ತಕ್ಷಣ ಕನಕಪುರಕ್ಕೆ ಮೆಡಿಕಲ್​ ಕಾಲೇಜು ಮಂಜೂರು ಮಾಡಿ: ಇಲ್ಲದಿದ್ದರೆ ನನ್ನ ಹಾದಿಯಲ್ಲಿ ಹೋರಾಟ; ಸಿಎಂಗೆ ಡಿಕೆಶಿ ಎಚ್ಚರ

ಮೈತ್ರಿ ಸರ್ಕಾರ ಅವಧಿಯಲ್ಲಿ ಮಂಜೂರಾಗಿದ್ದ ಕಾಲೇಜ್​ ಅನ್ನು ಚಿಕ್ಕಬಳ್ಳಾಪುರಕ್ಕೆ ನೀಡಲಾಗಿತ್ತು. ಈ ಕುರಿತು ಡಿಕೆ ಶಿವಕುಮಾರ್​ ಆಕ್ಷೇಪಿಸುತ್ತಲೇ ಬಂದಿದ್ದಾರೆ. ಈಗ ಈ ಕುರಿತು ಸಿಎಂ ಯಡಿಯೂರಪ್ಪಗೆ ಲಿಖಿತ ಮನವಿ ಮಾಡಿ, ಕಾಲೇಜ್​ನ್ನು ವಾಪಸ್​ ಮಾಡುವಂತೆ ಕೋರಿದ್ದಾರೆ.

Seema.R | news18-kannada
Updated:December 7, 2019, 3:57 PM IST
ತಕ್ಷಣ ಕನಕಪುರಕ್ಕೆ ಮೆಡಿಕಲ್​ ಕಾಲೇಜು ಮಂಜೂರು ಮಾಡಿ: ಇಲ್ಲದಿದ್ದರೆ ನನ್ನ ಹಾದಿಯಲ್ಲಿ ಹೋರಾಟ; ಸಿಎಂಗೆ ಡಿಕೆಶಿ ಎಚ್ಚರ
ಡಿಕೆ ಶಿವಕುಮಾರ್​
  • Share this:
ಬೆಂಗಳೂರು (ಡಿ.07): ಕನಕಪುರಕ್ಕೆ ಮಂಜೂರು ಆಗಿದ್ದ ಕಾಲೇಜ್​ಅನ್ನು ಹಿಂಪಡೆದಿರುವ ಬಿಎಸ್​ ಯಡಿಯೂರಪ್ಪ ನೇತೃತ್ವದ ಸರ್ಕಾರ ಶೀಘ್ರದಲ್ಲಿಯೇ ಅದನ್ನು ವಾಪಸ್​ ನೀಡಬೇಕು ಇಲ್ಲವಾದರೆ, ಹೋರಾಟ ನಡೆಸಲಾಗುವುದು ಎಂದು ಕನಕಪುರ ಶಾಸಕ ಡಿಕೆಶಿವಕುಮಾರ್​ ಎಚ್ಚರಿಕೆ ನೀಡಿದ್ದಾರೆ.

ಈ ಹಿಂದೆ ಮೈತ್ರಿ ಸರ್ಕಾರ ಅವಧಿಯಲ್ಲಿ ಮಂಜೂರಾಗಿದ್ದ ಕಾಲೇಜ್​ ಅನ್ನು ಚಿಕ್ಕಬಳ್ಳಾಪುರಕ್ಕೆ ನೀಡಲಾಗಿತ್ತು. ಈ ಕುರಿತು ಡಿಕೆ ಶಿವಕುಮಾರ್​ ಆಕ್ಷೇಪಿಸುತ್ತಲೇ ಬಂದಿದ್ದಾರೆ. ಈಗ ಈ ಕುರಿತು ಸಿಎಂ ಯಡಿಯೂರಪ್ಪಗೆ ಲಿಖಿತ ಮನವಿ ಮಾಡಿ, ಕಾಲೇಜ್​ನ್ನು ವಾಪಸ್​ ಮಾಡುವಂತೆ ಕೋರಿದ್ದಾರೆ.

dk shivakumar letter 1
ಸಿಎಂಗೆ ಡಿಕೆಶಿ ಬರೆದಿರುವ ಪತ್ರ


ಯಾವುದೇ ಕ್ಯಾಬಿನೆಟ್​ ಇಲ್ಲದೇ ಏಕವ್ಯಕ್ತಿಯಾದ ಸರ್ಕಾರ ನಡೆಸುತ್ತಿದ್ದ ನೀವು ಮಂಜೂರಾಗಿದ್ದ ಆದೇಶವನ್ನು ರಾತ್ರೋರಾತ್ರಿ  ರದ್ದುಗೊಳಿಸಿದಿರಿ. ಹಾಗೇ ಇದನ್ನು ಚಿಕ್ಕಬಳ್ಳಾಪುರಕ್ಕೆ ವರ್ಗಾವಣೆ ಮಾಡಿದ್ದೀರಿ. ನಾನು ಚಿಕ್ಕಬಳ್ಳಾಪುರಕ್ಕೆ ಕಾಲೇಜು ನೀಡುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿಲ್ಲ. ರಾಜ್ಯಕ್ಕೆ ಎಷ್ಟು ಬೇಕಾದರೂ ಮೆಡಿಕಲ್​ ಕಾಲೇಜು ನೀಡುವ ಅಧಿಕಾರ ನಿಮಗೆ ಇದೆ.

ಆದರೆ, ಇನ್ನೇನು ಕಾಲೇಜು ಪ್ರಾರಂಭವಾಗುವ ಸಮಯದಲ್ಲಿ ರದ್ದು ಮಾಡಿದ ಆದೇಶಕ್ಕೆ ನನಗೆ ಆಕ್ಷೇಪವಿದೆ. ಇತ್ತೀಚೆಗೆ ಮಾಗಡಿಯಲ್ಲಿ ಕನಕಪುರಕ್ಕೆ ಮೆಡಿಕಲ್​ ಕಾಲೇಜು ನೀಡುವುದಾಗಿ ನೀವು ಹೇಳಿದ್ದೀರಾ. ಇದನ್ನು ವೃತ್ತ ಪತ್ರಿಕೆಯಲ್ಲಿ ಗಮನಿಸಿದ್ದೇನೆ.

ಇದನ್ನು ಓದಿ: ಉಪಚುನಾವಣಾ ಫಲಿತಾಂಶದ ಬಳಿಕ ದೆಹಲಿಗೆ ಸಿಎಂ: ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್​ ಜೊತೆ ಚರ್ಚೆ

ಅದರಂತೆ ನಾನು ನಿಮಗೆ ಕಾಲೇನು ವಾಪಸ್​ ಮಾಡಿ ಜೊತೆಗೆ ಭೂಮಿ ಪೂಜೆಗೆ ದಿನಾಂಕ ನಿಗದಿ ಮಾಡಿ ಎಂದಿದ್ದಾರೆ. ಒಂದು ವೇಳೆ ನಿಮ್ಮ ಸರ್ಕಾರ ದ್ವೇಷ ರಾಜಕೀಯ ಮಾಡಬೇಕು ಎಂಬ ಉದ್ದೇಶವನ್ನು ಹೊಂದಿದ್ದರೆ, ಈ ಬಗ್ಗೆ ನನ್ನ ಹಾದಿಯಲ್ಲಿ ಹೋರಾಟ ಮಾಡುತ್ತೇನೆ. ಕನಕಪುರದ ಜನರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದಿದ್ದಾರೆ.
First published: December 7, 2019, 3:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading