• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • DK Shivakumar: ಪೊಲೀಸರಿಗೆ ಧಮ್ಕಿ ಹಾಕಿದ ಡಿಕೆಶಿ! 15 ದಿನಗಳ ನಂತ್ರ ಸರ್ಕಾರ ಇರಲ್ಲ, ನಿಮಗೆ ಏನ್ ಶಿಕ್ಷೆ ಕೊಡ್ಬೇಕು ನೋಡ್ತೀವಿ ಅಂತ ಎಚ್ಚರಿಕೆ

DK Shivakumar: ಪೊಲೀಸರಿಗೆ ಧಮ್ಕಿ ಹಾಕಿದ ಡಿಕೆಶಿ! 15 ದಿನಗಳ ನಂತ್ರ ಸರ್ಕಾರ ಇರಲ್ಲ, ನಿಮಗೆ ಏನ್ ಶಿಕ್ಷೆ ಕೊಡ್ಬೇಕು ನೋಡ್ತೀವಿ ಅಂತ ಎಚ್ಚರಿಕೆ

ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ)

ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ)

ಪೊಲೀಸರಿಗೆ ಡಿಕೆಶಿ ಧಮ್ಕಿ ಹಾಕಿದ್ದಾರೆ. ಇನ್ನು 15 ದಿನದಲ್ಲಿ ಈ ಸರ್ಕಾರ ರಾಜ್ಯದಲ್ಲಿ ಇರೋದಿಲ್ಲ. ಅದಾದ ಮೇಲೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತೆ. ಆಗ ನಿಮಗೆ ಏನ್ ಶಿಕ್ಷೆ ಕೊಡಬೇಕೋ ಅದಕ್ಕೆ ಕಾಂಗ್ರೆಸ್ ಬದ್ಧವಾಗಿರುತ್ತೆ ಅಂತ ಎಚ್ಚರಿಕೆ ನೀಡಿದ್ದಾರೆ.

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ಪೊಲೀಸರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (KPCC President D.K. Shivakumar) ಧಮ್ಕಿ ಹಾಕಿದ್ದಾರೆ. ನಿನ್ನೆ ಬೆಂಗಳೂರಿನ (Bengaluru) ಯಲಹಂಕದಲ್ಲಿ (Yelahanka) ಕಾಂಗ್ರೆಸ್ ಅಭ್ಯರ್ಥಿ ಕೇಶವ ಬಿ. ರಾಜಣ್ಣ ಪರ ಡಿಕೆ ಶಿವಕುಮಾರ್ ಪ್ರಚಾರಕ್ಕೆ ಆಗಮಿಸಿದ್ದರು. ಈ ವೇಳೆ ಡಿಕೆಶಿ ಪೊಲೀಸರಿಗೆ (Police) ಆವಾಜ್ ಹಾಕಿದ್ದಾರೆ ಎನ್ನಲಾಗುತ್ತಿದೆ. “ಇನ್ನು 15 ದಿನದಲ್ಲಿ ಈ ಸರ್ಕಾರ ರಾಜ್ಯದಲ್ಲಿ ಇರೋದಿಲ್ಲ. ಅದಾದ ಮೇಲೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತೆ. ಆಗ ನಿಮಗೆ ಏನ್ ಶಿಕ್ಷೆ ಕೊಡಬೇಕೋ ಅದಕ್ಕೆ ಕಾಂಗ್ರೆಸ್ ಬದ್ಧವಾಗಿರುತ್ತೆ” ಅಂತ ಎಚ್ಚರಿಕೆ ನೀಡಿದ್ದಾರೆ. ಹೀಗೆ ಪೊಲೀಸರಿಗೆ ಡಿಕೆ ಶಿವಕುಮಾರ್ ಆವಾಜ್ ಹಾಕಿರುವ ವಿಡಿಯೋ (Video) ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ (Viral) ಆಗಿದೆ.


ಪೊಲೀಸರಿಗೆ ಡಿಕೆ ಶಿವಕುಮಾರ್ ಆವಾಜ್


ನಿನ್ನೆ ಯಲಹಂಕದಲ್ಲಿ ಪೊಲೀಸರಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆವಾಜ್ ಹಾಕಿದ್ದಾರೆ. ನಿಮಗೆ ಖಾಕಿ ಧರಿಸಲು ಆಗದಿದ್ರೆ ರಾಜೀನಾಮೆ ಕೊಟ್ಬಿಡಿ. ತಾಕತ್ ಇದ್ರೆ ರಾಜೀನಾಮೆ ಕೊಟ್ಟು ಬಿಜೆಪಿಗೆ ಕೆಲ್ಸ ಮಾಡಿ ಅಂತ ಪೊಲೀಸರಿಗೆ ಸವಾಲು ಹಾಕಿದ್ದಾರೆ.


ನಿಮಗೆ ಶಿಕ್ಷೆ ಕೊಡೋದಕ್ಕೆ ಕಾಂಗ್ರೆಸ್ ಬದ್ಧವಾಗಿದೆ


ಮುಂದುವರಿದು ಮಾತನಾಡಿದ ಡಿಕೆಶಿ ‘15 ದಿನಗಳದ ಮೇಲೆ ಈ ಸರ್ಕಾರ ರಾಜ್ಯದಲ್ಲಿ ಇರಲ್ಲ. ನಿಮಗೆ ಏನ್ ಶಿಕ್ಷೆ ಕೊಡಬೇಕು ಅದಕ್ಕೆ ಕಾಂಗ್ರೆಸ್‌, ಡಿಕೆಶಿ ಬದ್ಧ ಅಂತ ಎಚ್ಚರಿಕೆ ನೀಡಿದ್ದಾರೆ. ಹೀಗೆ ಪೊಲೀಸರಿಗೆ ಡಿಕೆ ಶಿವಕುಮಾರ್ ಆವಾಜ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಇದನ್ನೂ ಓದಿ: DK Shivakumar: ಬೆದರದ ಬೆಚ್ಚದ ಕನಕಪುರ 'ಬಂಡೆ'! ಡಿಕೆ ಶಿವಕುಮಾರ್ ರಾಜಕೀಯ ಹಾದಿ ಹೇಗಿತ್ತು?


ಡಿಕೆಶಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತ


ಇಂದು ಡಿ.ಕೆ. ಶಿವಕುಮಾರ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ ಟೇಕಾಫ್ ಆಗುವ ವೇಳೆ ರಣಹದ್ದು ಡಿಕ್ಕಿಯಾಗಿದೆ. ಪರಿಣಾಮ ಹೆಲಿಕಾಪ್ಟರ್​ ವಿಂಡೋ ಗ್ಲಾಸ್​ ಪುಡಿಪುಡಿಯಾಗಿದೆ. ಕೂಡಲೇ ಪೈಲಟ್ ಹೆಲಿಕಾಪ್ಟರ್​ನ್ನು ಭೂಸ್ಪರ್ಶ ಮಾಡಿದ್ದು, ಭಾರೀ ಅನಾಹುತವೊಂದು ತಪ್ಪಿದೆ.


ರಸ್ತೆ ಮಾರ್ಗದ ಮೂಲಕ ಮುಳಬಾಗಿಲಿಗೆ ತೆರಳಿದ ಡಿಕೆಶಿ


ಬೆಂಗಳೂರಿನ ಎಚ್‌ಎಎಲ್ ಮೂಲಕ ಡಿಕೆ ಶಿವಕುಮಾರ್ ಹೆಲಿಕಾಪ್ಟರ್‌ನಲ್ಲಿ ಕೋಲಾರದ ಮುಳಬಾಗಿಲಿಗೆ ಹೊರಟಿದ್ದರು. ಈ ವೇಳೆ ಹೆಲಿಕಾಪ್ಟರ್ ಟೇಕಾಪ್ ಆಗುತ್ತಿದ್ದಂತೆ ರಣಹದ್ದು ಹೆಲಿಕಾಪ್ಟರ್ ಗಾಜಿಗೆ ಡಿಕ್ಕಿ ಹೊಡೆದಿದೆ. ಕೋಲಾರದ ಮುಳಭಾಗಿಲಿನಲ್ಲಿ ಸಾರ್ವಜನಿಕ ಪ್ರಚಾರ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಹೀಗಾಗಿ ಡಿಕೆ ಶಿವಕುಮಾರ್ ರಸ್ತೆ ಮಾರ್ಗದ ಮೂಲಕ ಕೋಲಾರಕ್ಕೆ ಪ್ರಯಾಣ ಬೆಳೆಸಿದ್ದಾರೆ.

First published: