• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • DK Shivakumar: ಪ್ರಜಾಧ್ವನಿ ವೇಳೆ ಜನರ ಮೇಲೆ ಹಣ ಎಸೆದ ಡಿಕೆಶಿ! ಗಲಾಟೆ ಮಾಡಿದ ಕಾರ್ಯಕರ್ತರ ಮೇಲೆ ಗರಂ

DK Shivakumar: ಪ್ರಜಾಧ್ವನಿ ವೇಳೆ ಜನರ ಮೇಲೆ ಹಣ ಎಸೆದ ಡಿಕೆಶಿ! ಗಲಾಟೆ ಮಾಡಿದ ಕಾರ್ಯಕರ್ತರ ಮೇಲೆ ಗರಂ

ಡಿಕೆ ಶಿವಕುಮಾರ್​, ಕೆಪಿಸಿಸಿ ಅಧ್ಯಕ್ಷ

ಡಿಕೆ ಶಿವಕುಮಾರ್​, ಕೆಪಿಸಿಸಿ ಅಧ್ಯಕ್ಷ

ನೀವು ರಾಮ ಮಂದಿರ ಕಟ್ಟುವುದಿರಲಿ ಮೊದಲು ರಾಮನಗರ, ಚನ್ನಪಟ್ಟಣ, ಕನಕಪುರದಲ್ಲಿ ಪಕ್ಷದ ಕಚೇರಿ ಕೊಟ್ಟಿ ಎಂದು ಡಿಕೆ ಶಿವಕುಮಾರ್ ಸವಾಲು ಎಸೆದಿದ್ದಾರೆ.

 • Share this:

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ (Srirangapatna) ವಿಧಾನಸಭಾ ಕ್ಷೇತ್ರದ ಕ್ಯಾಂತುಗೆರೆಯಲ್ಲಿ ಇಂದು ಕಾಂಗ್ರೆಸ್​ ನಾಯಕರು ಪ್ರಜಾಧ್ವನಿ ಯಾತ್ರೆಗೆ (Praja Dhwani Yatra ) ಅದ್ದೂರಿಯಾಗಿ ಚಾಲನೆ ನೀಡಿದ್ದಾರೆ. ರಥಯಾತ್ರೆಗೆ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಚಾಲನೆ ನೀಡಿದರು. ಇದಕ್ಕೂ ಮುನ್ನ ಪ್ರಜಾಯಾತ್ರೆಗೆ ಆಗಮಿಸಿದ ಡಿಕೆ ಶಿವಕುಮಾರ್ ಅವರಿಗೆ ಬೆಲ್ಲದ ಆರತಿ ಬೆಳಗಿ, ದ್ರಾಕ್ಷಿ ಹಾರ ಹಾಕಿ ಅದ್ದೂರಿಯಾಗಿ ಸ್ವಾಗತ ಕೋರಿದ್ದರು. ಕ್ರೇನ್ ಮೂಲಕ ಡಿಕೆಶಿಗೆ ಬೃಹತ್ ದ್ರಾಕ್ಷಿ (Grapes) ಹಾರ ಹಾಕಿ ಜೈಕಾರ ಕೂಗಿದರು. ಪ್ರಜಾಧ್ವನಿ ಯಾತ್ರೆಯಲ್ಲಿ ಜಾನಪದ ಕಲಾ ತಂಡಗಳ ಮೆರವಣಿಗೆ ಕೂಡ ಆಯೋಜಿಸಲಾಗಿತ್ತು. ಈ ವೇಳೆ ಡಿಕೆ ಶಿವಕುಮಾರ್​ ಅವರು ಜನರ ಮೇಲೆ ಹಣ (Money) ಎರಚಿದ್ದಾರೆ. ಮಂಡ್ಯದ (Mandya) ಬೇವಿನಹಳ್ಳಿಯಲ್ಲಿ ಘಟನೆ ನಡೆದಿದ್ದು, ಜನರ ಗುಂಪಿನ ಮೇಲೆ ಹಣ ಡಿಕೆಶಿ ಎರಚಿದ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಡಿಕೆ ಶಿವಕುಮಾರ್ ಅವರ ವರ್ತನೆಗೆ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ.


ಕಾರ್ಯಕರ್ತರ ಮೇಲೆ ಡಿಕೆಶಿ ಗರಂ


ಪ್ರಜಾಧ್ವನಿ ಯಾತ್ರೆಗೆ ಚಾಲನೆ ನೀಡಿದ ಬಳಿಕ ಡಿಕೆ ಶಿವಕುಮಾರ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಆದರೆ ಈ ವೇಳೆ ಕೆಲ ಕಾರ್ಯಕರ್ತರು ಅಡ್ಡಿಪಡಿಸಿದ್ದರು. ಇದರಿಂದ ಗರಂ ಆದ ಡಿಕೆಶಿ, ಹೇ ತರ್ಲೆಗಳ ಸುಮ್ಮನಿರಿ, ಮಂಡ್ಯದವರು ಎಂದರೆ ತರ್ಲೆಗಳು ಎಂದು ಅನಿಸಿಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದರು. ಮಂಡ್ಯ ನಗರದ ಕ್ಯಾತಂಗೆರೆ ಬಳಿ ಘಟನೆ ನಡೆದಿತ್ತು.
ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್, ಸಿಟಿ ರವಿಗೆ ಕಾಂಗ್ರೆಸ್ ಇತಿಹಾಸ ಏನು ಗೊತ್ತು? ಪಾಪ ಸಿಟಿ ರವಿಗೆ ಇತಿಹಾಸನೇ ಗೊತ್ತಿಲ್ಲ, ಸಿಟಿ ರವಿ ಮೆಂಟಲ್ ಆಸ್ಪತ್ರೆಗೆ ಸೇರಬೇಕೆಂದು ಈ ಹಿಂದೆಯೇ ಹೇಳಿದ್ದೇನೆ. ಅವರು ತಪ್ಪು ದಾರಿಗೆ ಏಳೆಯಲು ಪ್ರಯತ್ನ ಪಡುತ್ತಿದ್ದಾರೆ ಎಂದು ಟೀಕಿಸಿದರು.


ಮೊದಲು ಪಕ್ಷ ಕಚೇರಿ ಕೊಟ್ಟುವಂತೆ ಬಿಜೆಪಿಗೆ ಡಿಕೆಶಿ ಸವಾಲು


ಇದೇ ವೇಳೆ ನೇರ ಸವಾಲು ಎಸೆದ ಡಿಕೆ ಶಿವಕುಮಾರ್​, ನೀವು ರಾಮ ಮಂದಿರ ಕಟ್ಟುವುದಿರಲಿ ಮೊದಲು ರಾಮನಗರ, ಚನ್ನಪಟ್ಟಣ, ಕನಕಪುರದಲ್ಲಿ ಪಕ್ಷದ ಕಚೇರಿ ಕೊಟ್ಟಿ ಎಂದರು. ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಬದಲಿಗೆ ಕೆಂಗಲ್ ಹನುಮಂತಯ್ಯ ಹೆಸರು ಇಡುತ್ತೇವೆ ಎಂಬ ಸಿಎಂ ಹೇಳಿಕೆಗೂ ತಿರುಗೇಟು ನೀಡಿ, ಅದು ಮಾಡುವ ಕಾಲ ಬಂದಾಗ ಅದರ ಬಗ್ಗೆ ಮಾತನಾಡುತ್ತೇನೆ. ರಾಜೀವ್ ಗಾಂಧಿ ಹೆಸರಾದರೂ ಬದಲಾವಣೆ ಮಾಡಲಿ, ಇಲ್ಲ ಅವರ ಹೆಸರೇ ಹಾಕಲಿ, ಮೇ 15ರ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರುತ್ತೆ ಎಂದರು.
ಇದನ್ನೂ ಓದಿ: Karnataka Elections 2023: ಹಳೆ ಮೈಸೂರು ಭಾಗದಲ್ಲಿ ಹಿಂದೂ ಮತ ಸೆಳೆಯಲು ಅಶ್ವತ್ಥ್ ನಾರಾಯಣ್ ತಂತ್ರಗಾರಿಕೆ

top videos


  ಮೇಲುಕೋಟೆ ವಿಧಾನಸಭಾ ಕ್ಷೇತ್ರದ ರೈತ ಸಂಘದ ಅಭ್ಯರ್ಥಿ ನಮ್ಮ ಬಳಿ ಬಂದು ಚರ್ಚೆ ಮಾಡಿದ್ದಾರೆ. ನಮಗೆ ನಮ್ಮ ಪಕ್ಷದ ಅಸ್ಥಿತ್ವ ಮುಖ್ಯ. ಪಾರ್ಟಿ ಕಾರ್ಯಕರ್ತರೊಡನೆ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಮಂಡ್ಯದ ಬೇವಿನಹಳ್ಳಿಯಲ್ಲಿ ಸ್ಪಷ್ಟನೆ ನೀಡಿದರು.

  First published: