ಕುಟುಂಬಸಮೇತರಾಗಿ ಹುಟ್ಟೂರಾದ ದೊಡ್ಡಾಲಳ್ಳಿಗೆ ತೆರಳಿ, ತಂದೆ ಸಮಾಧಿಗೆ ಪೂಜೆ ಸಲ್ಲಿಸಿದ ಡಿಕೆ ಶಿವಕುಮಾರ್

ಈ ವೇಳೆ ಮಾತನಾಡಿದ ಡಿಕೆಶಿ, ಕ್ಷೇತ್ರದ ಜನತೆ ತೋರಿಸಿದ ಪ್ರೀತಿಗೆ ನಾನು ಚಿರಋಣಿ. ಹಿರಿಯರಿಗೆ ಪೂಜೆ ಸಲ್ಲಿಸಲು ಅವಕಾಶ ಸಕ್ಕಿರಲಿಲ್ಲ. ಈಗ ಬಂದು ಪೂಜೆ ಸಲ್ಲಿಸಿದ್ದೇನೆ ಎಂದು ಹೇಳಿದರು.

HR Ramesh | news18-kannada
Updated:October 28, 2019, 6:31 PM IST
ಕುಟುಂಬಸಮೇತರಾಗಿ ಹುಟ್ಟೂರಾದ ದೊಡ್ಡಾಲಳ್ಳಿಗೆ ತೆರಳಿ, ತಂದೆ ಸಮಾಧಿಗೆ ಪೂಜೆ ಸಲ್ಲಿಸಿದ ಡಿಕೆ ಶಿವಕುಮಾರ್
ತಂದೆ ಸಮಾಧಿಗೆ ಪೂಜೆ ಸಲ್ಲಿಸಿದ ಡಿಕೆ ಶಿವಕುಮಾರ್ ಮತ್ತು ಕುಟುಂಬ ಸದಸ್ಯರು
  • Share this:
ರಾಮನಗರ: ಅಕ್ರಮ ಹಣ ಪ್ರಕರಣ ಸಂಬಂಧ ಜಾಮೀನಿನ ಮೇಲೆ ಬಿಡುಗಡೆಯಾಗಿ ಇಂದು ಸ್ವಕ್ಷೇತ್ರ ಕನಕಪುರಕ್ಕೆ ಆಗಮಿಸಿದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಕಾರ್ಯಕರ್ತರು ಮತ್ತು ಬೆಂಬಲಿಗರು ಅದ್ಧೂರಿ ಸ್ವಾಗತ ಕೋರಿದರು.

ಕುಟುಂಬ ಸಮೇತರಾಗಿ ಆಗಮಿಸಿದ ಡಿಕೆಶಿ, ಇಲ್ಲಿನ ಪ್ರಸಿದ್ಧ ದೇವಾಲಯಕ್ಕೆ ಭೇಟಿ ನೀಡಿದರು. ಬಳಿಕ ತಮ್ಮ ಹುಟ್ಟೂರಾದ ದೊಡ್ಡಾಲಳ್ಳಿಗೆ ತೆರಳಿ, ತಮ್ಮ ತಂದೆಯ ಸಮಾಧಿಗೆ ಎಡೆ ಇಟ್ಟು ಪೂಜೆ ಸಲ್ಲಿಸಿದರು. ಈ ವೇಳೆ ತಾಯಿ ಗೌರಮ್ಮ ಮತ್ತು ಹೆಂಡತಿ ಉಷಾ, ಮಕ್ಕಳು ಹಾಗೂ ಕುಟುಂಬದ ಇತರೆ ಸದಸ್ಯರು ಜೊತೆಗಿದ್ದರು.

ಮೊದಲಿಗೆ ಹಾರೋಹಳ್ಳಿಯಲ್ಲಿರುವ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಅಭಿಮಾನಿಗಳು ಡಿಕೆಶಿ ಅವರನ್ನು ಹೆಗಲ ಮೇಲೆ ಹೊತ್ತುಕೊಂಡು, ಮೆರವಣಿಗೆ ಮಾಡಿದರು. ಬಳಿಕ ಡಿಕೆಶಿ ಅವರ ಮನೆ ದೇವರಾದ ಕೆಂಕೇರಮ್ಮ ದೇಗುಲಕ್ಕೆ ಭೇಟಿ ನೀಡಿ, ದೇವರಿಗೆ ಹರಕೆ ತೀರಿಸಿದರು.  ನಂತರ ಕನಕಪುರದಲ್ಲಿರುವ ಮರಳೇಗವಿ ಮಠಕ್ಕೆ ತೆರಳಿ ಮುಮ್ಮಡಿ ಶ್ರೀಗಳ ಆಶೀರ್ವಾದ ಪಡೆದರು.

ತಮ್ಮ ಹುಟ್ಟೂರು ದೊಡ್ಡಾಲಳ್ಳಿಗೆ ಡಿಕೆಶಿ ಆಗಮಿಸುತ್ತಿದ್ದಂತೆ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತು. ಮಹಿಳೆಯರು  ಆರತಿ ಎತ್ತಿ, ತಿಲಕ ಇಟ್ಟು ತಮ್ಮ ಊರಿನ ಮಗನನ್ನು ಸ್ವಾಗತಿಸಿದರು. ದಾರಿಯುದ್ಧಕ್ಕೂ ಅದ್ದೂರಿ ಸ್ವಾಗತ ಕೋರಲಾಯಿತು. ಬಳಿಕ ತಮ್ಮ ತಂದೆ ಕೆಂಪೇಗೌಡರ ಸಮಾಧಿಗೆ ಬಳಿಕ ತೆರಳಿದ ಕುಟುಂಬ ಸದಸ್ಯರು, ಎಡೆ ಇಟ್ಟು ಪೂಜೆ ಸಲ್ಲಿಸಿದರು.

ಇದನ್ನು ಓದಿ: ಸಿದ್ದರಾಮಯ್ಯಗೆ ನನ್ನ ಮೇಲೆ ಲವ್ ಜಾಸ್ತಿ; ಜೆಡಿಎಸ್ ಧ್ವಜ ಹಿಡಿದ ವಿಚಾರದಲ್ಲಿ ಮೌನ ಮುರಿದ ಡಿಕೆಶಿ

ಈ ವೇಳೆ ಮಾತನಾಡಿದ ಡಿಕೆಶಿ, ಕ್ಷೇತ್ರದ ಜನತೆ ತೋರಿಸಿದ ಪ್ರೀತಿಗೆ ನಾನು ಚಿರಋಣಿ. ಹಿರಿಯರಿಗೆ ಪೂಜೆ ಸಲ್ಲಿಸಲು ಅವಕಾಶ ಸಕ್ಕಿರಲಿಲ್ಲ. ಈಗ ಬಂದು ಪೂಜೆ ಸಲ್ಲಿಸಿದ್ದೇನೆ ಎಂದು ಹೇಳಿದರು.

ಬಳಿಕ ದೊಡ್ಡಾಲಳ್ಳಿ ಗ್ರಾಮದಿಂದ ಕಬ್ಬಾಳಮ್ಮ ದೇವಸ್ಥಾಬಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ದೇಗುಲದ ಮಠಕ್ಕೆ ತೆರಳಿ, ಅಲ್ಲಿ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
First published:October 28, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ