ಸಂವಿಧಾನ ಬದಲಾವಣೆ ಮಾಡಲು ಈ ಕಾಯ್ದೆ ಅಡಿಪಾಯ ; ಡಿಕೆ ಶಿವಕುಮಾರ್​ ಆಕ್ರೋಶ

ಈ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಸರ್ಕಾರ ಸುಖಾಸುಮ್ಮನೆ ಜನರಿಗೆ ತೊಂದರೆ ಕೊಡುತ್ತಿದೆ. ದೇಶದಲ್ಲಿ ಅಶಾಂತಿ ವಾತವಾರಣ ನಿರ್ಮಾಣ ಮಾಡುತ್ತಿದೆ. ಗ್ರಾಮೀಣ ಪ್ರದೇಶದ ಜನರ ಬಳಿ ರೇಷನ್​ ಕಾರ್ಡ್​ ಇಲ್ಲ ಎನ್ನುವಾಗ ಇವರು ಕೇಳುವ ದಾಖಲೆ ಎಲ್ಲಿಂದ ತರಬೇಕು

Seema.R | news18-kannada
Updated:December 20, 2019, 1:28 PM IST
ಸಂವಿಧಾನ ಬದಲಾವಣೆ ಮಾಡಲು ಈ ಕಾಯ್ದೆ ಅಡಿಪಾಯ ; ಡಿಕೆ ಶಿವಕುಮಾರ್​ ಆಕ್ರೋಶ
ಡಿ.ಕೆ. ಶಿವಕುಮಾರ್
  • Share this:
ಬೆಂಗಳೂರು (ಡಿ.20):  ಎಲ್ಲಾ ಧರ್ಮದವರನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕು ಎಂಬ ಕನಸಿನೊಂದಿಗೆ ಬಾಬಾ ಸಾಹೇಬ್​ ಅಂಬೇಡ್ಕರ್​ ಅವರು ಎಲ್ಲರಿಗೂ ಸಮಾನತೆಯ ಸಂವಿಧಾನವನ್ನು ರಚಿಸಿದರು. ಎಲ್ಲರನ್ನು ಸಮಾನವಾಗಿ ಮುನ್ನಡೆಸಬೇಕು ಎಂಬ ಅವರ ಸಂವಿಧಾನದ ಆಶಯದ ಅಡಿಪಾಯದ ಕಗ್ಗೊಲೆ ನಡೆಯುತ್ತಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಕಾಯ್ದೆ ಅಸಂವಿಧಾನಿಕ ಎಂದು ಡಿಕೆ ಶಿವಕುಮಾರ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಪೌರತ್ವ ಕಾಯ್ದೆ ವಿರುದ್ಧ ಕೇಂದ್ರ , ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿರುವ ಕುರಿತು ವಿರೋಧ ವ್ಯಕ್ತಪಡಿಸಿ ಮಾತನಾಡಿದ ಅವರು ಇದಕ್ಕೆಲ್ಲಾ ನೇರ ಕಾರಣ ಬಿಜೆಪಿ ನಾಯಕರು ಎಂದಿದ್ದಾರೆ.

ಈ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಸರ್ಕಾರ ಸುಖಾಸುಮ್ಮನೆ ಜನರಿಗೆ ತೊಂದರೆ ಕೊಡುತ್ತಿದೆ. ದೇಶದಲ್ಲಿ ಅಶಾಂತಿ ವಾತವಾರಣ ನಿರ್ಮಾಣ ಮಾಡುತ್ತಿದೆ. ಗ್ರಾಮೀಣ ಪ್ರದೇಶದ ಜನರ ಬಳಿ ರೇಷನ್​ ಕಾರ್ಡ್​ ಇಲ್ಲ ಎನ್ನುವಾಗ ಇವರು ಕೇಳುವ ದಾಖಲೆ ಎಲ್ಲಿಂದ ತರಬೇಕು ಎಂದು ಪ್ರಶ್ನಿಸಿದರು.

ಕಾಯ್ದೆ ಈ ದೇಶದ ಐಕ್ಯತೆ, ಶಾಂತಿ ಎಲ್ಲವನ್ನೂ ಹಾಳು ಮಾಡುತ್ತಿದೆ.  ಈ ದೇಶದಲ್ಲಿ ಹುಟ್ಟಿರೋಕೆ ನಿಮಗೆ ಯಾಕೆ ಪ್ರಮಾಣ ಪತ್ರ ಕೊಡಬೇಕೇ. ಈ ದೇಶ ಉಳಿಯಲು ನಮ್ಮ ಹಿರಿಯರು ಹೋರಾಡಿದ್ದಾರೆ. ಒಗ್ಗಟ್ಟಾಗಿ ನಾವು ಬದುಕುತ್ತಿದ್ದೇವೆ. ರಾಜ್ಯದಲ್ಲಿ ಇಂಟರ್​ನೆಟ್​ ಸೇವೆ ಬಂದ್​ ಮಾಡಲಾಗಿದೆ.  ಕಾಶ್ಮೀರದಲ್ಲಿ ಇದೇ ಕೆಲಸವನ್ನ ಜಾರಿ ಮಾಡಿ‌ ಅಲ್ಲಿ ವಿಶೇಷ ಸ್ಥಾನಮಾನವನ್ನು ತೆಗೆದುಹಾಕಿತು. ದೇಶದಲ್ಲಿರುವ ಮಕ್ಕಳಿಗೆ ವಿದ್ಯಾಭ್ಯಾಸ, ಯುವಕರಿಗೆ ಉದ್ಯೋಗ ನೀಡಲು ಆಗುತ್ತಿಲ್ಲ. ಇನ್ನು ಹೊರಗಿನವರಿಗೆ ಇಲ್ಲಿಗೆ ತಂದು ಏನು ಸವಲತ್ತು ಕೊಡುತ್ತೀರಾ? ಅವರನ್ನು ನಮ್ಮ ಸ್ಥಿತಿಗೆ ತರುತ್ತೀರಾ ಎಂದು ಟೀಕಿಸಿದರು

ಶಾಂತಿಯುತ ಪ್ರತಿಭಟನೆ ಮಾಡುವವರಿಗೆ ನೀವೇ ಪ್ರಚೋದನೆ ನೀಡುತ್ತಿದ್ದೀರಾ. 144 ಸೆಕ್ಷನ್​ ಯಾಕಾಗಿ ಹಾಕಿದ್ದೀರಾ. ಅಂತಹದ್ದು ಏನಾಗಿದೆ. ಪ್ರಜಾಪ್ರಭುತ್ವದಲ್ಲಿ ಯಾರು ಧ್ವನಿ ಎತ್ತಬಾರದಾ. ಬ್ರಿಟಿಷರ ಕಾಲದಲ್ಲಿಯೇ ನಮಗೆ ಅಷ್ಟೋ ಇಷ್ಟೋ ಸ್ವಾತಂತ್ರ್ಯ ಇತ್ತು. ಅದನ್ನು ಬಿಜೆಪಿ ನಾಯಕರು ಇಲ್ಲದಂತೆ ಮಾಡು ಪ್ರಯತ್ನ ನಡೆಸುತ್ತಿದ್ದಾರೆ. ಜನರ ವ್ಯಕ್ತಿ ಸ್ವಾತಂತ್ರ ಹರಣಕ್ಕೆ ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ನಡೆಯುತ್ತಿರುವ ಈ ಘಟನೆಗಳಿಗೆ ಮಾಧ್ಯಮಗಳೇ ಸಾಕ್ಷಿ. ಗುರುವಾರ ಮಂಗಳೂರು, ಬೆಂಗಳೂರು ಹಾಗೂ ಗುಲ್ಬರ್ಗಾದಲ್ಲಿ ಏನು ನಡೆದಿದೆ ಎಂಬುದನ್ನು ಮಾಧ್ಯಮಗಳ ಮೂಲಕ ಕಂಡಿದ್ದೇವೆ. ಇದನ್ನು ನಂಬ ಬೇಕಾ ಅಥವಾ ಬಿಜೆಪಿ ನಾಯಕರ ಮಾತನ್ನ ನಂಬ ಬೇಕಾ ಎಂದು ಪ್ರಶ್ನಿಸಿದರು.

ಇದನ್ನು ಓದಿ: ಮತ್ತೊಮ್ಮೆ ರೈತರ ಜೀವ ತೆಗೆದ ಹಾವೇರಿ ಗೋಲಿಬಾರ್ ನೆನಪಿಸುತ್ತಿದ್ದಾರೆ ಯಡಿಯೂರಪ್ಪ; ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿರಾಜ್ಯದಲ್ಲಿ ನಡೆದಿರುವ ಘಟನೆಗೆ ಯಾವುದೇ ಹೇಳಿಕೆ ಕೊಡಬೇಡಿ ಎಂದಿದ್ದಾರೆ. ಈ ಎಲ್ಲಾ ಘಟನೆಗೆ ಒಬ್ಬ ರಾಜ್ಯದ ಮುಖ್ಯಮಂತ್ರಿಯಾಗಿ ಮಾತನಾಡಿದ್ದಾರೆ. ಈ ಘಟನೆಗೆ ಪ್ರಚೋದನೆ ನೀಡಿದ್ದು, ಬಿಜೆಪಿ ನಾಯಕರೇ ಎಂಬುದನ್ನು ಅವರೇ ಒಪ್ಪಿಕೊಂಡಿದ್ದಾರೆ.

ಜನರ ಪ್ರಶ್ನಿಸುವ ಹಕ್ಕನ್ನು ಸರ್ಕಾರ ಕಿತ್ತುಕೊಳ್ಳೋಕೆ ಮುಂದಾಗಿದ್ದಾರೆ. ಧ್ವನಿಯನ್ನು ಮೊಟಕುಗೊಳಿಸಲು ಅವರು  ಅಧಿಕಾರ ಬಳಕೆಗೆ ಮುಂದಾಗಿದ್ದಾರೆ ಎಂದು ಹರಿಹಾಯ್ದರು.
Published by: Seema R
First published: December 20, 2019, 1:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading