• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • DK Shivakumar: 'ಕಮಲ ಕೆರೆಯಲ್ಲಿದ್ರೆ ಚೆಂದ, ತೆನೆ ಹೊಲದಲ್ಲಿದ್ರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ರೆ ಚೆಂದ'! ಡಿಕೆಶಿ ಕವನ ವಾಚನ

DK Shivakumar: 'ಕಮಲ ಕೆರೆಯಲ್ಲಿದ್ರೆ ಚೆಂದ, ತೆನೆ ಹೊಲದಲ್ಲಿದ್ರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ರೆ ಚೆಂದ'! ಡಿಕೆಶಿ ಕವನ ವಾಚನ

ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್

ತೆನೆ ಹೊಲದಲ್ಲಿದ್ದರೆ ಚೆಂದ. ದಾನ ಧರ್ಮ ಮಾಡುವ ಕೈಗಳು ಅಧಿಕಾರದಲ್ಲಿದ್ದರೆ ಚೆಂದ ಎಂದು ಹೇಳುವ ಮೂಲಕ ಕಾಂಗ್ರೆಸ್​ ಅಭ್ಯರ್ಥಿಗೆ ಮತ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕರೆ ನೀಡಿದ್ದಾರೆ.

  • News18 Kannada
  • 2-MIN READ
  • Last Updated :
  • Mandya, India
  • Share this:

ಮಂಡ್ಯ: ಮಂಗಳೂರಿನಲ್ಲಿ (Mangaluru) ಕೊರಗಜ್ಜ ಉತ್ಸವಕ್ಕೆ ಅಡ್ಡಿ ಮಾಡಬಾರದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಇಂದು ನಡೆಯ ಬೇಕಿದ್ದ ರೋಡ್ ಶೋ ರದ್ದು ಮಾಡಿದ್ದಾರೆ. ಅದೇ ವಿಚಾರ ಇದೀಗ ರಾಜಕೀಯ ತಿರುವು ಪಡೆದಿದೆ. ಅಮಿತ್ ಶಾ ಭೇಟಿ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ವ್ಯಂಗ್ಯವಾಡಿದ್ದಾರೆ. ಅಮಿತ್ ಶಾ, ಪುತ್ತೂರಿನಲ್ಲಿ ರೋಡ್ ಶೋ (Road Show) ಮಾಡಬೇಕಿತ್ತು. ಆದರೆ ಲಾ & ಆರ್ಡರ್‌ ಸಮಸ್ಯೆ ಅಂತ ರೋಡ್ ಶೋ ಕ್ಯಾನ್ಸಲ್ ಆಗಿದೆ ಎಂದಿದ್ದಾರೆ. ಇವರು ಇನ್ನೇನು ರಕ್ಷಣೆ ಕೊಡುತ್ತಾರೆ. ಇದಕ್ಕಿಂತ ರಾಜ್ಯಕ್ಕೆ (Karnataka) ಅವಮಾನ ಬೇರೆ ಏನಿದೆ ಎಂದು ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ.


ಇನ್ನು, ಮಂಡ್ಯದಲ್ಲಿ ನಡೆಯುತ್ತಿರುವ ಮದ್ದೂರು ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಡಿ.ಕೆ ಶಿವಕುಮಾರ್ ಮಹಿಳಾ ಮತದಾರರ ಒಲೈಕೆಗೆ ಮುಂದಾದರು. ಈ ವೇಳೆ ಇತಿಹಾಸದ ಮೆಲುಕು ಹಾಕಿದ ಡಿ.ಕೆ ಶಿವಕುಮಾರ್, ಮದ್ದೂರಿನ ಸತ್ಯಾಗ್ರಹ ಸೌಧದ ಕುರಿತು ಶ್ಲಾಘನೆ ಮಾಡಿದರು, ಮಾಜಿ ಸಿಎಂ ಕೃಷ್ಣ ಅವರನ್ನು ಸ್ಮರಿಸಿಕೊಂಡರು.




ಇದನ್ನೂ ಓದಿ: Tumkur: ನವ ದಂಪತಿ ಬಾಳಲ್ಲಿ ಘೋರ ದುರಂತ, 2 ತಿಂಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ ಅಪಘಾತದಲ್ಲಿ ಸಾವು!


ಕುಮಾರಸ್ವಾಮಿಯನ್ನ ಮುಖ್ಯಮಂತ್ರಿ ಮಾಡಿದ್ದು ಕಾಂಗ್ರೆಸ್


ಕಳೆದ ಬಾರಿಯ ಚುನಾವಣೆ ಕುರಿತು ಮೆಲುಕು ಹಾಕಿದ ಅವರು, ಕಳೆದ ಬಾರಿ ಸಾಕಷ್ಟು ನಾಯಕರು ವಿರೋಧ ಮಾಡಿದರು. ನಾನೇ ಕುಮಾರಸ್ವಾಮಿಯವರ ಪರ ನಿಂತೆ. ಜೆಡಿಎಸ್​ಗೆ ಬಹಿರಂಗವಾಗಿ ಬೆಂಬಲ ನೀಡಿದ್ದೆವು. ಇದೇ ಕುಮಾರಸ್ವಾಮಿ ನಾನು ಡಿ.ಕೆ ಶಿವಕುಮಾರ್ ಜೋಡೆತ್ತು ಎಂದು ಹೇಳಿದ್ದರು. ಕುಮಾರಸ್ವಾಮಿಯನ್ನ ಮುಖ್ಯಮಂತ್ರಿ ಮಾಡಿದ್ದು ಕಾಂಗ್ರೆಸ್. ದೇವೇಗೌಡರನ್ನು ಪ್ರಧಾನಿ ಮಾಡಿದ್ದು ಇದೇ ಕಾಂಗ್ರೆಸ್ ಪಕ್ಷ ಎಂದು ಜೆಡಿಎಸ್ ಭದ್ರಕೋಟೆಯಲ್ಲಿ ದಳಪತಿಗಳ ವಿರುದ್ದ ಗುಡುಗಿದ್ದಾರೆ.


ನಾನೇ ಅಭ್ಯರ್ಥಿ ಎಂದು ಮತ ನೀಡಿ ಅಂತ ಡಿಕೆಶಿ ಮನವಿ


ಇದೇ ವೇಳೆ ಮತ್ತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ಹರಿಹಾಯ್ದ ಡಿ.ಕೆ ಶಿವಕುಮಾರ್, ಗ್ಯಾಸ್, ಸೇರಿದಂತೆ ದಿನ ನಿತ್ಯಬಳಕೆ ವಸ್ತುಗಳ ಬೆಲೆ ಏರಿಕೆಯಾಗಿದೆ. 200 ಯೂನಿಟ್ ಕರೆಂಟ್ ನಾವು ಉಚಿತವಾಗಿ ಕೊಟ್ಟಿಲ್ಲ ಎಂದರೆ ಮುಂದಿನ ಚುನಾವಣೆಯಲ್ಲಿ ಮತ ಕೇಳುವುದಿಲ್ಲ.


ಮದ್ದೂರಿನಲ್ಲಿ ಡಿ.ಕೆ ಶಿವಕುಮಾರ್ ಅಭ್ಯರ್ಥಿ ಎಂದು ತಿಳಿದು ನೀವು ಮತ ಹಾಕಬೇಕು. ಆ ಮೂಲಕ ನಿಮ್ಮ ಮಗನ ಕೈ ಬಲ ಪಡಿಸಿ ಎಂದು ಹೇಳುವ ಮೂಲಕ ಮತ್ತೆ ಪರೋಕ್ಷವಾಗಿ ನಾನೇ ಸಿಎಂ ಅಭ್ಯರ್ಥಿ ಎಂದು ಹೇಳಿದರು. ಅಲ್ಲದೆ, ಕಮಲ ಕೆರೆಯಲ್ಲಿದ್ದರೆ ಚೆಂದ. ತೆನೆ ಹೊಲದಲ್ಲಿದ್ದರೆ ಚೆಂದ. ದಾನ ಧರ್ಮ ಮಾಡುವ ಕೈಗಳು ಅಧಿಕಾರದಲ್ಲಿದ್ದರೆ ಚೆಂದ ಎಂದು ಹೇಳುವ ಮೂಲಕ ಕಾಂಗ್ರೆಸ್​ ಅಭ್ಯರ್ಥಿಗೆ ಮತ ನೀಡಬೇಕು ಎಂದು ಕರೆ ನೀಡಿದರು.


ಇದನ್ನೂ ಓದಿ: Suspected Terrorist: ಬೆಂಗಳೂರಿನಲ್ಲಿ ಶಂಕಿತ ಉಗ್ರ ವಶಕ್ಕೆ; ಐಸಿಸ್ ಜೊತೆ ನಿರಂತರ ಸಂಪರ್ಕ


ಕಾರ್ಯಕರ್ತರ ಪ್ರಶ್ನೆಗೆ ಡಿಕೆ ಶಿವಕುಮಾರ್ ಉತ್ತರ


ಇನ್ನು, ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಮದ್ದೂರು ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಯಾರು? ಕಾರ್ಯಕರ್ತರಲ್ಲಿರುವ ಗೊಂದಲಕ್ಕೆ ತೆರೆ ಎಳೆಯಿರಿ ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ಉತ್ತರಿಸಿದ ಡಿಕೆ ಶಿವಕುಮಾರ್, ಇವೆಲ್ಲಾ ಆಟ ಬಿಟ್ಟು ಬಿಡಿ. ಮೊದಲು ಪಕ್ಷದ ಕೆಲಸ ಮಾಡಿಕೊಂಡು ಹೋಗಿ, ನಾನೇ ಅಭ್ಯರ್ಥಿ ಅಂತ ಅಂದುಕೊಳ್ಳಿ, ನಾವು ಕುರ್ಚಿಯನ್ನ ಮಾರಿಕೊಳ್ಳುವುದಿಲ್ಲ. ಕಾಂಗ್ರೆಸ್ ಪಕ್ಷದ ಚಿಹ್ನೆ ನೋಡಿ ಈ ಬಾರಿ ಮತ ಹಾಕಿ, ವ್ಯಕ್ತಿಯನ್ನು ನೋಡಿ ಅಲ್ಲ ಎಂದು ಹೇಳಿದರು.

Published by:Sumanth SN
First published: