ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ; ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಸ್ಪಷ್ಟನೆ

1985ರಿಂದಲೂ ಕಾಂಗ್ರೆಸ್​​ ಪಕ್ಷದಲ್ಲಿ ಇದ್ದೇನೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ, ಮಾಜಿ ಸಿಎಂ ಬಂಗಾರಪ್ಪ ಕಾಲದಿಂದಲೂ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಈಗಲೂ‌ ಪಕ್ಷದ ಹೈಕಮಾಂಡ್ ಕೊಡುವ ಕೆಲಸ ಮಾಡುತ್ತೇನೆ

news18-kannada
Updated:November 8, 2019, 2:23 PM IST
ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ; ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಸ್ಪಷ್ಟನೆ
ಮಾಜಿ ಸಚಿವ ಡಿ ಕೆ ಶಿವಕುಮಾರ್​ ಹಾಗೂ ಪ್ರ ಪಕ್ಷದ ನಾಯಕ ಸಿದ್ದರಾಮಯ್ಯ
  • Share this:
ಮೈಸೂರು(ನ.08): ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಅವರು ನಮ್ಮ ವಿರೋಧ ಪಕ್ಷದ ನಾಯಕರು, ನಾನು ಅವರ ಕೈಕೆಳಗೆ ಕೆಲಸ ಮಾಡುವ ಕಾರ್ಯಕರ್ತ ಎಂದು ಮಾಜಿ ಸಚಿವ ಡಿ ಕೆ ಶಿವಕುಮಾರ್​ ಹೇಳಿದ್ದಾರೆ.

ನಮ್ಮಿಬ್ಬರ ನಡುವೆ ಯಾವುದೇ ಅಸಮಧಾನವಿಲ್ಲ. ಪಕ್ಷ ನನಗೆ ಕೊಟ್ಟ ಕೆಲಸವನ್ನು ತಲೆ ಮೆಲೆ ಹೊತ್ತುಕೊಂಡು ಮಾಡುತ್ತೇನೆ. ಅದು ಯಾವ ಕೆಲಸವಾದರೂ ನನಗೆ ಇವತ್ತಿನವರೆಗೆ ಎಲ್ಲ ಸ್ಥಾನಮಾನ‌ ಕೊಟ್ಟಿರೋದು ಹೈಕಮಾಂಡ್. ಉಪಚುನಾವಣೆಯಲ್ಲಿ ಪಕ್ಷ ಯಾವುದೇ ಜವಾಬ್ದಾರಿ ವಹಿಸಿಲ್ಲ. ನನಗೆ ಸ್ಥಾನಮಾನ ನೀಡುವ ಬಗ್ಗೆ ಪಕ್ಷದ ಹೈಕಮಾಂಡ್ ಅಂತಿಮ ತೀರ್ಮಾನ ಮಾಡುತ್ತೆ ಎಂದರು.

ವಿಧಾನಸೌಧದಲ್ಲೂ ತಕ್ಕಡಿ ಇರುತ್ತೆ. ತಕ್ಕಡಿ ತೂಗುತ್ತಿರುತ್ತದೆ. ಆದರೆ  ನ್ಯಾಯ ಯಾವ ಕಡೆ ಇದೆಯೋ ಆ ಕಡೆ ತೂಗುತ್ತದೆ. ಕಾಲ ಬಂದಾಗ ಎಲ್ಲದಕ್ಕೂ ಉತ್ತರ ಸಿಗುತ್ತೆ ಎಂದು  ಮಾರ್ಮಿಕ ಡಿಕೆಶಿ ಉತ್ತರ ನೀಡಿದರು.

ಇದನ್ನೂ ಓದಿ :  ಬೆಳ್ಳಂಬೆಳಿಗ್ಗೆ ಚಾಮುಂಡಿ ದರ್ಶನ ಪಡೆದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ

1985ರಿಂದಲೂ ಕಾಂಗ್ರೆಸ್​​ ಪಕ್ಷದಲ್ಲಿ ಇದ್ದೇನೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ, ಮಾಜಿ ಸಿಎಂ ಬಂಗಾರಪ್ಪ ಕಾಲದಿಂದಲೂ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಈಗಲೂ‌ ಪಕ್ಷದ ಹೈಕಮಾಂಡ್ ಕೊಡುವ ಕೆಲಸ ಮಾಡುತ್ತೇನೆ. ನನ್ನ ರಾಷ್ಟ್ರೀಯ ನಾಯಕರು ಯಾವ ಜವಾಬ್ದಾರಿ ಕೊಡುತ್ತಾರೋ ಅದನ್ನು ನಾನು ನಿಭಾಯಿಸುತ್ತೇನೆ ಎಂದು ತಿಳಿಸಿದರು.

ಡಿಕೆಶಿ ಜೊತೆ ದರ್ಶನ ಪಡೆದ ಜಿಟಿ ದೇವೇಗೌಡ

ಮಾಜಿ ಸಚಿವ  ಡಿಕೆಶಿ ಜೊತೆಯಲ್ಲಿ ಮಾಜಿ ಸಚಿವ  ಜಿ ಟಿ ದೇವೇಗೌಡ ಚಾಮುಂಡಿ ದರ್ಶನ ಮಾಡಿ, ಇಬ್ಬರು ನಾಯಕರು ಒಟ್ಟಾಗಿ ಪೂಜೆ ಸಲ್ಲಿಸಿರು. ಇದೇ ಸಂರ್ಭದಲ್ಲಿ ಮಾತನಾಡಿದ ಜಿ ಟಿ ದೇವೇಗೌಡ, ನಾನು ಪ್ರತಿ ಶುಕ್ರವಾರ ಬರ್ತಿನಿ. ಡಿಕೆಶಿಯವರು ಚಾಮುಂಡಿ ಭಕ್ತರು. ಕಳೆದ ಬಾರಿ ಬೆಳ್ಳಿ ಆನೆ ಕೊಟ್ಟಿದ್ದರು. ಹೀಗಾಗಿ ಈ ಬಾರಿಯೂ ಬಂದು ದರ್ಶನ ಮಾಡಿದ್ದಾರೆ. ನಾನು ಇದೆ ಸಂದರ್ಭದಲ್ಲಿ ಬಂದಿದ್ದು ಕಾಕತಾಳಿಯ ಅಷ್ಟೇ ಎಂದರು.ಸೋನಿಯಾ ಗಾಂಧಿ ಆರೋಗ್ಯಕ್ಕಾಗಿ ಡಿಕೆಶಿ ಪೂಜೆ

ನಿನ್ನೆಯಿಂದ ಮೈಸೂರು ಪ್ರವಾಸದಲ್ಲಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಇಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದರು.

ಇಂದು ಚಾಮುಂಡಿ ಬೆಟ್ಟಕ್ಕೆ ತೆರಳಿದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೆಸರಿನಲ್ಲಿ ಅರ್ಚನೆ ಮಾಡುವಂತೆ ಹೇಳಿದರು. ಸೋನಿಯಾ ಗಾಂಧಿ ಅವರ ಆರೋಗ್ಯ ಸುಧಾರಿಸಲಿ ಎಂದು ಪೂಜೆ ಮಾಡಿಸಿದ್ದಾರೆ.

ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ ಹೆಚ್​ ಡಿ ದೇವೇಗೌಡ

ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡರು ಪತ್ನಿ ಜೊತೆ ಮೈಸೂರಿನ ಚಾಮುಂಡೇಶ್ವರಿ ದರ್ಶನ ಪಡೆದರು. ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಸಮಯದಲ್ಲಿ ಕಾರಿನಿಂದ ಇಳಿದ ತಕ್ಷಣ ದೇವೇಗೌಡರನ್ನ ಮಾಜಿ ಸಚಿವ ಡಿ ಕೆ ಶಿವಕುಮಾರ್​ ಭೇಟಿಯಾಗಿ ಮಾತುಕತೆ ನಡೆಸಿದರು. ಇದೇ ಸಂದರ್ಭದಲ್ಲಿ ಡಿ ಕೆ ಶಿವಕುಮಾರ್​ ದೇವೇಗೌಡರ ಕಾಲಿಗೆ ಬಿದ್ದು ನಮಸ್ಕರಿಸಿದರು.

ಗೌಡರ ಕುಟುಬದ ಜೊತೆ ಮುನಿಸು ಮುಂದುವರೆಸಿದ ಜಿ.ಟಿ. ದೇವೇಗೌಡ...

ಇತ್ತೀಚೆಗೆ ಜೆಡಿಎಸ್ ಕಾರ್ಯಕ್ರಮಗಳಿಂದ ದೂರ ಉಳಿದು ಜೆಡಿಎಸ್ ನಾಯಕರ ಜತೆ ಬೇಸರಗೊಂಡಿದ್ದ  ಮಾಜಿ ಸಚಿವ ಜಿ.ಟಿ ದೇವೇಗೌಡರು ಇದೀಗ ದೇವೇಗೌಡರ ಕುಟುಬದ ಜೊತೆ ಮುನಿಸು ಮುಂದುವರೆಸಿದ್ದಾರೆ. ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಹೆಚ್.ಡಿ.ದೇವೇಗೌಡರನ್ನು ಜಿಟಿ ದೇವೇಗೌಡರು ಭೇಟಿ ಮಾಡದೆ ಹಾಗೆಯೇ ತೆರಳಿದ್ದಾರೆ. ದೇವೇಗೌಡರ ಆಗಮನದ ವಿಷಯ ತಿಳಿದ ಜಿಟಿ ದೇವೇಗೌಡರು ಅಲ್ಲಿಂದ ಬಹುಬೇಗ  ಕಾಲ್ಕಿತ್ತಿದ್ದಾರೆ. ಡಿಕೆಶಿ ಜೊತೆ ದೇವಿಯ ದರ್ಶನ ಪಡೆದು ಒಂದು ನಿಮಿಷವೂ ನಿಲ್ಲದೆ ತೆರಳಿದ ಪ್ರಸಂಗ ನಡೆಯಿತು. 
First published:November 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading