ತಿಹಾರ್​​ ಜೈಲಿನಿಂದ ಬಿಡುಗಡೆಯಾದ ಡಿಕೆಶಿಗೆ ಮತ್ತೆ ಸಂಕಷ್ಟ: ಹಳೆ ಕೇಸ್​ಗೆ​​ ಮರುಜೀವ; ಬಂಧನದ ಭೀತಿ

ಇತ್ತ ಡಿಕೆಶಿ ವಿರುದ್ಧ ಕೇಸ್​ ದಾಖಲಿಸಿರುವ ದೂರುದಾರರು ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ. ಇಲ್ಲದೇ ಹೋದಲ್ಲಿ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಬೇಕೆಂದು ಎಂದು ದೂರುದಾರರಾದ ಸಾಮಾಜಿಕ ಹೋರಾಟಗಾರ ಎ.ಸಿ ಶಿವರಾಜ್ ಹಾಗೂ ರೈತ ಮುಖಂಡ ಬಿ.ಸಿ. ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.

news18-kannada
Updated:October 25, 2019, 11:39 AM IST
  • Share this:
ಬೆಂಗಳೂರು(ಅ.25): ಇತ್ತೀಚೆಗಷ್ಟೇ ತಿಹಾರ್​​ ಜೈಲಿನಿಂದ ಬಿಡುಗಡೆಯಾದ ಮಾಜಿ ಸಚಿವ ಡಿ.ಕೆ ಶಿವಕುಮಾರ್​​ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಆರು ವರ್ಷದ ಹಿಂದೆಯೇ ಸಲ್ಲಿಸಲಾಗಿದ್ದ ಪಿಎಎಲ್ ಈಗ ಮತ್ತೆ ಹೈಕೋರ್ಟ್​ನಲ್ಲಿ ವಿಚಾರಣೆಗೆ ಬಂದಿದೆ. ಈ ಕೇಸ್​​ ಕುರಿತಾದ ಮಹತ್ವದ ದಾಖಲೆಗಳನ್ನು ಸರ್ಕಾರ ಈಗಾಗಲೇ ನ.30ರಂದು ನ್ಯಾಯಲಯಕ್ಕೆ ಸಲ್ಲಿಸಿದೆ. ಹಾಗಾಗಿ ಕಾಂಗ್ರೆಸ್​​ ಕಟ್ಟಾಳು ಹಳೆ ಪ್ರಕರಣಕ್ಕೆ ಮರು ಜೀವ ಬಂದಿದ್ದು, ಮತ್ತೆ ಡಿಕೆಶಿಗೆ ಬಂಧನದ ಭೀತಿ ಶುರುವಾಗಿದೆ. ಇತ್ತ ಡಿಕೆಶಿ ವಿರುದ್ಧ ಕೇಸ್​ ದಾಖಲಿಸಿರುವ ದೂರುದಾರರು ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ. ಇಲ್ಲದೇ ಹೋದಲ್ಲಿ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಬೇಕೆಂದು ಎಂದು ದೂರುದಾರರಾದ ಸಾಮಾಜಿಕ ಹೋರಾಟಗಾರ ಎ.ಸಿ ಶಿವರಾಜ್ ಹಾಗೂ ರೈತ ಮುಖಂಡ ಬಿ.ಸಿ. ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.

ಕಾಂಗ್ರೆಸ್​​ ಹಿರಿಯ ನಾಯಕ ಡಿ.ಕೆ ಶಿವಕುಮಾರ್​​​ ಮತ್ತು ಸಹೋದರ ಡಿ.ಕೆ ಸುರೇಶ್​​ ಅವರಿಗೆ ಸಂಬಂಧಿಸಿದ ಕೇಸ್​ ಇದಾಗಿದೆ. ಈ ಹಿಂದೆ ಕನಕಪುರ ಮತ್ತು ಸಾತನೂರು ವ್ಯಾಪ್ತಿಯಯಲ್ಲಿ ಅಕ್ರಮ ಕಲ್ಲು ಗಣಿಗಾಗರಿಕೆ ಮತ್ತು ಅರಣ್ಯ ಒತ್ತುವರಿ ನಡೆದಿತ್ತು. ಈ ಕುರಿತಂತೆ ಕನಕಪುರ ನಿವಾಸಿಗಳು 2013ರಲ್ಲಿ ಸಾರ್ವಜನಿಕ ಹಿತಾಶಕ್ತಿ ಅರ್ಜಿ ಹಾಕಿದ್ದರು. ಅಲ್ಲದೇ ಈ ಅಕ್ರಮ ಗಣಿಗಾರಿಕೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಮನವಿ ಮಾಡಿದ್ದರು.

ಕನಕಪುರ ನಿವಾಸಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್​, ಈ ಸಂಬಂಧ ಮಾಹಿತಿ ನೀಡುವಂತೆ ಸರ್ಕಾರಕ್ಕೆ ಸೂಚಿಸಿದೆ. ಅರಣ್ಯಾಧಿಕಾರಿಗಳು ಸೇರಿದಂತೆ ತಪ್ಪಿತಸ್ಥರು ಎನ್ನಲಾಗುತ್ತಿರುವ ವಿರುದ್ದದ ಕ್ರಮಗಳ ಬಗ್ಗೆ ಸಂಪೂರ್ಣ ವಿವರ ನೀಡಬೇಕೆಂದು ಸೂಚಿಸಿ ಡಿಸೆಂಬರ್​​ 5ಕ್ಕೆ ಪ್ರಕರಣ ವಿಚಾರಣೆ ಮುಂದೂಡಲಾಗಿದೆ.

ಈಗಾಗಲೇ ಪ್ರಕರಣವೊಂದರಲ್ಲಿ ಡಿಕೆ ಶಿವಕುಮಾರ್ ಎರಡು ತಿಂಗಳುಗಳ ಕಾಲ ಜೈಲಿನಲ್ಲಿ ಕಳೆದಿದ್ದಾರೆ. ಸೆ. 4ರಿಂದಲೂ ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸುತ್ತಿರುವ ಡಿಕೆ ಶಿವಕುಮಾರ್ ಅವರನ್ನು ನ್ಯಾಯಾಂಗ ಕಸ್ಟಡಿಗೆ ಒಳಪಡಿಸಲಾಗಿತ್ತು. ಇತ್ತೀಚೆಗಷ್ಟೇ ದೆಹಲಿ ಹೈಕೋರ್ಟ್​ ಡಿಕೆಶಿ ಜಾಮೀನು ನೀಡಿದೆ. ದೆಹಲಿ ಹೈಕೋರ್ಟ್ ನೀಡಿದ ಜಾಮೀನು ಮೇಲೆ ತಿಹಾರ್​​ ಜೈಲಿನಿಂದ ಬಿಡುಗಡೆಯಾದ ಡಿಕೆಶಿಗೆ ಮತ್ತೆ ಹಳೆಯ ಕೇಸ್​​ನಲ್ಲಿ ಬಂಧನದ ಭೀತಿ ಶುರುವಾಗಿದೆ.​

ಇದನ್ನೂ ಓದಿ: ವಿಶ್ವನಾಥ್ ಎದುರು ಹುಣಸೂರು ಟಿಕೆಟ್​ಗೆ ಬೇಡಿಕೆಯಿಟ್ಟ ಸಿ.ಪಿ. ಯೋಗೇಶ್ವರ್; ಕುತೂಹಲ ಮೂಡಿಸಿದ ಹಳ್ಳಿಹಕ್ಕಿ ನಡೆ

ಏನಿದು ಪ್ರಕರಣ?: ಡಿಕೆಶಿ ತಾಯಿ, ಪತ್ನಿ ಸೇರಿ ಇತರರ ಹೆಸರಲ್ಲಿ ಡಿಕೆ ಶಿವಕುಮಾರ್ ಬೇನಾಮಿ ಆಸ್ತಿ ಮಾಡಿರುವುದು ಕಂಡು ಬಂದಿದ್ದರಿಂದ ಇಡಿ ಅಧಿಕಾರಿಗಳ ವಿಚಾರಣೆ ಮುಂದುವರಿದಿದೆ. ಇಡಿ ತನಿಖೆ ಮುಗಿದ ಬಳಿಕ ಸರ್ಕಾರ ಅಧಿಕೃತವಾಗಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆಯಿದೆ. ಈ ಹಿಂದೆ 2017ರ ಆಗಸ್ಟ್​ನಲ್ಲಿ ಐಟಿ ಅಧಿಕಾರಿಗಳು ಶಿವಕುಮಾರ್ ಮೇಲೆ ನಡೆಸಿದ ದಾಳಿ ವೇಳೆ ಸುಮಾರು 400 ಕೋಟಿ ರೂ.ಗೂ ಅಧಿಕ ಮೌಲ್ಯದ ಅಘೋಷಿತ ಆಸ್ತಿ ಪತ್ತೆಯಾಗಿತ್ತು. ಆ ಬಗ್ಗೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿದಾಗ ಹಲವರ ಹೆಸರಲ್ಲಿ ಆಸ್ತಿ ಮಾಡಿರುವುದು ಬೆಳಕಿಗೆ ಬಂದಿತ್ತು ಎನ್ನಲಾಗಿದೆ.

ಬೇನಾಮಿ ಆಸ್ತಿ ನಿಯಂತ್ರಣ ಕಾಯ್ದೆ: ಕೇಂದ್ರ ಸರ್ಕಾರ 2016ರಲ್ಲಿ ಬೇನಾಮಿ ಆಸ್ತಿ ನಿಯಂತ್ರಣ ಕಾಯ್ದೆ ಜಾರಿಗೆ ತಂದಿತ್ತು. ಬೇನಾಮಿ ಆಸ್ತಿ ಹೊಂದಿದ್ದರೆ ಅಂಥವರಿಗೆ ಬೇನಾಮಿ ಆಸ್ತಿ ನಿಯಂತ್ರಣ ಕಾಯ್ದೆ ಪ್ರಕಾರ ಭಾರಿ ಪ್ರಮಾಣದ ದಂಡ ಹಾಗೂ ಶಿಕ್ಷೆ ವಿಧಿಸಲಾಗುತ್ತದೆ. ಈ ಕಾಯ್ದೆ ಪ್ರಕಾರ 1 ಕೋಟಿ ರೂ. ಮೌಲ್ಯದ ಬೇನಾಮಿ ಆಸ್ತಿ ಹೊಂದಿರುವುದು ಪತ್ತೆಯಾದರೆ 7 ವರ್ಷ ಜೈಲು ಶಿಕ್ಷೆ ಮತ್ತು 25 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಅಲ್ಲದೆ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವಿದೆ. ಬೇನಾಮಿ ಆಸ್ತಿ ಬಗ್ಗೆ ತಪ್ಪು ಮಾಹಿತಿ ಕೊಟ್ಟಿರುವುದು ಕಂಡು ಬಂದರೆ ಪ್ರಸ್ತುತ ಆ ಆಸ್ತಿಗೆ ಇರುವ ಬೆಲೆಯ ಶೇ.10 ದಂಡ ವಿಧಿಸಿ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ.-------
First published: October 25, 2019, 10:59 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading