ಚಿತ್ರದುರ್ಗ: ಸಚಿವ ಶ್ರೀರಾಮುಲು (Minister Sriramulu) ನನ್ನ ಅಣ್ಣ ಅವನು, ನನಗೂ ಅವನಿಗೂ ಬಹಳ ಪ್ರೀತಿ, ವಿಶ್ವಾಸ. ಬಳ್ಳಾರಿಯಿಂದ ಬಂದ ಶ್ರೀರಾಮುಲುಗೆ ಮೊಳಕಾಲ್ಮೂರು (Molakalmuru) ಕ್ಷೇತ್ರದ ಜನ ಶಾಸಕನಾಗಿ ಮಾಡಿದ್ದಾರೆ. ಜನರು ವಿಧಾನಸೌಧಕ್ಕೆ (Vidhana soudha) ಕಳಿಸಿ ಮಂತ್ರಿ ಮಾಡಿದ್ದಾರೆ. ಆದರೆ ಶ್ರೀರಾಮುಲು ಕ್ಷೇತ್ರದ ಜನರ ಋಣವನ್ನು ತೀರಿಸಿಲ್ಲ, ಅಧಿಕಾರ ಇದ್ದಾಗ ಹರಿಯಲು ಆಗದೆ, ಇಲ್ಲದಾಗ ಹರಿತಿನಿ ಅಂದರೆ ಹೇಗೆ? ಇನ್ನು ಐವತ್ತು ದಿನಕ್ಕೆ ನೀನು ಮಾಜಿ ಮಂತ್ರಿ ಆಗ್ತಿರಿಯಪ್ಪ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧ, ಬೊಮ್ಮಾಯಿ ಮನೆಯಲ್ಲಿ ಮಲಗುವುದು ಬಿಟ್ಟು ಚಾಲನ್ ಪಕ್ಕ ಮಲಗಿದ್ದ ಎಂದು KPCC ಅಧ್ಯಕ್ಷ ಡಿಕೆ ಶಿವಕುಮಾರ್ ರಾಮುಲು ಹಾಗೂ ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ಮಾಡಿ ಕಿಡಿಕಾರಿದ್ದಾರೆ. ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯ ಡಿಕೆ ಶಿವಕುಮಾರ್ ತಂಡ ಸೋಮವಾರ ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮ ನಡೆಯಿತು.
ಶಾಸಕಿ ಪೂರ್ಣಿಮಾ ರಕ್ತದಲ್ಲಿ ಕಾಂಗ್ರೆಸ್ ಇದೆ
ಈ ವೇಳೆ ಹಿರಿಯೂರಲ್ಲಿ ಭಾಷಣ ಮಾಡಿದ ಡಿಕೆ ಶಿವಕುಮಾರ್, ಮೂರುವರೆ ವರ್ಷದಿಂದ ಆಪರೇಷನ್ ಲೋಟಸ್ ಮಾಡುವ ಮೂಲಕ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾ ರಕ್ತದಲ್ಲಿ ಕಾಂಗ್ರೆಸ್ ಇದೆ. ಮಾಜಿ ಸಚಿವ ದಿ.ಎ.ಕೃಷ್ಣಪ್ಪ ಅವರ ಪುತ್ರಿ ಪೂರ್ಣಿಮಾ, ಇವತ್ತು ಅಥವಾ ನಾಳೆ ಮಂತ್ರಿ ಆಗ್ತೀನಿ ಅಂತ ಕಾಯ್ತಿದ್ದಾರೆ ಎಂದರು.
ಮೊಳಕಾಲ್ಮೂರಿನಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ನೆರೆದ ಜನರನ್ನುದ್ದೇಶಿಸಿ ಮಾತನಾಡಿದೆ. ಮೊಳಕಾಲ್ಮೂರು ಒಂದು ಐತಿಹಾಸಿಕ ಸ್ಥಳ. ಭಾರತ್ ಜೋಡೋ ಯಾತ್ರೆಯ ನೆನಪಿನಲ್ಲಿ ಇಲ್ಲಿ ಒಂದು ತರಬೇತಿ ಕೇಂದ್ರವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಆದರೆ ಈ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ.#PrajaDhwaniYatra
1/3 pic.twitter.com/D88cluLxgC
— DK Shivakumar (@DKShivakumar) February 6, 2023
ಗೊಲ್ಲ ಸಮುದಾಯವನ್ನು ಬಿಜೆಪಿ ಕಡೆಗಣಿಸಿದೆ, ಕಾಂಗ್ರೆಸ್ ಪಕ್ಷ ನಾಗರಾಜ್ ಯಾದವ್ ರನ್ನು MLC ಮಾಡಿದೆ. ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಕೇಂದ್ರದಲ್ಲಿ ಒಪ್ಪಿಗೆ ಸಿಕ್ಕಿಲ್ಲ, ಮಾನ, ಮರ್ಯಾದೆ ಇದ್ದರೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಮತ ಕೇಳಬಾರದು ಎಂದು ಡಿಕೆ ಶಿವಕುಮಾರ್ ಆಗ್ರಹಿಸಿದರು.
ಬಿಜೆಪಿ ಪಕ್ಷ ಜಾತಿ ಧರ್ಮದ ಹೆಸರಲ್ಲಿ ಯುದ್ಧ ನಡೆಸುತ್ತಿದೆ. ಜಾತಿ, ಧರ್ಮದ ಮೇಲೆ ಬಿಜೆಪಿ ಮತ ಕೇಳುತ್ತಿದೆ. ಹಿಂದೂಗಳು ಮುಂದು ಎಂದು ಬಿಜೆಪಿ ಹೇಳುತ್ತದೆ. ಕಾಂಗ್ರೆಸ್ ಎಲ್ಲಾ ಸಮುದಾಯದವರು ಒಂದು ಎನ್ನುತ್ತದೆ. ಇನ್ನೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಸೇರಲು ಆಹ್ವಾನ, ಜೆಡಿಎಸ್ ಅಧಿಕಾರಕ್ಕೆ ಬರದಿದ್ದರೆ ನಿವೃತ್ತಿ ಎಂದು ಹೆಚ್ಡಿಕೆ ಹೇಳಿದ್ದಾರೆ.
ಕಾಂಗ್ರೆಸ್ ಜೊತೆಗೆ ಬನ್ನಿ
ಅಲ್ಲಿವರೆಗೆ ಕಾಯುವುದು ಬೇಡ, ಡಿಕೆಶಿ ಜತೆಗೆ ಬನ್ನಿ, ಮನೆ ಉರಿಯುತ್ತದೆ, ಬೆಲೆ ಗಗನಕ್ಕೇರಿದೆ, ಆದಾಯ ಪಾತಾಳಕ್ಕಿಳಿದಿದೆ. ಕಾಂಗ್ರೆಸ್ ಪಕ್ಷ ಎರಡು ಗ್ಯಾರಂಟಿ ನೀಡುತ್ತಿದೆ. ಅದರಲ್ಲಿ ಒಂದನೆಯದ್ದು ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತ, ಎರಡನೆಯದ್ದು, ಮನೆಯ ಯಜಮಾನಿಗೆ 2 ಸಾವಿರ ರೂ. ಖಚಿತ ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಪಕ್ಷದಿಂದ ಗ್ಯಾರಂಟಿ ಚೆಕ್ ನೀಡುತ್ತೇವೆ. ಮೇನಲ್ಲಿ ಅಧಿಕಾರಕ್ಕೆ ಬಂದಾಕ್ಷಣ ಜೂನ್ ನಿಂದಲೇ ಯೋಜನೆ ಮಾತಿನಂತೆ ನಡೆಯದಿದ್ದರೆ ನಾವು ಮತ ಕೇಳಲು ಬರಲ್ಲ. ಬಿಜೆಪಿ ಸರ್ಕಾರ ವಿದ್ಯಾರ್ಥಿಗಳ ಸ್ಕಾಲರ್ ಶಿಪ್, ಶೂ, ಯುನಿಫಾರ್ಮ್ ತೆಗೆದಿದೆ.
ನಮಗೆ ಗಂಡು ಯಾರೆಂದು ಗೊತ್ತು
ಶೋಭಕ್ಕನ ಕಾಲದಲ್ಲಿ ಸೈಕಲ್, ಸೀರೆ ಕೊಡುತ್ತಿದ್ದರು, ಈಗೇನೂ ಇಲ್ಲ, ಬಿಜೆಪಿ ಸರ್ಕಾರ 40% ಲಂಚ ನಿಲ್ಲಿಸಬೇಕು, 10 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯನ್ನು 20 ಸಾವಿರ ಮಾಡಿದ್ದೇನೆ, ನಾನೇ ವಿದ್ಯುತ್ ಸಚಿವ ಆಗಿದ್ದಾಗ ವಿದ್ಯುತ್ ಉತ್ಪಾದನೆ ಮಾಡಿದ್ದೇನೆ ಬೊಮ್ಮಾಯಿ ಅಣ್ಣ, ನಮಗೆ ಗಂಡು ಯಾರೆಂದು ನಮಗೆ ಗೊತ್ತಿದೆ. ಈ ಪಕ್ಷದ ಅಭ್ಯರ್ಥಿ ಯಾರು ಎಂದು ಗೊತ್ತಿದೆ ಎಂದು ಹೇಳಿದ್ರು.
ಇದನ್ನೂ ಓದಿ: Cabinet Expansion: ಸಂಪುಟ ವಿಸ್ತರಣೆ ಮಾಡದ ಹಿಂದಿನ ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ
ಈ ವೇಳೆ ಟಿಕೆಟ್ ಘೋಷಣೆ ಮಾಡಿ ಎಂದ ಜನರಿಗೆ ನಾನೇ ಕಣಯ್ಯ ಕ್ಯಾಂಡಿಡೇಟ್, ನಾನೇ ಗಂಡು, ಕಾಂಗ್ರೆಸ್ ಪಕ್ಷ ಯಾರಿಗೆ ಹೇಳುತ್ತೆ ಅವರೇ ಅಭ್ಯರ್ಥಿ. ಟಿಕೆಟ್ಗೆ ಅರ್ಜಿ ಸಲ್ಲಿಸಿದ ಎಲ್ಲರೂ ಒಪ್ಪಿದ್ದಾರೆ ಎಂದು ಹೇಳಿದ್ರು.
ಬಿಜೆಪಿ ವಿರುದ್ಧ ಕಿಡಿ
ಇನ್ನೂ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಭದ್ರಾ ಯೋಜನೆಯಲ್ಲಿ ಅಕ್ರಮದ ಬಗ್ಗೆ ಪತ್ರ ಬರೆದಿದ್ದಾರೆ. ಗುತ್ತಿಗೆದಾರ ಸಂಘದ ಅದ್ಯಕ್ಷ ಕೆಂಪಣ್ಣ 40% ಲಂಚದ ಬಗ್ಗೆ ಪತ್ರ, ಹೆಚ್.ವಿಶ್ವನಾಥ್ 20% ಲಂಚದ ಬಗ್ಗೆ ಮಾತಾಡಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ