ಬಿಜೆಪಿ ನಾಯಕರ ಬೆನ್ನಲ್ಲೆ ರಹಸ್ಯ ಸ್ಥಳಕ್ಕೆ ತೆರಳಿದ ಡಿ.ಕೆ.ಶಿವಕುಮಾರ್

news18
Updated:September 9, 2018, 12:53 PM IST
ಬಿಜೆಪಿ ನಾಯಕರ ಬೆನ್ನಲ್ಲೆ ರಹಸ್ಯ ಸ್ಥಳಕ್ಕೆ ತೆರಳಿದ ಡಿ.ಕೆ.ಶಿವಕುಮಾರ್
ಡಿಕೆ ಶಿವಕುಮಾರ್
news18
Updated: September 9, 2018, 12:53 PM IST
- ರಮೇಶ್ ಹಿರೇಜಂಬೂರು, ನ್ಯೂಸ್ 18 ಕನ್ನಡ

ಬೆಂಗಳೂರು ( ಸೆ,09) :  ಕಳೆದ ಎರಡು ದಿನಗಳಿಂದ ಸಚಿವ ಡಿ.ಕೆ.ಶಿವಕುಮಾರ ಸಹೋದರರಿಗೆ ತಲೆಬಿಸಿಯಾಗಿರುವ ಇಡಿ ಅಧಿಕಾರಿಗಳ ನಮ್ಮನ್ನ ಬಂಧನ ಮಾಡವ ಭೀತಿಯಲ್ಲಿ ರಹಸ್ಯ ಸ್ಥಳವೊಂದಕ್ಕೆ ತೆರಳಿದ್ದಾರೆ ಎನ್ನಲಾಗಿದೆ.

ಇಂದು ಬೆಳಿಗ್ಗೆ 10.15ಕ್ಕೆ ಮಾಧ್ಯಮದವರೊಂದಿಗೆ ಮಾತನಾಡಿ ತಮ್ಮ ಸದಾಶಿವ ನಗರದ ನಿವಾಸದಿಂದ ಸಚಿವ ಡಿ.ಕೆ.ಶಿಕುಮಾರ ತಮ್ಮ ಬೆಂಗಾವಲು ಪಡೆಗಳನ್ನು ಹಾಗೂ ಸರ್ಕಾರಿ ವಾಹನವನ್ನು ಬಿಟ್ಟು ಖಾಸಗಿ ಕಾರಿನಲ್ಲಿ ತೆರಳಿದ್ದಾರೆ. ಕ್ರೆಸೆಂಟ್ ರಸ್ತೆಯ ಸರ್ಕಾರಿ ನಿವಾಸಕ್ಕೂ ಹೋಗದೆ ಎಲ್ಲಿಗೆ ತೆರಳಿದ್ದಾರೆ ಎನ್ನುವ ಬಗ್ಗೆ ಆಪ್ತರಿಗೂ ಯಾವುದೇ ಮಾಹಿತಿಯನ್ನು ನೀಡದೆ ತೆರಳಿದ್ದಾರೆ.

ಸಚಿವರ ಕ್ರೆಸೆಂಟ್ ರಸ್ತೆಯಲ್ಲಿನ ಸರ್ಕಾರಿ ನಿವಾಸಕ್ಕೆ ಬೆಳಿಗ್ಗೆ ಭೇಟಿಗಾಗಿ ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ ಆಗಮಿಸಿದ್ದರು. ಡಿಕೆಶಿ ಇಲ್ಲದೆ ಇರೋದ್ರಿಂದ ವಾಪಸ್ಸಾದರು.

ಇದಕ್ಕೂ ಮುನ್ನ ಬಿಜೆಪಿ ರಾಜ್ಯಾದ್ಯಕ್ಷ ಬಿ.ಎಸ್​.ಯಡಿಯೂರಪ್ಪ ಅವರು ರಹಸ್ಯ ಸ್ಥಳಕ್ಕೆ  ಸಂಸದೆ ಶೋಭಾ ಕರಂದ್ಲಾಜೆ ಜತೆ ತೆರಳಿದ್ದಾರೆ. ರಹಸ್ಯ ಸ್ಥಳದಲ್ಲಿ ಸಂಸದ ಶ್ರೀರಾಮುಲು, ಯಡಿಯೂರಪ್ಪ, ಕರಂದ್ಲಾಜೆ ಸಭೆ ನಡೆಸುವರು ಎಂದು ತಿಳಿದು ಬಂದಿದೆ. ಬೆಂಗಳೂರಿಗೆ ಬಂದಿರುವ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಯಡಿಯೂರಪ್ಪ, ಶ್ರೀರಾಮುಲು ಮಾಡುವ ಸಾಧ್ಯತೆ ಇದೆ.

ಒಟ್ಟಾರೆಯಾಗಿ ಬಿಜೆಪಿ ನಾಯಕರ ರಹಸ್ಯ ಸ್ಥಳಕ್ಕೆ ಹೊದ ಬೆನ್ನಲ್ಲೆ ಸಚಿವ ಡಿ.ಕೆ.ಶಿವಕುಮಾರ ತೆರಳಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.



 

 
First published:September 9, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ