HOME » NEWS » State » DK SHIVAKUMARS MOTHER GOWRAMMA TAKES BACK PETITION OF QUASHING ED SUMMONS VS

ಇಡಿ ಸಮನ್ಸ್: ಅರ್ಜಿ ಹಿಂಪಡೆದ ಡಿಕೆ ಶಿವಕುಮಾರ್ ತಾಯಿ ಗೌರಮ್ಮ

ಗೌರಮ್ಮ ತನಗೆ ವಯಸ್ಸಾಗಿದೆ ಎಂಬ ಕಾರಣವನ್ನು ನೀಡಿದ್ದರು. ಹಿಂದಿನ ವಿಚಾರಣೆಯಲ್ಲಿ ಜಾರಿ ನಿರ್ದೇಶನಾಲಯದವರು ಗೌರಮ್ಮಗೆ ವಿನಾಯಿತಿ ನೀಡಲು ಒಪ್ಪಿಕೊಂಡಿದ್ದರು.

news18
Updated:December 12, 2019, 2:09 PM IST
ಇಡಿ ಸಮನ್ಸ್: ಅರ್ಜಿ ಹಿಂಪಡೆದ ಡಿಕೆ ಶಿವಕುಮಾರ್ ತಾಯಿ ಗೌರಮ್ಮ
ಡಿಕೆಶಿ ತಾಯಿ ಗೌರಮ್ಮ ಮತ್ತು ಹೆಂಡತಿ ಉಷಾ
  • News18
  • Last Updated: December 12, 2019, 2:09 PM IST
  • Share this:
ನವದೆಹಲಿ(ಡಿ. 12): ಡಿಕೆ ಶಿವಕುಮಾರ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಇಡಿ ನೋಟೀಸ್ ಪ್ರಶ್ನಿಸಿ ದೆಹಲಿ ಹೈಕೋರ್ಟ್​ನಲ್ಲಿ ತಾನು ಸಲ್ಲಿಸಿದ್ದ ಅರ್ಜಿಯನ್ನು ಡಿಕೆಶಿ ತಾಯಿ ಗೌರಮ್ಮ ವಾಪಸ್ ಪಡೆದಿದ್ದಾರೆ. ಬೆಂಗಳೂರಿನಲ್ಲೇ ಗೌರಮ್ಮ ಅವರ ವಿಚಾರಣೆ ನಡೆಸುವುದಾಗಿ ಜಾರಿ ನಿರ್ದೇಶನಾಲಯ ಒಪ್ಪಿಕೊಂಡಿದೆ. ಈ ಹಿನ್ನೆಲೆಯಲ್ಲಿ ಗೌರಮ್ಮ ತಮ್ಮ ಅರ್ಜಿಯನ್ನು ವಾಪಸ್ ಪಡೆದುಕೊಂಡಿದ್ಧಾರೆ. ಆದರೆ, ಇಡಿ ನೋಟೀಸ್ ರದ್ದು ಕೋರಿ ಉಷಾ ಶಿವಕುಮಾರ್ ಹಾಗೂ ಮತ್ತೊಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ದೆಹಲಿ ಉಚ್ಚ ನ್ಯಾಯಾಲಯ ಡಿ. 18ಕ್ಕೆ ಮುಂದೂಡಿದೆ. ದೆಹಲಿಯ ಹೈಕೋರ್ಟ್​ನ ನ್ಯಾ| ಬ್ರಿಜೇಶ್ ಸೇಠಿ ಅವರ ಏಕ ಸದಸ್ಯ ನ್ಯಾಯಪೀಠದಲ್ಲಿ ಈ ಅರ್ಜಿಗಳ ವಿಚಾರಣೆ ನಡೆಯುತ್ತಿದೆ.

ಡಿಕೆಶಿ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ವಿಚಾರಣೆಗೆ ದೆಹಲಿಯ ಇಡಿ ಕಚೇರಿಗೆ ಹಾಜರಾಗಬೇಕು ಎಂದು ಡಿಕಶಿ ತಾಯಿ ಗೌರಮ್ಮ, ಪತ್ನಿ ಉಷಾ ಹಾಗೂ ಮತ್ತೊಬ್ಬರಿಗೆ ಇಡಿ ನೋಟೀಸ್ ನೀಡಿತ್ತು. ಆದರೆ, ವಿಚಾರಣೆಗೆ ದೆಹಲಿಯವರೆಗೂ ಬರಲು ಸಾಧ್ಯವಾಗುವುದಿಲ್ಲ. ಬೆಂಗಳೂರಿನಲ್ಲೇ ವಿಚಾರಣೆ ನಡೆಸಲು ಅವಕಾಶ ಮಾಡಿಕೊಡಿ ಎಂದು ಈ ಮೂವರೂ ಕೂಡ ದೆಹಲಿ ಹೈಕೋರ್ಟ್​ಗೆ ಮನವಿ ಸಲ್ಲಿಸಿದ್ದರು.

ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಲಾಬಿ ಮಾಡುವ ಅವಶ್ಯಕತೆ ನನಗಿಲ್ಲ; ಸಿಡಿಮಿಡಿಗೊಂಡ ಡಿಕೆ ಶಿವಕುಮಾರ್

ಗೌರಮ್ಮ ತನಗೆ ವಯಸ್ಸಾಗಿದೆ ಎಂಬ ಕಾರಣವನ್ನು ನೀಡಿದ್ದರು. ಹಿಂದಿನ ವಿಚಾರಣೆಯಲ್ಲಿ ಜಾರಿ ನಿರ್ದೇಶನಾಲಯದವರು ಗೌರಮ್ಮಗೆ ವಿನಾಯಿತಿ ನೀಡಲು ಒಪ್ಪಿಕೊಂಡಿದ್ದರು. ಗೌರಮ್ಮ ದೆಹಲಿಯವರೆಗೂ ಬರುವುದು ಬೇಡ. ತಾವೇ ಬೆಂಗಳೂರಿಗೆ ಹೋಗಿ ವಿಚಾರಣೆ ನಡೆಸುತ್ತೇವೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಕೋರ್ಟ್​ನಲ್ಲಿ ವಿಚಾರಣೆ ಪ್ರಾರಂಭವಾಗುತ್ತಿದ್ದಂತೆಯೇ ಗೌರಮ್ಮ ತಮ್ಮ ಅರ್ಜಿಯನ್ನ ಹಿಂಪಡೆದಿದ್ಧಾರೆ.

ಆದರೆ, ಇನ್ನುಳಿದವರು ಅರ್ಜಿ ವಾಪಸ್ ಪಡೆದಿಲ್ಲ. ಡಿಕೆಶಿ ಹೆಂಡತಿ ಉಷಾ ಸೇರಿದಂತೆ ಉಳಿದವರು ಇಡಿ ವಿಚಾರಣೆಗೆ ದೆಹಲಿಗೆ ಬರಬೇಕೋ ಬೇಡವೋ ಎಂಬುದು ಇಂದು ನಿರ್ಧಾರವಾಗಿಲ್ಲ. ದೆಹಲಿ ನ್ಯಾಯಾಲಯವು ಈ ಅರ್ಜಿಗಳ ವಿಚಾರಣೆಯನ್ನ ಡಿ. 18ಕ್ಕೆ ನಡೆಸಲು ನಿರ್ಧರಿಸಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

Published by: Vijayasarthy SN
First published: December 12, 2019, 2:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading