ಒಕ್ಕಲಿಗರ ಸಮುದಾಯ ಡಿಕೆಶಿ ಬೆನ್ನಿಗೆ ನಿಲ್ಲಬೇಕು; ಮಾಜಿ ಶಾಸಕ ಚಲುವರಾಯಸ್ವಾಮಿ ಕರೆ

ಮೈತ್ರಿ ಸರ್ಕಾರ ಇದ್ದಾಗ ಡಿಕೆಶಿ ಹಾಗೂ ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ ಒಂದಾಗಿದ್ದರು. ಅವರಲ್ಲಿ ಒಂದು ಆಪ್ಯಾಯತೆ ಬೆಳೆದಿತ್ತು. ಸಾಕಷ್ಟು ಸಭೆಗಳನ್ನು ಇಬ್ಬರೂ ಒಟ್ಟಿಗೆ ಚರ್ಚೆ ನಡೆಸಿದ್ದಿದೆ. ಈ ವಿಚಾರವಾಗಿಯೂ ಚಲುವರಾಯಸ್ವಾಮಿ ಮಾತನಾಡಿದ್ದಾರೆ.

Rajesh Duggumane | news18-kannada
Updated:October 28, 2019, 1:27 PM IST
ಒಕ್ಕಲಿಗರ ಸಮುದಾಯ ಡಿಕೆಶಿ ಬೆನ್ನಿಗೆ ನಿಲ್ಲಬೇಕು; ಮಾಜಿ ಶಾಸಕ ಚಲುವರಾಯಸ್ವಾಮಿ ಕರೆ
ಚೆಲುವರಾಯಸ್ವಾಮಿ
  • Share this:
ನಮ್ಮ ರಾಜ್ಯದ ನಾಯಕ ಡಿಕೆ ಶಿವಕುಮಾರ್​ ಅವರು ಇಡಿ ಹಾಗೂ ಐಟಿಯಿಂದ ಅತಿ ಹೆಚ್ಚು ಕಿರುಕುಳ ಅನುಭವಿಸಿದ್ದಾರೆ. ಅವರು ಕಾನೂನು ಹೋರಾಟದಿಂದ ಹೊರಬರುತ್ತಾರೆ. ಅವರ ಬಳಿ ಬೇರೆ ರೀತಿಯ ಶಕ್ತಿ ಇದೆ. ಹೀಗಾಗಿ ಒಕ್ಕಲಿಗ ಸಮುದಾಯ ಅವರ ಬೆನ್ನಿಗೆ ನಿಲ್ಲಬೇಕು ಎಂದು ಕಾಂಗ್ರೆಸ್​ ಮಾಜಿ ಶಾಸಕ ಚಲುವರಾಯಸ್ವಾಮಿ ಕರೆ ನೀಡಿದರು.

ಬೆಂಗಳೂರಿನಲ್ಲಿ ಮಾತನಾಡಿದ ಚಲುವರಾಯಸ್ವಾಮಿ, “ಇಡಿ, ಐಟಿಯಿಂದ ಹೆಚ್ಚು ಟಾರ್ಗೆಟ್ ಆದವರು ಡಿಕೆಶಿ. ಈ ಎಲ್ಲ ಪ್ರಕರಣದಿಂದ ಅವರು ಹೊರಬರುತ್ತಾರೆ. ನಮ್ಮ ಸಮುದಾಯದಲ್ಲಿ ಡಿಕೆಶಿ ಎತ್ತರಕ್ಕೆ ಬೆಳೆದವರು. ಅವರು ಸಮಾಜದಿಂದ ಸಹಾಯ ಪಡೆದು ಸುಮ್ಮನಾಗಿಲ್ಲ. ಅನೇಕರಿಗೆ ಸಹಾಯ ಮಾಡಿದ್ದಾರೆ. ಹೀಗಾಗಿ ಡಿಕೆ ಶಿವಕುಮಾರ್ ಹಿಂದೆ ಒಕ್ಕಲಿಗ ಸಮುದಾಯ ನಿಲ್ಲಬೇಕು, ನಿಂತಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೈತ್ರಿ ಸರ್ಕಾರ ಇದ್ದಾಗ ಡಿಕೆಶಿ ಹಾಗೂ ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ ಒಂದಾಗಿದ್ದರು. ಅವರಲ್ಲಿ ಒಂದು ಆಪ್ಯಾಯತೆ ಬೆಳೆದಿತ್ತು. ಸಾಕಷ್ಟು ಸಭೆಗಳನ್ನು ಇಬ್ಬರೂ ಒಟ್ಟಿಗೆ ಚರ್ಚೆ ನಡೆಸಿದ್ದಿದೆ. ಈ ವಿಚಾರವಾಗಿಯೂ ಚಲುವರಾಯಸ್ವಾಮಿ ಮಾತನಾಡಿದ್ದಾರೆ. “ಮೈತ್ರಿ ಸರ್ಕಾರ ಇದ್ದಾಗ ಕುಮಾರಸ್ವಾಮಿ ಮತ್ತು ಡಿಕೆಶಿ ಒಂದಾಗಿದ್ದರು. ಅದೇ ಸಂಬಂಧ ಈಗಲು ಇದೆ. ಆದರೆ, ಸಂಬಂಧ ಬೇರೆ, ರಾಜಕಾರಣ ಬೇರೆ,” ಎಂದರು.

ಜೆಡಿಎಸ್​ ಧ್ವಜ ಹಿಡಿದ ವಿಚಾರವಾಗಿ ಸಿದ್ದರಾಮಯ್ಯ ಅಸಮಾಧಾನ ಹೊರ ಹಾಕಿದ್ದ ವಿಡಿಯೋ ವರೈಲ್​ ಆಗಿತ್ತು. ಈ ವಿಚಾರವಾಗಿ ಸಿದ್ದರಾಮಯ್ಯ ಮಾತನಾಡಿದ್ದಾರೆ. “ವಿಡಿಯೋ ವೈರಲ್ ಆದಮೇಲೆ ಪಿರಿಯಾಪಟ್ಟಣ ವೆಂಕಟೇಶ್​ ಜೊತೆ ಮಾತಾಡಿದ್ದೇನೆ. ಯಾರೋ ವಿಡಿಯೋ ಮಾಡಿ ಸ್ಟೇಟಸ್ ಹಾಕಿಕೊಂಡಿದ್ದಾರೆ. ಅದು ವೈರಲ್ ಆಗಿದೆ. ಕಾಂಗ್ರೆಸ್​ ಜೊತೆ ಹೋಗುವುದಿಲ್ಲ ಎಂದು ಈಗಲೇ ಕುಮಾರಸ್ವಾಮಿ, ದೇವೇಗೌಡರು ಸ್ಪಷ್ಟಪಡಿಸಿದ್ದಾರೆ. ಆದರೆ, ಅದನ್ನು ಸಿದ್ದರಾಮಯ್ಯ ಡಿಕೆ ಶಿವಕುಮಾರ್ ವಿರುದ್ಧ ಮಾತಾಡಿದ್ದಾರೆ ಅನ್ನೋ ರೀತಿಯಲ್ಲಿ ಬಿಂಬಿತವಾಗ್ತಿದೆ,” ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಸಿದ್ದರಾಮಯ್ಯಗೆ ನನ್ನ ಮೇಲೆ ಲವ್ ಜಾಸ್ತಿ; ಜೆಡಿಎಸ್ ಧ್ವಜ ಹಿಡಿದ ವಿಚಾರದಲ್ಲಿ ಮೌನ ಮುರಿದ ಡಿಕೆಶಿ

ಎಲ್ಲರೂ ಒಂದಾಗಿ ಪಕ್ಷ ಕಟ್ಟುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದ ಚಲುವರಾಯಸ್ವಾಮಿ, “‌ಮುಂದಿನ ದಿನದಲ್ಲಿ ಡಿಕೆ ಶಿವಕುಮಾರ ಹಾಗೂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಹಾಗೂ ಪರಮೇಶ್ವರ್ ಎಲ್ಲರೂ ಒಂದಾಗಿ ಪಕ್ಷ ಕಟ್ಟುತ್ತಾರೆ. ಕಾಂಗ್ರೆಸ್​ಅನ್ನು ಮತ್ತೆ ಅಧಿಕಾರಕ್ಕೆ ತರುವ ಎನ್ನುವ ತೀರ್ಮಾನ ಮಾಡಿದ್ದಾರೆ,” ಎಂದು ಹೇಳಿದರು.

First published:October 28, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading