ಪುಣ್ಯವಂತರು ಒಳ್ಳೆಯ ಮಾರ್ಗದಲ್ಲಿ ಸಿಎಂ ಆಗಿದ್ದಾರೆ, ಹೀಗಾಗಿ ಮಳೆ ಹೆಚ್ಚಾಗಿದೆ; ಬಿಎಸ್​ವೈ ಬಗ್ಗೆ ಡಿಕೆಶಿ ವ್ಯಂಗ್ಯ

ಜೈಲಿನಿಂದ ಬಂದ ಮೇಲೆ ಡಿಕೆಶಿಗೆ ಬೆನ್ನು ನೋವು ಹೆಚ್ಚಿದೆಯಂತೆ. ಹೀಗಾಗಿ ಅವರಿಗೆ ಕೂರಲು ಸಾಧ್ಯವಾಗುತ್ತಿಲ್ಲ. ಕೆಲ ಹೊತ್ತು ನಿಲ್ಲಬಹುದಷ್ಟೆಯಂತೆ. ನಿರ್ಮಲಾನಂದ ಸ್ವಾಮೀಜಿ ಭೇಟಿ ನಂತರ ಅವರು ಈ ವಿಚಾರ ಹೇಳಿದ್ದಾರೆ.

Rajesh Duggumane | news18-kannada
Updated:October 29, 2019, 8:13 AM IST
ಪುಣ್ಯವಂತರು ಒಳ್ಳೆಯ ಮಾರ್ಗದಲ್ಲಿ ಸಿಎಂ ಆಗಿದ್ದಾರೆ, ಹೀಗಾಗಿ ಮಳೆ ಹೆಚ್ಚಾಗಿದೆ; ಬಿಎಸ್​ವೈ ಬಗ್ಗೆ ಡಿಕೆಶಿ ವ್ಯಂಗ್ಯ
ಡಿಕೆಶಿ-ಬಿಎಸ್​ವೈ
  • Share this:
ಬೆಂಗಳೂರು (ಅ.29): ಬಿಎಸ್​ ಯಡಿಯೂರಪ್ಪ ಮುಖ್ಯಮಂತ್ರಿ ಆದ ನಂತರ ಮಳೆ ಹೆಚ್ಚಾಗಿದೆ ಎನ್ನುವ ಕುರಿತು ರಾಜಕೀಯ ವಲಯದಲ್ಲಿ ಚರ್ಚೆ ಜೋರಾಗಿದೆ. ಈ ಬಗ್ಗೆ ಅಧಿವೇಶನದಲ್ಲಿ ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ ಕೂಡ ವ್ಯಂಗ್ಯವಾಡಿದ್ದರು. ಜಾಮೀನು ಪಡೆದು ಜೈಲಿನಿಂದ ಹೊರ ಬಂದಿರುವ ಕಾಂಗ್ರೆಸ್​ ನಾಯಕ ಡಿಕೆ ಶಿವಕುಮಾರ್​ ಕೂಡ ಬಿಎಸ್​ವೈ ಬಗ್ಗೆ ಇದೇ ರೀತಿಯ ವ್ಯಂಗ್ಯವಾಡಿದ್ದಾರೆ.

ಸೋಮವಾರ ತಡರಾತ್ರಿ ಆದಿಚುಂಚನಗಿರಿ ಪೀಠಾಧಿಪತಿ ನೀರ್ಮಾಲಾನಂದ ಸ್ವಾಮಿಜಿ ಭೇಟಿ ಬಳಿಕ ಡಿಕೆಶಿ ಮಾಧ್ಯಮದ ಜೊತೆ ಮಾತನಾಡಿದರು. ಯಡಿಯೂರಪ್ಪ ಸಿಎಂ ಆದಮೇಲೆ ಮಳೆ ಹೆಚ್ಚಾಗಿದೆ ಎಂಬ ವಿಚಾರಕ್ಕೆ ಉತ್ತರಿಸಿದ ಅವರು, “ಪುಣ್ಯವಂತರು ಬಹಳ ಒಳ್ಳೆಯ ಮಾರ್ಗದಲ್ಲಿ ಸಿಎಂ ಆಗಿದ್ದಾರೆ. ಹಾಗಾಗಿ ಮಳೆ ಬೆಳೆ ಚೆನ್ನಾಗಿ ಆಗಲೇಬೇಕು. ನೆರೆ ಸಂತ್ರಸ್ತರನ್ನು ಸರ್ಕಾರ ರಕ್ಷಣೆ ಮಾಡಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ,” ಎಂದರು ಅವರು. ಈ ವೇಳೆ ಮುಂದಿನ ದಿನಗಳಲ್ಲಿ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಭರವಸೆಯನ್ನು ಅವರು ನೀಡಿದರು.

ಇದನ್ನೂ ಓದಿ: ಯಡಿಯೂರಪ್ಪರಿಂದ ನಾನು ಪಾಠ ಕಲಿಯಬೇಕಿಲ್ಲ; ಸಿದ್ದರಾಮಯ್ಯ ಆಕ್ರೋಶ

ನಿರ್ಮಾಲಾನಂದ ಸ್ವಾಮೀಜಿ ಭೇಟಿ ವೇಳೆ ಏನೆಲ್ಲ ಚರ್ಚೆಯಾಯ್ತು ಎಂದು ಹೇಳಲು ಸಾಧ್ಯವಿಲ್ಲ ಎಂದರು ಡಿಕೆಶಿ. “ನಿರ್ಮಾಲಾನಂದ ಸ್ವಾಮೀಜಿ ನಾನು ಇಲ್ಲದಿದ್ದಾಗ ಬಂದು ನಮ್ಮ ಧರ್ಮಪತ್ನಿಗೆ ಧೈರ್ಯ ತುಂಬಿದ್ದಾರೆ. ನಮ್ಮ ಸಮುದಾಯದ ಮಠ, ನಮ್ಮ ಸಮುದಾಯದ ಸ್ವಾಮೀಜಿಯನ್ನು ಭೇಟಿ ಮಾಡಿ ಮಾತನಾಡಿದ್ದೇನೆ. ಏನೆಲ್ಲ ಮಾತುಕತೆ ಆಯ್ತು ಎಂದು ಹೇಳಲು ಸಾಧ್ಯವಿಲ್ಲ. ಇವತ್ತು ನಮ್ಮ‌ ತಂದೆ ಕಾರ್ಯ ಇತ್ತು. ರಾಜಕಾರಣಕ್ಕೆ ಬಂದ ಮೇಲೆ ಟೈಂ ಎನ್ನುವುದೇ ಇರುವುದಿಲ್ಲ. ಮೈಸೂರು ಚಾಮುಂಡಿ ಬೆಟ್ಟಕ್ಕೆ, ಸುತ್ತೂರು ಮಠಕ್ಕೂ ಭೇಟಿ ನೀಡಬೇಕಿದೆ,” ಎಂದರು ಅವರು.

ಜೈಲಿನಿಂದ ಬಂದ ಮೇಲೆ ಡಿಕೆಶಿಗೆ ಬೆನ್ನು ನೋವು ಹೆಚ್ಚಿದೆಯಂತೆ. ಹೀಗಾಗಿ ಅವರಿಗೆ ಕೂರಲು ಸಾಧ್ಯವಾಗುತ್ತಿಲ್ಲ. ಕೆಲ ಹೊತ್ತು ನಿಲ್ಲಬಹುದಷ್ಟೆಯಂತೆ.

ಉಪಚುನಾವಣೆ ಬಗ್ಗೆ ಡಿಕೆಶಿ ಹೇಳಿದ್ದು ಹೀಗೆ:

ರಾಜ್ಯದಲ್ಲಿ ಶೀಘ್ರವೇ ಉಪಚುನಾವಣೆ ನಡೆಯಲಿದೆ. ಈ ಬಗ್ಗೆ ಡಿಕೆಶಿ ಪ್ರತಿಕ್ರಿಯೆ ನೀಡಿದ್ದಾರೆ. “ಯಾರೂ ಚುನಾವಣೆ ನಿಲ್ಲಿಸಲು ಸಾಧ್ಯವಿಲ್ಲ. ಚುನಾವಣೆ ಘೋಷಣೆ ಆಗಿ ಆಗಿದೆ,” ಎಂದು ಹೇಳುವ ಮೂಲಕ ಅನರ್ಹ ಶಾಸಕರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.(ವರದಿ: ಕಿರಣ್​ ಕೆಎನ್​)

First published:October 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ