭೀತಿಯೂ ಕಾಂಗ್ರೆಸ್​​ಗೆ ಎದುರಾಗಿದೆ. ಹಾಗೆಯೇ ಒಂದು ವೇಳೆ ಕೆಪಿಸಿಸಿ ಅಧ್ಯಕ್ಷರನ್ನಾಗಿ ಎಂಬಿ ಪಾಟೀಲ್​​ರನ್ನು ಆಯ್ಕೆ ಮಾಡಿದರೆ, ಒಕ್ಕಲಿಗ ಸಮುದಾಯದ ಮತಗಳನ್ನು ಕಳೆದುಕೊಳ್ಳುವ ಭಯವೂ ಕಾಂಗ್ರೆಸ್ಸಿಗಿದೆ.

  ಇದನ್ನೂ ಓದಿ: ನೈತಿಕ ಹೊಣೆ ಹೊತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ; ದಿನೇಶ್​ ಗುಂಡೂರಾವ್​

  ಇನ್ನು ಕಾಂಗ್ರೆಸ್​ನ ನಿಷ್ಠಾವಂತ ಕಾರ್ಯಕರ್ತರಾದ ಕೃಷ್ಣ ಬೈರೇಗೌಡರು ಕೆಪಿಸಿಸಿ ಅಧ್ಯಕ್ಷ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. ದಲಿತ ನಾಯಕರಾಗಿರುವ ಮಾಜಿ ಸಂಸದ ಕೆ.ಎಚ್​ ಮುನಿಯಪ್ಪ​ ಕೂಡ ಕೆಪಿಸಿಸಿ ಜವಾಬ್ದಾರಿ ಹೊರುವ ಕನಸ್ಸು ಹೊತ್ತಿದ್ದಾರೆ. ಈ ನಡುವೆ ಸಂಸದ ಪ್ರಕಾಶ ಹುಕ್ಕೇರಿಯೂ ತಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ ಎಂದು ಹೇಳಿಕೊಂಡಿದ್ದಾರೆ. ಇಷ್ಟರ ಮಧ್ಯೆ ಕಾಂಗ್ರೆಸ್​ನೊಳಗೆ ಈ ಬಾರಿ ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ದಲಿತ, ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ ಬದಲಿಗೆ ಕುರುಬರೊಬ್ಬರಿಗೆ ನೀಡಬೇಕೆಂಬ ಒತ್ತಾಯವೂ ಕೇಳಿ ಬಂದಿದೆ.

   
  First published: