ತನ್ನ ಮಾರ್ಕೆಟ್ ಹೆಚ್ಚಿಸಿಕೊಳ್ಳಲು ರಮೇಶ್ ಜಾರಕಿಹೊಳಿಯಂತವರು ನನ್ನ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ; ಡಿಕೆಶಿ ವ್ಯಂಗ್ಯ!

ಕೆಲವರು ಪ್ರೀತಿಯಿಂದ ನಮ್ಮ ಬಗ್ಗೆ ಮಾತನಾಡುತ್ತಾರೆ ಇನ್ನೂ ಕೆಲವರು ತಮ್ಮ ಮಾರ್ಕೆಟ್ ಹೆಚ್ಚಿಸಿಕೊಳ್ಳಲು ನಮ್ಮಂತವರ ಬಗ್ಗೆ ಮಾತನಾಡುತ್ತಾರೆ. ನಮ್ಮ ಹೆಸರು ಬಳಸಿಕೊಂಡು ಅವರ ಮಾರ್ಕೆಟ್ ಹೆಚ್ಚಿಸಿಕೊಳ್ಳುತ್ತಾರೆ. ರಮೇಶ್ ಜಾರಕಿಹೊಳಿ ಅಂತವರಲ್ಲೊಬ್ಬರು ಎಂದು ಹೇಳುವ ಮೂಲಕ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಟಾಂಗ್ ನೀಡಿದ್ದಾರೆ.

MAshok Kumar | news18
Updated:July 26, 2019, 1:10 PM IST
ತನ್ನ ಮಾರ್ಕೆಟ್ ಹೆಚ್ಚಿಸಿಕೊಳ್ಳಲು ರಮೇಶ್ ಜಾರಕಿಹೊಳಿಯಂತವರು ನನ್ನ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ; ಡಿಕೆಶಿ ವ್ಯಂಗ್ಯ!
ಡಿ.ಕೆ. ಶಿವಕುಮಾರ್
  • News18
  • Last Updated: July 26, 2019, 1:10 PM IST
  • Share this:
ನವ ದೆಹಲಿ (ಜುಲೈ.26); ನಮ್ಮಂತವರ ಬಗ್ಗೆ ಮಾತಾಡಿದ್ರೆ ಅವರಿಗೆ ಮಾರ್ಕೆಟ್ ಜಾಸ್ತಿಯಾಗುತ್ತೆ ಎಂಬ ಕಾರಣಕ್ಕಾಗಿ ರಮೇಶ್ ಜಾರಕಿಹೊಳಿಯಂತವರು ನಮ್ಮಂತರ ಬಗ್ಗೆ ದೂರುತ್ತಲೇ ಇರುತ್ತಾರೆ ಎಂದು ಡಿ.ಕೆ. ಶಿವಕುಮಾರ್ ನೇರವಾಗಿ ಅನರ್ಹಗೊಂಡಿರುವ ರೆಬೆಲ್ ಶಾಸಕ ರಮೇಶ್ ಜಾರಕಿಹೊಳಿಗೆ ಟಾಂಗ್ ನೀಡಿದ್ದಾರೆ.

ಮೂರು ಜನ ರೆಬೆಲ್ ಶಾಸಕರ ಅನರ್ಹತೆಯ ಕುರಿತು ಇಂದು ನವ ದೆಹಲಿಯಲ್ಲಿ ನ್ಯೂಸ್ 18 ಪ್ರತಿನಿಧಿಯೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, “ಕೆಲವರು ಪ್ರೀತಿಯಿಂದ ನಮ್ಮ ಬಗ್ಗೆ ಮಾತನಾಡುತ್ತಾರೆ ಇನ್ನೂ ಕೆಲವರು ತಮ್ಮ ಮಾರ್ಕೆಟ್ ಹೆಚ್ಚಿಸಿಕೊಳ್ಳಲು ನಮ್ಮಂತವರ ಬಗ್ಗೆ ಮಾತನಾಡುತ್ತಾರೆ. ನಮ್ಮ ಹೆಸರು ಬಳಸಿಕೊಂಡು ಅವರ ಮಾರ್ಕೆಟ್ ಹೆಚ್ಚಿಸಿಕೊಳ್ಳುತ್ತಾರೆ. ರಮೇಶ್ ಜಾರಕಿಹೊಳಿ ಅಂತವರಲ್ಲೊಬ್ಬರು” ಎಂದು ಹೇಳುವ ಮೂಲಕ ಅವರು ಟಾಂಗ್ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಅವರ ಅನರ್ಹತೆಯ ಬಗ್ಗೆ ಮಾತನಾಡಿದ ಅವರು, “ಶಾಸಕ ಸ್ಥಾನದಿಂದ ಅನರ್ಹಗೊಂಡವರಲ್ಲಿ ಯಾರೂ ಅವಿದ್ಯಾವಂತರಲ್ಲ. ಎಲ್ಲೂ ಎರಡೂ ಮೂರು ಬಾರು ಶಾಸಕ ಸಚಿವರಾದವರು, ಅಕ್ಷರಸ್ಥರು. ಎಲ್ಲದಕ್ಕೂ ಹೆಚ್ಚಾಗಿ ನಮ್ಮ ಗೆಳೆಯರು. ಇವರಿಗೆ ಹೀಗೆ ಆಗಬಾರದಿತ್ತು ಎಂಬ ಮರುಕ ನಮ್ಮಲ್ಲಿದೆ. ಆದರೆ, ಇದು ಅವರೇ ಆಹ್ವಾನಿಸಿಕೊಂಡ ಆಪತ್ತು. ಇದಕ್ಕೆ ನಾವು ಈಗ ಏನೂ ಮಾಡಲು ಸಾಧ್ಯವಿಲ್ಲ. ನ್ಯಾಯಾಲಯ ಅಥವಾ ಸ್ಪೀಕರ್ ತೀರ್ಪನ್ನು ನಾನು ಗೌರವಿಸುತ್ತೇನೆ ಹೀಗಾಗಿ ಈ ಕುರಿತು ಹೆಚ್ಚು ಮಾತನಾಡುವುದು ಇಷ್ಟವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ : ಗೊಂದಲಗಳ ನಡುವೆ ಸಿಲುಕಿದ್ದ ಅಮಿತ್​ ಶಾ ಗೆ ಬಿಎಸ್​ವೈ ಅಭಯ; ಕೊನೆಗೂ ನಿಗದಿಯಾಯ್ತು ಪದಗ್ರಹಣಕ್ಕೆ ಸಮಯ!

ಯಡಿಯೂರಪ್ಪ ಪೂರ್ಣಾವಧಿ ಸಿಎಂ ಆಗೋದು ಡೌಟು; ಪರೋಕ್ಷವಾಗಿ ಟಾಂಗ್ ನೀಡಿದ ಡಿ.ಕೆ. ಶಿವಕುಮಾರ್

ಯಡಿಯೂರಪ್ಪ ತುಂಬಾ ಛಲದಿಂದ ನಮ್ಮನ್ನು ಅಧಿಕಾರದಿಂದ ಇಳಿಸಿದ್ದಾರೆ. ಹೀಗಾಗಿ ಅವರಿಗೆ ಸಿಎಂ ಸ್ಥಾನ ಲಭ್ಯವಾಗುತ್ತಿರುವುದು ನಮಗೆ ಸಂತಸದ ವಿಚಾರ ಎಂದು ತಿಳಿಸಿದ ಡಿ.ಕೆ. ಶಿವಕುಮಾರ್ ಆ ಸ್ಥಾನದಲ್ಲಿ ಅವರು ಹೆಚ್ಚು ದಿನ ಉಳಿಯುವುದಿಲ್ಲ ಎಂಬುದನ್ನೂ ಪರೋಕ್ಷವಾಗಿ ಉಚ್ಚರಿಸಿದ್ದಾರೆ.

ಈ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ ಅವರು, “ಯಡಿಯೂರಪ್ಪ ಅವರ ಛಲದಿಂದಾಗಿ ನಮ್ಮನ್ನು ಅಧಿಕಾರದಿಂದ ಇಳಿಸಿದ್ದಾರೆ. ಅಲ್ಲದೆ ಬಿಜೆಪಿಯನ್ನು ಮತ್ತೆ ಅಧಿಕಾರದ ಗದ್ದುಗೆಗೆ ಏರಿಸುವಲ್ಲಿ ಸಫಲರಾಗಿದ್ದಾರೆ. ಹೀಗಾಗಿ ಇಂತಹ ವ್ಯಕ್ತಿ ಸಿಎಂ ಸ್ಥಾನವನ್ನು ಅಲಂಕರಿಸಬೇಕು ಎಂದು ನಾವು ಆಶಿಸುತ್ತೇವೆ.ಆದರೆ, ಬಿಜೆಪಿಯಲ್ಲಿ 75 ವರ್ಷ ದಾಟಿದ ಕಾರಣಕ್ಕೆ ಎಲ್.ಕೆ. ಅಡ್ವಾನಿ, ಮುರಳಿ ಮನೋಹರ ಜೋಶಿ, ಸುಷ್ಮಾ ಸ್ವರಾಜ್ ರಂತಹ ಹಿರಿಯ ನಾಯಕರನ್ನು ಮೂಲೆ ಗುಂಪು ಮಾಡಲಾಗಿದೆ. ಇನ್ನೂ 75 ವರ್ಷ ದಾಟಿದ ಮೇಲೂ ಯಡಿಯೂರಪ್ಪನವರಿಗೆ ಮಾತ್ರ ಏಕೆ ವಿಶೇಷ ವಿನಾಯಿತಿ? ಎಂದು ಬಿಜೆಪಿ ಒಳಗೆ ಸದ್ದು ಜೋರಾಗಿದೆ ಎಂದು ಹೇಳುವ ಮೂಲಕ ಯಡಿಯೂರಪ್ಪ ಹೆಚ್ಚು ದಿನ ಆ ಸ್ಥಾನದಲ್ಲಿ ಉಳಿಯುವುದು ಸಾಧ್ಯವಿಲ್ಲ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಇದನ್ನೂ ಓದಿ : ಯಡಿಯೂರಪ್ಪ ಪಟ್ಟಾಭಿಷೇಕ; ಸಂಜೆ 6 ಗಂಟೆಗೆ ಮುಖ್ಯಮಂತ್ರಿಯಾಗಿ ಬಿಎಸ್​ವೈ ಅಧಿಕಾರ ಸ್ವೀಕಾರ
First published:July 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading