ನನ್ನ ಹೆಸರಿನಿಂದ ಮಾರ್ಕೆಟಿಂಗ್​ ಜಾಸ್ತಿ; ಸಿಡಿ ಸಂತ್ರಸ್ತೆ ಸಹೋದರನ ಹೇಳಿಕೆಗೆ ಡಿಕೆಶಿ ತಿರುಗೇಟು

ಮುಖ್ಯಮಂತ್ರಿಗಳ ವಿರುದ್ಧ ಅವರದೇ ಸಚಿವರು ರಾಜ್ಯಪಾಲರಿಗೆ ದೂರು ನೀಡಿರುವುದು ರಾಜ್ಯದ ಇತಿಹಾಸದಲ್ಲಿ ಮೊದಲು

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

 • Share this:
  ಸಿಡಿ ಪ್ರಕರಣದ ವಿಚಾರದಲ್ಲಿ ಸಂತ್ರಸ್ತೆಯ ಸಹೋದರ ಡಿಕೆ ಶಿವಕುಮಾರ್​ ಹೆಸರು ಹೇಳುತ್ತಿರುವ ಕುರಿತು ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷರು, ಯಾರು ಏನಾದ್ರು ಹೇಳಿಕೊಳ್ಳಲಿ ಎಂದಿದ್ದಾರೆ. ಅಲ್ಲದೇ, ಸಿಡಿ ಕೇಸ್, ನನಗೆ ಸಂಬಂಧಪಡದ ವಿಚಾರ. ನನ್ನ ಹೆಸರು ಹೇಳಿದರೆ ಅವರಿಗೆ ಮಾರ್ಕೆಟಿಂಗ್ ಜಾಸ್ತಿ. ಹೀಗಾಗಿ ನನ್ನ ಹೆಸರು ತಗೊಳುತ್ತಿದ್ದಾರೆ ಎಂದರು. ಇದೇ ವೇಳೆ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ಪತ್ರ ಬರೆದ ವಿಚಾರ ಕುರಿತು ಪ್ರತಿಕ್ರಿಯಿಸಿ, ಹಿರಿಯ ಸಚಿವರಿಗೇ ಸಿಎಂ ಮೇಲೆ ನಂಬಿಕೆಯಿಲ್ಲ. 1200 ಕೋ. ಅಕ್ರಮ ನಡೆದ ಬಗ್ಗೆ ಹೇಳಿದ್ದಾರೆ. ತಕ್ಷಣ ಸಿಎಂ ರಾಜೀನಾಮೆ ನೀಡಬೇಕು. ಇಲ್ಲವಾದ್ರೆ ಸಚಿವರ ರಾಜೀನಾಮೆ ಪಡೆಯಬೇಕು. ಇಂದು ಸಂಜೆಯೊಳಗೆ ಸಿಎಂ ನಿರ್ಧರಿಸಬೇಕು ಎಂದು ಒತ್ತಾಯಿಸಿದರು.

  ಅಲ್ಲದೇ ಮುಖ್ಯಮಂತ್ರಿಗಳ ವಿರುದ್ಧ ಸಚಿವರೇ ಈ ರೀತಿ ಸಿಡಿದಿದ್ದಿರುವ ಹಿನ್ನಲೆ ಯಾವ ರೀತಿ ಹೋರಾಟ ರೂಪಿಸಬಹುದು ಎಂದು ಸಿದ್ದರಾಮಯ್ಯ ಜತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಕಾಂಗ್ರೆಸ್ ಈ ವಿಚಾರದಲ್ಲಿ ಹೋರಾಟ ಮಾಡಲಿದೆ. ರಾಜ್ಯಪಾಲರನ್ನ ಭೇಟಿ ಮಾಡುವ ಕುರಿತು ವಿಪಕ್ಷ ನಾಯಕರ ಜೊತೆ ಚರ್ಚಿಸಿ ನಿರ್ಧರಿಸುತ್ತೇವೆ ಎಂದರು.

  ಮುಖ್ಯಮಂತ್ರಿಗಳ ವಿರುದ್ಧ ಅವರದೇ ಸಚಿವರು ರಾಜ್ಯಪಾಲರಿಗೆ ದೂರು ನೀಡಿರುವುದು ರಾಜ್ಯದ ಇತಿಹಾಸದಲ್ಲಿ ಮೊದಲು. ಈ ಕುರಿತು ಬಿಜೆಪಿ ವರಿಷ್ಠರಿಗೆ ದೂರು ಕೊಟ್ಟಿರಬಹುದು. ಅದಕ್ಕೆ ನಮ್ಮ ಆಕ್ಷೇಪ ಇಲ್ಲ, ಆದ್ರೆ ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾರೆ. ಈಗ ತಿಪ್ಪೇ ಸಾರಿಸಲು ಇನ್ನೇನು ಉಳಿದಿಲ್ಲ. ಸಿಎಂ ವಿರುದ್ಧ ಸಚಿವರೇ ಬಂಡಾಯ ಸಾರಿದ್ದಾರೆ. ಒಂದೋ ಸಿಎಂ ರಾಜೀನಾಮೆ ಕೊಡಬೇಕು ಅಥವಾ ಈಶ್ವರಪ್ಪ ರಾಜೀನಾಮೆ ಕೊಡಬೇಕು.

  ಈಶ್ವರಪ್ಪ ಸಂಪುಟದ ಹಿರಿಯ ಸಚಿವರು. ಸಿಎಂ ಕೂಡ ಇವರ ಹೆಸರು ಶಿಫಾರಸು ಮಾಡಿ ಇವರ ಮಂತ್ರಿ ಮಾಡಿದ್ದಾರೆ. ಅನುದಾನದಲ್ಲಿ ತಾರತಮ್ಯ ಆಗಿದೆ ಅಂತ ನಾವು ಮೊದಲೇ ಹೇಳಿದ್ದೇವು. ಅದನ್ನು ಈಗ ಸಚಿವರೇ ಆರೋಪಿಸಿದ್ದಾರೆ. ಇದಕ್ಕಿಂತ ಇನ್ನೇನು ಸಾಕ್ಷಿ ಬೇಕು ಎಂದರು.

  ಈಶ್ವರಪ್ಪ ಪತ್ರ ಬರೆದಿರುವ ಕುರಿತು ಹೈಕಮಾಂಡ್ ಕೆಂಡಾಮಂಡಲವಾಗಿದೆ. ಈ ಕುರಿತು ದೆಹಲಿಯಲ್ಲಿ ಮಾತನಾಡಿದ ಉಸ್ತುವಾರಿ ಅರುಣ್ ಸಿಂಗ್, ಹಿರಿಯ ಸಚಿವರು ಬಹಿರಂಗ ಪತ್ರ ಬರೆಯಬಾರದು. ಸದ್ಯ ಚುನಾವಣೆ ಮೇಲೆ ಗಮನ ಹರಿಸಿದ್ದೇವೆ. ಬಳಿಕ ನಾವು ಈ ಬಗ್ಗೆ ಚರ್ಚೆ ಮಾಡುತ್ತೇವೆ. ನಾವು ಸಿಎಂ ಜೊತೆಗೆ ‌ಮಾತುನಾಡುತ್ತೇವೆ ಎಂದರು.
  Published by:Seema R
  First published: