ನಾವೆಲ್ಲ ಅಣ್ಣತಮ್ಮಂದಿರು, ಬನ್ನಿ ಕುಳಿತು ಮಾತಾಡೋಣ; ಅತೃಪ್ತ ಶಾಸಕರಿಗೆ ಡಿಕೆ ಶಿವಕುಮಾರ್​ ಮನವಿ

 ಮುನಿಸು ತೊರೆದು ಬಂದು ಸರ್ಕಾರದ ಜೊತೆಯಲ್ಲಿರಿ. ಕುಳಿತು ಸಂಧಾನ ನಡೆಸಿ, ನಿಮಗೆ ಏನು ಬೇಕು ಕೇಳಿ ಪಡೆಯಿರಿ. ಇದು ನಿಮ್ಮನೆ, ನೀವೇ ಕಟ್ಟಿದ ಮನೆ, ಬನ್ನಿ. ಅದು ಬಿಟ್ಟು ಯಾಕೆ ಎಲ್ಲಿಯೋ ಹೋಗಿ ಪ್ರಯತ್ನ ಮಾಡುತ್ತೀರಾ.

Seema.R | news18
Updated:July 16, 2019, 6:33 PM IST
ನಾವೆಲ್ಲ ಅಣ್ಣತಮ್ಮಂದಿರು, ಬನ್ನಿ ಕುಳಿತು ಮಾತಾಡೋಣ; ಅತೃಪ್ತ ಶಾಸಕರಿಗೆ ಡಿಕೆ ಶಿವಕುಮಾರ್​ ಮನವಿ
ಡಿಕೆ ಶಿವಕುಮಾರ್
  • News18
  • Last Updated: July 16, 2019, 6:33 PM IST
  • Share this:
ಬೆಂಗಳೂರು (ಜು.16):  ಒಂದೇ ಪಕ್ಷದ ನಾವೆಲ್ಲ ಅಣ್ಣತಮ್ಮಂದಿರು. ನಿಮ್ಮ ಸಮಸ್ಯೆ ಏನೇ ಇದ್ದರೂ ಕುಳಿತು ಮಾತನಾಡೋಣ. ಬಿಜೆಪಿಯವರ ಮಾತಿಗೆ ನಿಮ್ಮ ಜೀವನ ಹಾಳು ಮಾಡಿಕೊಳ್ಳಬೇಡಿ. ವಾಪಸ್ಸು ಬನ್ನಿ ಎಂದು  ಸಚಿವ ಡಿಕೆ ಶಿವಕುಮಾರ್​ ಅತೃಪ್ತ ಶಾಸಕರಿಗೆ ಮನವಿ ಮಾಡಿದ್ದಾರೆ. 

ಸುಪ್ರೀಂ ತೀರ್ಪಿನ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ನ್ಯಾಯಾಲಯದಿಂದ ನಮಗೆ ಅನ್ಯಾಯವಾಗುವುದಿಲ್ಲ ಎಂಬ ನಂಬಿಕೆ ವಿಶ್ವಾಸ ನಮಗಿದೆ. ನಮ್ಮ ಸರ್ಕಾರ ಯಾವುದೇ ತಪ್ಪು ಮಾಡಿಲ್ಲ. ಇದನ್ನು ಶಾಸಕರು ಕೂಡ ಗಮನದಲ್ಲಿ ಇಟ್ಟುಕೊಳ್ಳಬೇಕು. ಬಿಜೆಪಿಯವರು ನಿಮಗೆ ಯಾಮಾರಿಸುತ್ತಿದ್ದಾರೆ. ನ್ಯಾಯಾಲಕ್ಕೂ ಕರೆದುಕೊಂಡು ಬರತಂದೆ ತಡೆ ಹಿಡಿಯುತ್ತಿದ್ದಾರೆ. ಸುಮ್ನೆ ಯಾಕೆ ನಿಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದೀರಾ. ಈ ವಿಚಾರವನ್ನು ಅರ್ಥ ಮಾಡಿಕೊಳ್ಳಿ ಎಂದರು.

ಮುನಿಸು ತೊರೆದು ಬಂದು ಸರ್ಕಾರದ ಜೊತೆಯಲ್ಲಿರಿ. ಕುಳಿತು ಸಂಧಾನ ನಡೆಸಿ, ನಿಮಗೆ ಏನು ಬೇಕು ಕೇಳಿ ಪಡೆಯಿರಿ. ಇದು ನಿಮ್ಮನೆ, ನೀವೇ ಕಟ್ಟಿದ ಮನೆ, ಬನ್ನಿ. ಅದು ಬಿಟ್ಟು  ಯಾಕೆ ಎಲ್ಲಿಯೋ ಹೋಗಿ ಪ್ರಯತ್ನ ಮಾಡುತ್ತೀರಾ. ನಾವೆಲ್ಲರೂ ಅಣ್ಣ ತಮ್ಮಂದಿರು. ಕೂತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳೋಣ. ಯಾವುದೇ ತ್ಯಾಗಕ್ಕೂ ಕೂಡ ನಾವು ಸಿದ್ದರಿದ್ದೇವೆ ಎಂದು ಅತೃಪ್ತ ಶಾಸಕರಿಗೆ ಮನವಿ ಮಾಡಿದರುಅತೃಪ್ತ ಶಾಸಕರು ಸಲ್ಲಿಸಿರುವ ಅರ್ಜಿ ಕುರಿತು ನಾಳೆ ನ್ಯಾಯಾಲಯ ನೀಡುವ ತೀರ್ಪನ್ನು ಗೌರವಿಸುತ್ತೇವೆ. ಸ್ಪೀಕರ್​ ನಿರ್ಣಯಕ್ಕೆ ನಮ್ಮ ಸಮ್ಮತಿ ಇದೆ  ನಮ್ಮ ಪರ ತೀರ್ಪು ಬರಲಿದೆ ಎಂಬ ನಿರೀಕ್ಷೆ ಇದೆ ಎಂದರು.

ಇದನ್ನು ಓದಿ: ಸುಪ್ರೀಂ ತೀರ್ಪಿನ ಬಳಿಕ ಬಿಜೆಪಿ ನಾಯಕರಲ್ಲಿ ಹೆಚ್ಚಿದ ಆತಂಕ

ಪ್ರತಿಬಾರಿಯೂ ಅತೃಪ್ತರು ಬಂಡಾಯವೆದ್ದಾಗ ಮೈತ್ರಿ ಸರ್ಕಾರ ಉಳಿಸಲು ಡಿಕೆ ಶಿವಕುಮಾರ್​ ಶತಪ್ರಯತ್ನ ನಡೆಸುತ್ತಲೇ ಬಂದಿದ್ದಾರೆ. ಆದರೆ ಈ ಬಾರಿ ಅತೃಪ್ತರ ಮನವೊಲಿಕೆಗೆ ಮುಂಬಯಿಗೆ ತೆರಳಿದ್ದ ಸಚಿವ ಡಿಕೆ ಶಿವಕುಮಾರ್​ ಅವರ ಭೇಟಿ ಮಾಡಲು ಸಾಧ್ಯವಾಗದೇ ಇಡೀ ದಿನ ಹೋಟೆಲ್​ ಹೊರಗೆ ಮುಂಬೈ ರಸ್ತೆಯಲ್ಲಿಯೇ ನಿಂತಿದ್ದರು. ಇದಾದ ಬಳಿಕವೂ ಅವರನ್ನು ಸೆಳೆಯಲು ಡಿಕೆ ಶಿವಕುಮಾರ್​ ಪ್ರಯತ್ನಿಸುತ್ತಲೇ ಇದ್ದಾರೆ.
First published:July 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ