ಮೇಕೆದಾಟು ಯೋಜನಾ ಸ್ಥಳಕ್ಕೆ ಜಲಸಂಪನ್ಮೂಲ ಸಚಿವ ಡಿಕೆಶಿ ಭೇಟಿ

ಮುಳಗಡೆಯಾಗಲಿರುವ ಪ್ರದೇಶಗಳಿಗೆ ಭೇಟಿ ನೀಡಿ ಶೀಘ್ರದಲ್ಲೇ ವಿಸ್ತೃತ ಯೋಜನಾ ವರದಿ ತಯಾರಿಸಿ ಕೇಂದ್ರಕ್ಕೆ ಸಲ್ಲಿಸಲಾಗುವುದು ಡಿಕೆ ಶಿವಕುಮಾರ್ ತಿಳಿಸಿದರು.

Vijayasarthy SN | news18
Updated:December 7, 2018, 9:05 PM IST
ಮೇಕೆದಾಟು ಯೋಜನಾ ಸ್ಥಳಕ್ಕೆ ಜಲಸಂಪನ್ಮೂಲ ಸಚಿವ ಡಿಕೆಶಿ ಭೇಟಿ
ಮೇಕೆದಾಟು ಯೋಜನೆಯ ಸ್ಥಳದಲ್ಲಿ ತಜ್ಞರೊಂದಿಗೆ ಡಿಕೆ ಶಿವಕುಮಾರ್
Vijayasarthy SN | news18
Updated: December 7, 2018, 9:05 PM IST
- ಶ್ಯಾಮ್ ಎಸ್.,

ಮೇಕೆದಾಟು, ಕನಕಪುರ(ಡಿ. 07): ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹಾಗೂ ಅಧಿಕಾರಿಗಳು ತಜ್ಞರೊಂದಿಗೆ ಕನಕಪುರ ಬಳಿಯ ಮೇಕೆದಾಟು ಯೋಜನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. 99 ಮೀಟರ್ ಎತ್ತರವಿರುವ ಅಣೆಕಟ್ಟು ನಿರ್ಮಾಣ ಮಾಡಿದ್ದಲ್ಲಿ 4,500 ಹೆಕ್ಟೇರ್ ಪ್ರದೇಶ ಹಿನ್ನೀರಿನಲ್ಲಿ‌ ಮುಳುಗಡೆಯಾಗಲಿದೆ. 15 ಚಿಕ್ಕಹಳ್ಳಿಗಳನ್ನು ಸ್ಥಳಾಂತರ ಮಾಡಲಾಗುವುದು ಹಾಗೂ ಅಲ್ಲಿನ ರೈತರನ್ನ ಯೋಜನೆಗೆ ಭೂಮಿ ನೀಡುವಂತೆ ಸರ್ಕಾರ ಈಗಾಗಲೇ ಒಪ್ಪಿಸಿದೆ. ಆದ್ರೆ ಈ ಯೋಜನೆಯಿಂದ ಶಿಂಷಾ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಸದ್ಯದಲ್ಲೇ ಡಿಪಿಆರ್ ಸಿದ್ದಪಡಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಸಚಿವ ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದರು.

ಇನ್ನು, ತಮಿಳುನಾಡು ರಾಜಕೀಯ ಪಕ್ಷಗಳು ರಾಜಕೀಯ ಒತ್ತಡಕ್ಕೆ ಒಳಗಾಗಿ ಮೇಕೆದಾಟು ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ತಮಿಳುನಾಡು ಸಿಎಂ ನಮ್ಮ ಮನವಿಗೆ ಸ್ಪಂದಿಸುತ್ತಾರೆಂದು ನನಗೆ ನಂಬಿಕೆ ಇದೆ. ಕುಡಿಯುವ ನೀರು ಹಾಗೂ ವಿದ್ಯುತ್ ತಯಾರಿಕೆಗೆ ಈ ಯೋಜನೆ ಸೀಮಿತವಾಗಿದ್ದು ಕೃಷಿಗೆ ಬಳಸಿಕೊಳ್ಳುವ ಸಾಧ್ಯತೆ ಇಲ್ಲ. ತಮಿಳುನಾಡು ಮುಖ್ಯಮಂತ್ರಿಗಳು ಮೇಕೆದಾಟು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರೆ ನಾನೇ ಮುಂದೆ ನಿಂತು ಯೋಜನಾ ಸ್ಥಳದ ವೀಕ್ಷಣೆಗೆ ಅವಕಾಶ ಮಾಡಿಕೊಡುತ್ತೇನೆ. ಅನಗತ್ಯವಾಗಿ ತಮಿಳುನಾಡು ಆತಂಕ ಪಡುವುದು ಬೇಡ ಎಂದು ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.

ಮೇಕೆದಾಟು ಅಣೆಕಟ್ಟು ನಿರ್ಮಿಸಿದ್ರೆ 40 ಕಿಲೋಮೀಟರ್​ನಷ್ಟು ಹಿಮ್ಮುಖವಾಗಿ ನೀರು ಸಂಗ್ರಹವಾಗಲಿದೆ. ಹಿನ್ನೀರು ನಿಲ್ಲುವ ಕೊನೆಯ ಪಾಯಿಂಟ್ ಶಿಂಷಾ ವಿದ್ಯುತ್ ತಯಾರಿಕಾ ಘಟಕವಾಗಿದ್ದು, ಅಲ್ಲಿಗೆ ಭೇಟಿ ನೀಡಿದ ಡಿಕೆಶಿ ಅವರು ಸ್ಥಳ ಪರಿಶೀಲನೆ ನಡೆಸಿದರು. 16 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಈ ಘಟಕವು ಹಿನ್ನೀರಿನಲ್ಲಿ ಮುಳಗಡೆಯಾಗುವ ಹಿನ್ನೆಲೆಯಲ್ಲಿ, ಅದನ್ನ ಮೇಲಕ್ಕೆ ಸ್ಥಳಾಂತರ ಮಾಡಿ ವಿದ್ಯುತ್ ಉತ್ಪಾದನೆ ಮಾಡುತ್ತೇವೆ ಎಂದು ಸಚಿವ ಡಿ.ಕೆ. ಶಿವಕುಮಾರ್ ವಿವರಿಸಿದರು.

ಒಟ್ಟಾರೆ, ಮೇಕೆದಾಟು ಯೋಜನೆಗೆ ಡಿಪಿಆರ್ ಸಿದ್ದಗೊಳಿಸಲು ಅಧಿಕಾರಿಗಳು ತೀವ್ರಗತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಶತಾಯಗತಾಯ ನಾಡಿನ ಜನತೆಗೆ ಅನುಕೂಲವಾಗುವ ವಿವಿಧೋದ್ದೇಶಿತ ಯೋಜನೆಯ ಶತಾಯಗತಾಯ ಅನುಷ್ಠಾನಕ್ಕೆ ಸರ್ಕಾರ ಕಾರ್ಯೋನ್ಮುಖವಾಗಿದೆ.
First published:December 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...