ಸಂಕಷ್ಟದಿಂದ ಪಾರಾಗಲು ಅಜ್ಜಯ್ಯನ ಮೊರೆ ಹೋದ ಡಿಕೆ ಶಿವಕುಮಾರ್​

ಅಜ್ಜಯ್ಯನ ಮೇಲೆ ಡಿಕೆ ಶಿವಕುಮಾರ್​ಗೆ  ಅಪಾರ ನಂಬಿಕೆ. ದ್ವಾರಕಾನಾಥ್​ ಗುರೂಜಿಯವರ ಸಲಹೆಯಂತೆ ಅವರು ಅಜ್ಜಯ್ಯನನ್ನು ಪೂಜಿಸಿಕೊಂಡು ಬಂದಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​

  • Share this:
ಬೆಂಗಳೂರು (ಅ.6): ಡಿಕೆ ಶಿವಕುಮಾರ್​ ಮನೆ ಮೇಲೆ ಸೋಮವಾರ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದರು. ಡಿಕೆ ಶಿವಕುಮಾರ್​ ಅವರಿಗೆ ಸೇರಿದ ಸುಮಾರು 14 ಕಡೆ ಈ ದಾಳಿ ನಡೆದಿದೆ. ಈ ದಾಳಿ ಬಳಿಕ ಇಂದು ಕೆಪಿಸಿಸಿ ಅಧ್ಯಕ್ಷರು ತಮ್ಮ ನೆಚ್ಚಿನ ಆರಾಧ್ಯ ದೈವರಾದ ಅಜ್ಜಯ್ಯನ ಮೊರೆ ಹೋಗಿದ್ದಾರೆ. ಈ ಸಂಕಷ್ಟದಿಂದ ಪಾರಾಗಲು ಅವರು ಅಜ್ಜಯ್ಯನ ದರ್ಶನಕ್ಕೆ ಮುಂದಾಗಿದ್ದಾರೆ. ಪ್ರತಿಬಾರಿ ಡಿಕೆ ಶಿವಕುಮಾರ್​ ಮನೆ ಮೇಲೆ ದಾಳಿಯಾದಾಗ ಹಾಗೂ ಈ ಹಿಂದೆ ಬಂಧನಕ್ಕೆ ಒಳಗಾಗಿ ಹೊರ ಬಂದ ಮೇಲೆ ಅವರು ಅಜ್ಜಯ್ಯನ ದರ್ಶನ ಮಾಡಿ ಸಮಸ್ಯೆ ಪರಿಹಾರಕ್ಕೆ ಪ್ರಾರ್ಥಿಸುವುದನ್ನು ರೂಢಿಸಿಕೊಂಡಿದ್ದಾರೆ, ಅದೇ ರೀತಿ ಈ ಬಾರಿ ಕೂಡ ನಾಗರಭಾವಿಯ ಮಾರೇನಹಳ್ಳಿಯಲ್ಲಿರುವ ಅಜ್ಜಯ್ಯನ ದರ್ಶನಕ್ಕೆ ಮುಂದಾಗಿದ್ದಾರೆ.

ಅಜ್ಜಯ್ಯನ ಮೇಲೆ ಡಿಕೆ ಶಿವಕುಮಾರ್​ಗೆ  ಅಪಾರ ನಂಬಿಕೆ. ದ್ವಾರಕಾನಾಥ್​ ಗುರೂಜಿಯವರ ಸಲಹೆಯಂತೆ ಅವರು ಅಜ್ಜಯ್ಯನನ್ನು ಪೂಜಿಸಿಕೊಂಡು ಬಂದಿದ್ದಾರೆ. ಇಲ್ಲಿ ದರ್ಶನ ಮಾಡಿದರೆ, ಒಳ್ಳಿತಗಲಿದೆ ಎನ್ನುವ ನಂಬಿಕೆ ಅವರಿಗೆ ಇದೆ. ಇದೇ ಕಾರಣಕ್ಕೆ ಅವರು ಈ ಬಾರಿ ಕೂಡ ಅಜ್ಜಯ್ಯನ ದರ್ಶನಕ್ಕೆ ಮುಂದಾಗಿದ್ದಾರೆ.

ಇದನ್ನು ಓದಿ: ಶಿರಾ ಉಪಚುನಾವಣೆ: ಎರಡು ಪಕ್ಷಗಳಿಗೆ ಅನುಕಂಪದ ಬಲ; ಬಿಜೆಪಿಗೆ ವರ್ಚಸ್ಸಿನ ಮೇಲೆ ವಿಶ್ವಾಸ

ಕೆಪಿಸಿಸಿ ಅಧ್ಯಕ್ಪರಾಗಿ ಪದಗ್ರಹಣ ಸಂದರ್ಭದಲ್ಲಿಯೂ ಕೂಡ ಇವರು ನೊಣವಿನಕೆರೆಯ ಅಜ್ಜಯ್ಯನ ಮಠಕ್ಕೆ ಭೇಟಿ ನೀಡಿದ್ದರು. ಈ ವೇಳೆ ಇಲ್ಲಿನ ಶ್ರೀಗಳು ನೀಡಿದ್ದ ದಿನಾಂಕದಂದು ಅವರು ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು.

ಭ್ರಷ್ಟಾಚಾರದಿಂದ ಹಣ ಸಂಪಾದಿಸಿದ್ದಾರೆ ಎಂಬ ಆರೋಪದ ಮೇಲೆ ನಿನ್ನೆ ಸಿಬಿಐ ಅಧಿಕಾರಿಗಳು ಡಿಕೆ ಶಿವಕುಮಾರ್  ಮನೆ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಮನೆಯಲ್ಲಿದ್ದ 57 ಲಕ್ಷ ರೂ ನಗದು ಹಾಗೂ ಕೆಲ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ದೆಹಲಿಯಲ್ಲಿರುವ ಅವರ ನಿವಾಸದ ಮೇಲೆ ಕೂಡ ದಾಳಿ ನಡೆಸಲಾಗಿದೆ
Published by:Seema R
First published: