ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು. ಈ ವೇಳೆ ಸಭೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಡಿಕೆ ಶಿವಕುಮಾರ್ ತರಾಟೆಗೆ ತೆಗೆದುಕೊಂಡರು. ಪೊಲೀಸ್ ಇಲಾಖೆಯನ್ನು (Police Department) ಕೇಸರಿಕರಣ ಮಾಡಲು ಹೊರಟಿದ್ದೀರಾ ನೀವು? ನಮ್ಮ ಸರ್ಕಾರದಲ್ಲಿ (Government) ಇದಕ್ಕೆ ಅವಕಾಶ ಕೊಡೋದಿಲ್ಲ. ಮಂಗಳೂರಿನಲ್ಲಿ (Mangaluru) ಪೊಲೀಸರೇ ಕೇಸರಿ ಶಾಲು ಹಾಕ್ತೀರಾ ಅಂದರೆ ಹೇಗೆ? ಈ ಸಭೆಗೂ ಕೇಸರಿ ಶಾಲು ಹಾಕಿಕೊಂಡ ಬರಬೇಕಾಗಿತ್ತು ಅಂತ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ಪೊಲೀಸ್ ಅಧಿಕಾರಿಗಳ ಜೊತೆ ಸಭೆ
ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಿಎಂ ಹಾಗೂ ಡಿಸಿಎಂ ಮಹತ್ವದ ಸಭೆ ನಡೆಸಿದ್ರು. ಈ ವೇಳೆ ಸಿಎಂ ಸಿದ್ದರಾಮಯ್ಯ ಮಾತಿಗೂ ಮುನ್ನ ಡಿಕೆಶಿಯಿಂದಲೇ ಮೊದಲ ಮಾತು ಆರಂಭವಾಯ್ತು. ತಮ್ಮದೇ ಆದ ಮಾತಿನ ಮೂಲಕ ಹಿರಿಯ ಪೊಲೀಸ್ ಅಧಿಕಾರಿ ಗಳನ್ನು ಎಚ್ಚರಿಸಿದ್ರು.
ಬಿಜೆಪಿ ಸರ್ಕಾರ ಹೋಗಿದೆ, ಇವಾಗ ಇರೋದು ನಮ್ಮ ಸರ್ಕಾರ. ಇಷ್ಟು ದಿನ ಬಿಜೆಪಿ ಪರವಾಗಿ ಕೆಲಸ ಮಾಡಿದ್ದು ಸಾಕು, ಇನ್ಮುಂದೆ ಎಚ್ಚರಿಕೆಯಿಂದ ಕೆಲಸ ಮಾಡಿ ಎಂದು ಡಿಕೆಶಿ ಸೂಚನೆ ಕೊಟ್ರು. ಸಿಎಂ ಸಿದ್ದರಾಮಯ್ಯಗಿಂತ ಮೊದಲು ಡಿಕೆ ಶಿವಕುಮಾರ್ ಪೊಲೀಸರಿಗೆ ಖಡಕ್ ಸೂಚನೆ ರವಾನಿಸಿದ್ರು.
ಇದನ್ನೂ ಓದಿ: Siddaramaiah: ಐದು ವರ್ಷವೂ ಸಿದ್ದರಾಮಯ್ಯ ಅವ್ರೇ ಸಿಎಂ! ಕಾಂಗ್ರೆಸ್ ಪಾಳಯದಲ್ಲಿ ಹೊಸ 'ಬಾಂಬ್'!
ಖಾಕಿ ಕೇಸರಿಕರಣ ಮಾಡೋದಕ್ಕೆ ಬಿಡೋದಿಲ್ಲ!
ನಮ್ಮ ಸರಕಾರದಲ್ಲಿ ಪೊಲೀಸ್ ಇಲಾಖೆಯನ್ನ ಕೇಸರಿಕರಣ ಮಾಡಲು ನಾವು ಬಿಡೊಲ್ಲ ಅಂತ ಡಿಕೆ ಶಿವಕುಮಾರ್ ಎಚ್ಚರಿಸಿದ್ರು. PSI ಅಕ್ರಮದಲ್ಲಿ ಒಬ್ಬ ಎಡಿಜಿಪಿ ಪೇಪರ್ ತಿದ್ದುತ್ತಾರೆ ಅಂದರೆ ಇಲಾಖೆ ಎಷ್ಟು ಕೆಟ್ಟು ಹೋಗಿದೆ. ಪೊಲೀಸ್ ಇಲಾಖೆ ಘನತೆಯನ್ನ ಹಾಳು ಮಾಡಿದ್ದೀರ ನೀವು. ಇದನ್ನ ನಾವು ಸಹಿಸೊಲ್ಲ ಅಂತ ಸಭೆಯಲ್ಲಿ ಹೇಳಿದ್ರು.
ನಮ್ಮ ಸರ್ಕಾರದಲ್ಲಿ ಎಲ್ಲವೂ ಕ್ಲೀನ್ ಆಗಬೇಕು
ನಮ್ಮ ಸರ್ಕಾರದಲ್ಲಿ ಎಲ್ಲವೂ ಕ್ಲೀನ್ ಆಗಬೇಕು. ಜನ ದೊಡ್ಡ ಬದಲಾವಣೆ ನಿರೀಕ್ಷೆ ಮಾಡಿದ್ದಾರೆ. ಅದರಂತೆ ಪೊಲೀಸ್ ಇಲಾಖೆಯಲ್ಲಿ ಬದಲಾವಣೆ ಆಗಬೇಕು. ನೀವು ಯಾರು ನಮಗೆ ಹಣ ಕೊಡೋದು ಬೇಡ. ಉತ್ತಮವಾಗಿ ಕೆಲಸ ಮಾಡಿದ್ರೆ ಸಾಕು ಅಂತ ಹಿರಿಯ ಪೊಲೀಸರಿಗೆ ಡಿಸಿಎಂ ಡಿಕೆಶಿವಕುಮಾರ್ ಖಡಕ್ ಸಂದೇಶ ನೀಡಿದ್ರು.
ನಾವು ನಿಮ್ಮ ಜೊತೆ ಇರುತ್ತೇವೆ
ನಿಮ್ಮ ವರ್ತನೆಯಲ್ಲಿ ನೀವು ಬದಲಾಯಿಸಿಕೊಳ್ಳಬೇಕು. ಒಂದು ವೇಳೆ ನೀವು ಬದಲಾಗಲಿಲ್ಲ ಅಂದ್ರೆ ನೀವೇ ಬದಲಾಗುತ್ತೀರ. ಸರ್ಕಾರ ಒಳ್ಳೆಯ ರೀತಿಯಲ್ಲಿ ಸಾಗಲು ಸಹಕರಿಸಿ, ನಾವು ನಿಮ್ಮ ಜೊತೆ ಇರ್ತೀವಿ.. ಜನ ಈ ಸರ್ಕಾರದ ಮೇಲೆ ತುಂಬಾ ನಂಬಿಕೆ ಇಟ್ಟುಕೊಂಡಿದ್ದಾರೆ.. ಅದ್ರಂತೆ ನಡೆದುಕೊಳ್ಳಿ ಎಂದು ತಾಕೀತು ಮಾಡಿದ್ರು.
ನೀವು ಮುಕ್ತವಾಗಿ ಕೆಲ್ಸ ಮಾಡಿ
ನೀವು ಸ್ವತಂತ್ರವಾಗಿ, ಮುಕ್ತವಾಗಿ ಕೆಲಸ ಮಾಡಿ, ನಿಮ್ಮ ಕೆಲಸದಲ್ಲಿ ನಾವು ಯಾವುದೇ ಕಾರಣಕ್ಕೂ ಮಧ್ಯ ಪ್ರವೇಶಿಸುವುದಿಲ್ಲ.. ಸಮಸ್ಯೆಗಳೊಂದಿಗೆ ಜನಸಾಮಾನ್ಯರು ಪೋಲಿಸ್ ಠಾಣೆಗೆ ಬರುತ್ತಾರೆ.. ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಜನರಿಗೆ ವಿಶ್ವಾಸ ಮೂಡುವ ರೀತಿಯಲ್ಲಿ ಕೆಲಸ ಮಾಡಿ ಎಂದು ಪೊಲೀಸ್ ಅಧಿಕಾರಿಗಳಿಗೆ ಡಿಕೆಶಿ ಸೂಚನೆ ನೀಡಿದ್ರು.
ಇದನ್ನೂ ಓದಿ: Siddaramaiah: ಹೂವಿನ ಹಾಸಿಗೆಯಲ್ಲ ಸಿಎಂ ಸ್ಥಾನ! ಸಿದ್ದು ಮುಂದಿದೆ ಸಾಲು-ಸಾಲು ಸವಾಲು!
4 ವರ್ಷ ಏನು ಮಾಡಿದ್ರಿ ಅನ್ನೋದು ಗೊತ್ತಿದೆ
ನಾಲ್ಕು ವರ್ಷ ಬಿಜೆಪಿ ಅಧಿಕಾರದಲ್ಲಿ ಏನು ಮಾಡಿದ್ರಿ ಅಂತ ಗೊತ್ತಿದೆ.. ಆ ತಪ್ಪುಗಳು ಮರುಕಳಿಸಬಾರದು ಎಂದು ಸಭೆಯಲ್ಲಿ ಪೊಲೀಸರಿಗೆ ಡಿಕೆಶಿ ಖಡಕ್ ತಾಕೀತು ಮಾಡಿದ್ರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ