HOME » NEWS » State » DK SHIVKUMAR APOLOGIZE FOR SEPARATE LINGAYATH RELIGION CONTROVERSY

ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರದಲ್ಲಿ ತಪ್ಪು ಮಾಡಿದ್ವಿ, ಕ್ಷಮಿಸಿ ನಮ್ಮನ್ನ; ಡಿಕೆ ಶಿವಕುಮಾರ್​

Seema.R | news18
Updated:October 18, 2018, 10:19 AM IST
ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರದಲ್ಲಿ ತಪ್ಪು ಮಾಡಿದ್ವಿ, ಕ್ಷಮಿಸಿ ನಮ್ಮನ್ನ; ಡಿಕೆ ಶಿವಕುಮಾರ್​
ಡಿಕೆ ಶಿವಕುಮಾರ್​​
  • News18
  • Last Updated: October 18, 2018, 10:19 AM IST
  • Share this:
ನ್ಯೂಸ್​ 18 ಕನ್ನಡ

ಗದಗ (ಅ.18): ಪ್ರತ್ಯೇಕ ಲಿಂಗಾಯತ ವೀರಶೈವ ಧರ್ಮ ರಚನೆ ಕುರಿತು ಹೋರಾಡಿದ ನಮ್ಮ  ಹಿಂದಿನ ಕಾಂಗ್ರೆಸ್​ ಸರ್ಕಾರ  ಈ ವಿಚಾರದಲ್ಲಿ ತಪ್ಪು ಮಾಡಿದ್ದೇವೆ. ಈ ಬಗ್ಗೆ ಜನರು ನಮ್ಮನ್ನು ಕ್ಷಮಿಸಬೇಕು ಎಂದು ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್​ ಕ್ಷಮಾಪಣೆ ಕೇಳಿದರು.

ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿರಂಭಾಪುರಿ ಶ್ರೀಗಳ ದಸರಾ ಧರ್ಮಸಮ್ಮೇಳನದಲ್ಲಿ ಭಾಗಿಯಾಗಿ   ಮಾತನಾಡಿದ ಅವರು, ಪ್ರತ್ಯೇಕ ಲಿಂಗಾಯತ ಧರ್ಮದ ಕುರಿತು ಮಾತನಾಡಿದರು.  2018ರ ರಾಜ್ಯ ವಿಧಾನ ಸಭೆಗೂ ಮುನ್ನ ಕೇಳಿ ಬಂದಿದ್ದ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸಂವಿಧಾನಿಕ ಮಾನ್ಯತೆ ನೀಡಲು ಈ ಹಿಂದಿನ ಕಾಂಗ್ರೆಸ್​ ಸರ್ಕಾರ ಮುಂದಾಗಿತ್ತು. ಆದರೆ ಸರ್ಕಾರ, ರಾಜಕಾರಣಿಗಳು ಧರ್ಮದ ವಿಚಾರಕ್ಕೆ ಕೈ ಹಾಕಬಾರದು ಎಂಬುದು ನಮಗೆ  ತಿಳಿಯಿತು.  ಈ ವಿಚಾರದಲ್ಲಿ ನಾವು ಎಡವಿದೆವು. ನಮ್ಮ ಸರ್ಕಾರದಿಂದ ದೊಡ್ಡ ತಪ್ಪಾಯಿತು ಎಂದು ಇದೇ ಮೊದಲಬಾರಿ ಈ ಕುರಿತು ತಪ್ಪೊಪ್ಪಿಕೊಂಡರು.

ಧರ್ಮದ ವಿಚಾರದಲ್ಲಿ ನಾವು ಮಾಡಿದ ಕಾರ್ಯ ಒಳ್ಳೆಯದಲ್ಲ. ಇದರಿಂದಾಗಿ ನಾನು ಹೃದಯತುಂಬಿ ಕ್ಷಮೆ ಕೇಳುತ್ತಿದ್ದು  ಎಂದು ನೆರೆದ ಜನರ ಮುಂದೆ ಬಹಿರಂಗವಾಗಿ ಕ್ಷಮೆಯಾಚಿಸಿದರು.

ಈ ಹಿಂದಿನ ಸರ್ಕಾರದಿಂದ ಯಾಕೆ ಈ ಪ್ರಯತ್ನ 

ರಾಜ್ಯದಲ್ಲಿ ಅತಿ ಹೆಚ್ಚಿನ  ಮತ ಬ್ಯಾಂಕ್​ಗಳಾದ ಪ್ರತ್ಯೇಕ ಲಿಂಗಾಯತ ಧರ್ಮದ ಕಿಚ್ಚು ದಶಕಗಳಿಂದ ಇತ್ತು. ಉತ್ತರ ಕರ್ನಾಟಕದಲ್ಲಿ ಬಿಜೆಪಿ ಮತಬ್ಯಾಂಕ್​ ಗಳಾಗಿರುವ ಈ ಲಿಂಗಾಯತ ಧರ್ಮವನ್ನು ತಮ್ಮತ್ತ ಸೆಳೆಯುವ ಉದ್ದೇಶದಿಂದಾಗಿ ಕಾಂಗ್ರೆಸ್​ ಸರ್ಕಾರ ಈ ವಿಚಾರಕ್ಕೆ ಮರು ಜೀವ ತುಂಬಿತು.

ಈ ಹಿಂದಿನ ಸರ್ಕಾರದ ಜಲಸಂಪನ್ಮೂಲ ಸಚಿವರಾಗಿದ್ದ ಎಂ.ಬಿ ಪಾಟೀಲ್​ ನೇತೃತ್ವದಲ್ಲಿ ಈ ವಿಚಾರದಲ್ಲಿ ಸರ್ಕಾರ ಪರೋಕ್ಷವಾಗು ಈ ಪ್ರತಿಭಟನೆಗೆ ಮುಂದಾಯಿತು.  ವೀರಶೈವಗಳ ಪಂಚ ಪೀಠದ ಧರ್ಮ ಹಾಗೂ ಬಸವಣ್ಣ ಸ್ಥಾಪಿಸಿದ ಧರ್ಮಗಳು ಪ್ರತ್ಯೇಕವಾಗಿದೆ. ಇದರಿಂದಾಗಿ ನಮಗೆ ಪ್ರತ್ಯೇಕ ಲಿಂಗಾಯತ ಧರ್ಮದ ಸಂವಿಧಾನಿಕ ಸ್ಥಾನಮಾನ ನೀಡಬೇಕು ಎಂದು ಮಾತೇ ಮಹಾದೇವಿ ಸೇರಿದಂತೆ ಅನೇಕ ಮಠಾಧೀಶರು ಕೂಗು ಎತ್ತಿದ್ದರು.ಆದರೆ ರಂಭಾಪುರಿ ಸೇರಿದಂತೆ ಪಂಚ ಸದಸ್ಯ ಪೀಠಗಳು ಸರ್ಕಾರದ ನಿಲುವಿಗೆ ವಿರೋಧ ವ್ಯಕ್ತಪಡಿಸಿ, ಇದು ರಾಜಕೀಯ ಮತ ಪಡೆಯಲು ಸರ್ಕಾರ ನಡೆಸಿರುವ ಧರ್ಮ ಒಡೆಯುವ ತಂತ್ರ ಎಂದು ಆರೋಪಿಸಿದವು.

ಶ್ರೀರಾಮುಲು ಮೊದಲು ತಮ್ಮ ಅಡ್ರೆಸ್ ಹುಡುಕಿಕೊಳ್ಳಲಿ; ಸಚಿವ ಎಚ್​.ಡಿ. ರೇವಣ್ಣ ವ್ಯಂಗ್ಯ

ಚುನಾವಣೆಗೂ ಭಾರೀ ಸದ್ದು ಮಾಡಿದ್ದ ಈ ವಿವಾದ ಕುರಿತು ಸರ್ಕಾರ ಕುರಿತು ಕೇಂದ್ರ ಸರ್ಕಾರಕ್ಕೂ ಸಹ ರಾಜ್ಯ ಸರ್ಕಾರ ಶಿಫಾರಸ್ಸು ಕಳಿಸಿತ್ತು.

ಪ್ರತ್ಯೇಕ ಲಿಂಗಾಯತ ಅಸ್ತ್ರವನ್ನು ಇಟ್ಟು ಕೊಂಡು ಪ್ರತಿಭಟನೆ ನಡೆಸಿದ ಸಚಿವ ಎಂಬಿ ಪಾಟೀಲ್​ ಸೋಲುವುದರೊಂದಿಗೆ, ಕಾಂಗ್ರೆಸ್​ ಕೂಡ ಲಿಂಗಾಯತ ಮತ ಸೆಳೆಯುವಲ್ಲಿ ಚುನಾವಣೆಯಲ್ಲಿ ಸೋತು, ಬಹುಮತ ಪಡೆಯುವಲ್ಲಿ ವಿಫಲವಾಯಿತು.
First published: October 18, 2018, 10:14 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading