news18-kannada Updated:July 2, 2020, 2:26 PM IST
ಡಿ.ಕೆ. ಶಿವಕುಮಾರ್ ಜೊತೆಗೆ ಈಶ್ವರ ಖಂಡ್ರೆ
ಬೆಂಗಳೂರು (ಜು. 2): ನಾವೆಲ್ಲರೂ ಕಾಂಗ್ರೆಸ್ಸಿಗರು ಎಂದು ಎದೆ ತಟ್ಟಿಕೊಳ್ಳಬೇಕು. ಬಿಜೆಪಿ ಯಾವುದೇ ಕಷ್ಟಪಡದೆ ಅಧಿಕಾರಕ್ಕೆ ಬಂದಿದೆ. ಬಿಜೆಪಿಯವರು ರಾಷ್ಟ್ರಭಕ್ರಿ, ದೇಶಪ್ರೇಮ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದವರು. ಆದರೆ, ನಿಜವಾದ ರಾಷ್ಟ್ರ ಭಕ್ತರು, ರಾಷ್ಟ್ರ ಪ್ರೇಮಿಗಳು ನಾವೇ. ಬಿಜೆಪಿ ನಾಯಕರು ನಮ್ಮ ದೇಶದ ಮುಗ್ಧ ಯೋಧರ ಶವದ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಈ ದೇಶದಿಂದ ಬಿಜೆಪಿಯ ದುರಾಡಳಿತವನ್ನು ತೊಲಗಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಕಿಡಿ ಕಾರಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾಗಿ ಇಂದು ಡಿ.ಕೆ. ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ವೇಳೆ ಮಾತನಾಡಿದ ಈಶ್ವರ ಖಂಡ್ರೆ, ಬಿಜೆಪಿಯವರ ಬಳಿ ಇರುವುದು ಕೇವಲ ಸುಳ್ಳು, ಮೋಸ, ವಂಚನೆ ಅಷ್ಟೇ. ಪೆಟ್ರೋಲ್, ಡೀಸೆಲ್ ಎಷ್ಟು ಹೆಚ್ಚಾಗಿದೆ? ದಿನಬಳಕೆಯ ವಸ್ತುಗಳ ಬೆಲೆ ಎಷ್ಟು ಏರಿಕೆಯಾಗಿದೆ? ಶತ್ರು ರಾಷ್ಟ್ರದ ಸೈನಿಕರು ನಮ್ಮ ದೇಶದ ಒಳ ನುಸುಳಿ ಬಂದಿದ್ದಾರೆ. ಆದರೂ ಕೇಂದ್ರ ಸರ್ಕಾರ ಬಾಯಿ ಮುಚ್ಚಿಕೊಂಡು ಸುಮ್ಮನಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: DK Shivakumar: ಬಿಜೆಪಿಯವರು ಎಷ್ಟು ಕೇಸಾದರೂ ಹಾಕಲಿ, ನಾನು ಬಗ್ಗೋ ಮಗನೇ ಅಲ್ಲ; ಡಿ.ಕೆ. ಶಿವಕುಮಾರ್ ಸವಾಲು
ಡಿ.ಕೆ. ಶಿವಕುಮಾರ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ನೇಮಕ ಮಾಡಿ 4 ತಿಂಗಳಾಗಿದೆ. ಆದರೆ, ಅದೇ ವೇಳೆ ಲಾಕ್ಡೌನ್ ಘೋಷಣೆಯಾದ ಕಾರಣದಿಂದ ಅವರ ಅಧಿಕಾರ ಸ್ವೀಕಾರ ಸಮಾರಂಭ ನಡೆಸಲು ಅನುಮತಿ ಸಿಕ್ಕಿರಲಿಲ್ಲ. ಆದರೆ, ಕೊನೆಗೂ ಡಿ.ಕೆ. ಶಿವಕುಮಾರ್ ಪದಗ್ರಹಣಕ್ಕೆ ಸಮಯ ಕೂಡಿಬಂದಿದ್ದು, ಇಂದು ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಅಧಿಕಾರ ಸ್ವೀಕಾರ ಮಾಡುವ ಸಮಾರಂಭವನ್ನು ರಾಜ್ಯದ 7,800 ಗ್ರಾಮ ಪಂಚಾಯ್ತಿಗಳಲ್ಲಿ ನೇರಪ್ರಸಾರ ಮಾಡಲಾಗಿದೆ. 20 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಈ ಕಾರ್ಯಕ್ರಮವನ್ನು ನೇರಪ್ರಸಾರದಲ್ಲಿ ವೀಕ್ಷಿಸಿದ್ದಾರೆ.
First published:
July 2, 2020, 2:25 PM IST