ನೀವು ಶಿಕ್ಷಣ, ಉದ್ಯೋಗ ನೀಡಿದ್ದರೆ ಅವರು ಯಾಕೆ ಪಂಕ್ಚರ್​ ಹಾಕ್ತಾರೆ; ತೇಜಸ್ವಿ ಸೂರ್ಯಗೆ ಡಿಕೆಶಿ ಚಾಟಿ

ಪಂಕ್ಚರ್​ ಹಾಕೋರು, ಕಸಗುಡಿಸೋರು ಪ್ರತಿಭಟನೆ ಮಾಡುತ್ತಾರೆ ಎಂದು ತೇಜಸ್ವಿ ಸೂರ್ಯ ಹೇಳುತ್ತಾರೆ, ಅವರು ಕಸ ಗುಡಿಸದಿದ್ದರೆ ನೀವು ಆರಾಮಗೆ ಇರಲು ಸಾಧ್ಯಾನಾ. ಇವತ್ತು ಸ್ವಚ್ಛ ಭಾರತವಾಗುತ್ತಿರುವುದು ಅವರಿಂದ ಎಂಬುದನ್ನು ಮರೆಯದಿರಿ

Seema.R
Updated:December 23, 2019, 4:22 PM IST
ನೀವು ಶಿಕ್ಷಣ, ಉದ್ಯೋಗ ನೀಡಿದ್ದರೆ ಅವರು ಯಾಕೆ ಪಂಕ್ಚರ್​ ಹಾಕ್ತಾರೆ; ತೇಜಸ್ವಿ ಸೂರ್ಯಗೆ ಡಿಕೆಶಿ ಚಾಟಿ
ಡಿ.ಕೆ. ಶಿವಕುಮಾರ್
  • Share this:
ರಾಮನಗರ (ಡಿ.23): ಬಡವರಿಗೆ ನೀವು ಶಿಕ್ಷಣ ಹಾಗೂ ಉದ್ಯೋಗ ನೀಡಿದ್ದರೆ, ಅವರು ಯಾಕೆ ಪಂಕ್ಚರ್​ ಹಾಕುವುದು, ಕಸ ಗುಡಿಸುವುದು ಮಾಡುತ್ತಾರೆ ಹೇಳಿ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್​ ಸಂಸದ ತೇಜಸ್ವಿ ಸೂರ್ಯಗೆ ಚಾಟಿ ಬೀಸಿದ್ದಾರೆ. 

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ, ಕನಕಪುರದ ಮುಸ್ಲಿಂ ಸಮುದಾಯದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಪಂಕ್ಚರ್​ ಹಾಕೋರು, ಕಸಗುಡಿಸೋರು ಪ್ರತಿಭಟನೆ ಮಾಡುತ್ತಾರೆ ಎಂದು ತೇಜಸ್ವಿ ಸೂರ್ಯ ಹೇಳುತ್ತಾರೆ, ಅವರು ಕಸ ಗುಡಿಸದಿದ್ದರೆ ನೀವು ಆರಾಮಗೆ ಇರಲು ಸಾಧ್ಯಾನಾ. ಇವತ್ತು ಸ್ವಚ್ಛ ಭಾರತವಾಗುತ್ತಿರುವುದು ಅವರಿಂದ ಎಂಬುದನ್ನು ಮರೆಯದಿರಿ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಕೆಲವೆಡೆ ಲಾಠಿಚಾರ್ಜ್ ಆಗಿದೆ. ನೂರಾರು ಜನರ ಮೇಲೆ ಎಫ್​ಐಆರ್​​ ದಾಖಲಾಗಿದೆ. ಇದು ಪೊಲೀಸರು ತಪ್ಪು ಅಂತಾ ನಾ ಹೇಳಲ್ಲ.  ಸರ್ಕಾರ ಹೇಳಿದ ಹಾಗೇ ಪೊಲೀಸರು ಕೇಳುತ್ತಾರೆ. ರಾಜ್ಯದ ಸಿಎಂ ಹಾಗೂ ಗೃಹ ಸಚಿವರ ವಿರುದ್ಧ ದೂರು ದಾಖಲಾಗಬೇಕು. ಜನರ ವಿರುದ್ಧ ಅಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಇದನ್ನು ಓದಿ: ಸಿಐಡಿ ತನಿಖೆಗೆ ಒಪ್ಪಿಗೆ ಇಲ್ಲ, ಮಂಗಳೂರು ಘಟನೆ ಕುರಿತು ನ್ಯಾಯಾಂಗ ತನಿಖೆಯೇ ಆಗಬೇಕು; ಸಿದ್ದರಾಮಯ್ಯ

ಜಾರ್ಖಂಡ್​​ನಲ್ಲಿ ಕಾಂಗ್ರೆಸ್ ಮೈತ್ರಿಕೂಟದ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜಾರ್ಖಂಡ್​ನಲ್ಲಿ ಜನ ತೀರ್ಪು ತೋರಿಸಿದ್ದಾರೆ. ದೇಶದಲ್ಲಿ ಬದಲಾವಣೆಯಾಗುತ್ತಿದೆ. ಕೇಂದ್ರದ ಕಾನೂನು ದೇಶಕ್ಕೆ ಹೇಗೆ ಮಾರಕ ಜನರಿಗೆ ಗೊತ್ತಾಗಿದೆ. ದೇಶದಲ್ಲಿ ಬಿಜೆಪಿ ಅಂತ್ಯಕ್ಕೆ ಇದು ಪ್ರಾರಂಭ. ಇದನ್ನು ಬಿಜೆಪಿ ಸ್ನೇಹಿತರಿಗೆ ಇನ್ನೊಮ್ಮೆ ಮನದಟ್ಟು ಮಾಡುತ್ತಿದ್ದೇವೆ ಎಂದರು.

(ವರದಿ: ಎಟಿ ವೆಂಕಟೇಶ್​)
Published by: Seema R
First published: December 23, 2019, 4:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading