Congress Leaders: ಇದು ಬಿಜೆಪಿ ಭ್ರಷ್ಟೋತ್ಸವ, ಈ ಸರ್ಕಾರ ಅಭಿವೃದ್ಧಿ ಶೂನ್ಯ ಸರ್ಕಾರ

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 4 ವರ್ಷ ಆಗ್ತಿದೆ. ಮತ್ತೇನಿದು ಒಂದು ವರ್ಷದ ಸಾಧನೆ ಸಮಾವೇಶ, ಇದು ಒಂದು ವರ್ಷದ ಸಾಧನೋತ್ಸವ ಅಲ್ಲ, ಇದು ಭ್ರಷ್ಟೋತ್ಸವ ಎಂದ‌ ಡಿ.ಕೆ ಶಿವಕುಮಾರ್​ ಕಿಡಿಕಾರಿದ್ರು.

ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್​

ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್​

  • Share this:
ಬೆಂಗಳೂರು (ಜು.26): ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ (D K Shivakumar) ಜಂಟಿ ಸುದ್ದಿಗೋಷ್ಠಿ ನಡೆಸಿದ್ರು. ಕರ್ನಾಟಕ ಸರ್ಕಾರದ ಒಂದು ವರ್ಷದ ಸಾಧನೆ ಸಮಾವೇಶ (Convention) ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ. ಬಿಜೆಪಿ ಸರ್ಕಾರ (BJP Government) ಅಧಿಕಾರಕ್ಕೆ ಬಂದು 4 ವರ್ಷ ಆಗ್ತಿದೆ. ಮತ್ತೇನಿದು ಒಂದು ವರ್ಷದ ಸಾಧನೆ ಸಮಾವೇಶ, ಇದು ಒಂದು ವರ್ಷದ ಸಾಧನೋತ್ಸವ ಅಲ್ಲ, ಇದು ಭ್ರಷ್ಟೋತ್ಸವ ಎಂದ‌ ಡಿ.ಕೆ ಶಿವಕುಮಾರ್​ ಕಿಡಿಕಾರಿದ್ರು. ಆದಾಯ ಡಬಲ್ ಮಾಡ್ತೀವಿ ಅಂತ ಹೇಳಿದ್ರಿ ಈಗ ಯಾವ ರೈತರ ಆದಾಯ ಡಬಲ್ ಆಗಿದೆ. ಪ್ಯಾಕ್ ಫುಡ್ ಮೇಲೆ GST ಹಾಕಿದ್ದೀರಿ. ಇದೇನಾ ನಿಮ್ಮದು ಡಬಲ್ ಆದಾಯ ಎಂದು ಡಿಕೆ ಶಿವಕುಮಾರ್​ ಪ್ರಶ್ನಿಸಿದ್ರು. 

 ಇದು ಬಿಜೆಪಿ ಭ್ರಷ್ಟೋತ್ಸವ

ಬಿಜೆಪಿ ಅಧಿಕಾರದ ಅವಧಿಯಲ್ಲಿ ಒಂದೇ ದಿನ ಒಬ್ಬ IAS & IPS ಅಧಿಕಾರಿಗಳನ್ನು ನಿಮ್ಮ ಪೊಲೀಸರೇ ಬಂಧಿಸಿದ್ದಾರೆ. ಅವರ ಅವಧಿಯಲ್ಲಿ ಭ್ರಷ್ಟಾಚಾರ ತಾಂಡವ ಆಡ್ತಿರೋದಕ್ಕೆ ಇದೇ ಸಾಕ್ಷಿ, ಗುತ್ತಿಗೆ ಸಂಘದ ಅಧ್ಯಕ್ಷ ಕೆಂಪಣ್ಣ ಅವರನ್ನು ಕರೆದು ಯಾಕೆ ಇವರು ಹೇಳಿಕೆ ದಾಖಲು ಮಾಡಿಲ್ಲ? ಇವರದ್ದೇ ಕಾರ್ಯಕರ್ತ ಒಬ್ಬ ಆತ್ಮಹತ್ಯೆ ಮಾಡಿಕೊಂಡ? ಈ ಪ್ರಕರಣದಲ್ಲಿ ಈಶ್ವರಪ್ಪ ಅವರ ಬಗ್ಗೆ ಬಿಎಸ್ ವೈ ಅವರು ಕ್ಲೀನ್ ಚಿಟ್ ತಗೊಂಡು ಬರ್ತಾರೆ ಅಂತ ಹೇಳಿದ್ರು. ಈ ಬಿಜೆಪಿ ಸರ್ಕಾರ ಕ್ಲೀನ್ ಚಿಟ್ ಕೊಡಿಸುವುದರಲ್ಲಿ ಸಾಧನೆ ಮಾಡಿದೆ. ಇವರು ಭ್ರಷ್ಟಾಚಾರಿಗಳಿಗೆ ಕ್ಲಿನ್ ಚಿಟ್ ಕೊಡಿಸುವುದರಲ್ಲಿ ಸಾಧನೆ ಮಾಡಿದೆ.

ನೈತಿಕ ಪೊಲೀಸ್ ಗಿರಿ ಶುರುವಾಗಿದೆ

ಮಾರಲ್ ಪೊಲೀಸ್ ಹೆಸರಲ್ಲಿ ಇವರ ಪಕ್ಷದ ಕಾರ್ಯಕರ್ತರು ವಸೂಲಿ ಬಾಜಿ ಮಾಡ್ತಾರೆ. ಇದಕ್ಕೆ ಇವರೇ ಕಾರ್ಯಕರ್ತರಿಗೆ ಬೆಂಬಲ ಕೊಡ್ತಿದ್ದೀರಿ. ಮಂಗಳೂರಿನಲ್ಲಿ ಮತ್ತೆ ಇವರ ನೈತಿಕ ಪೊಲೀಸ್ ಗಿರಿ ಶುರುವಾಗಿದೆ. ಪಠ್ಯ ಪರಿಷ್ಕರಣೆ ಮಾಡಿ ಇವರು ನಮ್ಮ ಗಣ್ಯರಿಗೆ ಅವಮಾನ ಮಾಡಿದ್ರು ಇವರು ಕುವೆಂಪು, ಶಿವಕುಮಾರ ಸ್ವಾಮೀಜಿ, ಬಸವಣ್ಣ ಸೇರಿದಂತೆ ಹಲವರಿಗೆ ಅವಮಾನ ಮಾಡಿದ್ರು. ಇವರು ಚಾಮರಾಜನಗರದಲ್ಲಿ ಹನಿ ನೀರಾವರಿ ವರ್ತಕರ ಸಂಘ ನನಗೊಂದು ಪತ್ರ ಕೊಟ್ಡಿದ್ದಾರೆ. ಪತ್ರದಲ್ಲಿ ತೋಟಗಾರಿಕೆ ಇಲಾಖೆ ಸಚಿವರು 8% ಕಮಿಷನ್ ಕೇಳ್ತಿದ್ದಾರೆ ಅಂತ ಆರೋಪ ಮಾಡಿದ್ದಾರೆ. ಆ ಸಂಘದವರು ಗವರ್ನರ್ ಗೆ, ಪ್ರಧಾನ ಮಂತ್ರಿ ಜೊತೆ ನಂಗೂ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: Siddharamotsava: ಸಿದ್ಧರಾಮೋತ್ಸವ ಪೂರ್ವಭಾವಿ ಸಭೆಗೆ ಕೈ ಶಾಸಕ ಗೈರು! ಪ್ರಸಾದ್‌ ಅಬ್ಬಯ್ಯ ವಿರುದ್ಧ ಜಮೀರ್ ಗುಡುಗು

ಸಿಎಂ ಆಗ್ಬೇಕು ಅಂದ್ರೆ 2,500 ಕೋಟಿ‌ ಕೊಡ್ಬೇಕು

PSI ಸ್ಕ್ಯಾಮ್ ಮಾಡಿ ಯುವಕರ ಕನಸೆಲ್ಲಾ ನುಚ್ಚು ನೂರು ಮಾಡಿದ್ದಾರೆ. ಇಷ್ಟೆಲ್ಲಾ ಇಟ್ಕೊಂಡು ಇವರು ಸಾಧನೋತ್ಸವ ಅಲ್ಲ ಮಾಡಬೇಕಿರುವುದು. ಇವರು ಭ್ರಷ್ಟೋತ್ಸವ ಮಾಡುವುದು ಒಳ್ಳೆದು. ಅವರದ್ದೇ ಸರ್ಕಾರ ಸದಸ್ಯರು ಸಿಎಂ ಆಗ್ಬೇಕು ಅಂದ್ರೆ 2,500 ಕೋಟಿ‌ ಕೊಡ್ಬೇಕು ಅಂತಾರೆ, ಮಂತ್ರಿ ಆಗ್ಬೇಕು ಅಂದ್ರೆ 500 ಕೋಟಿ ಕೊಡ್ಬೇಕು. ಅವರ ಮೇಲೆ ಯಾಕೆ ನೀವು ಕ್ರಮ ತೆಗೆದುಕೊಂಡಿಲ್ಲ? ಹಾಗಾದ್ರೆ ಅದು ಸತ್ಯನಾ ಎಂದು ಡಿ.ಕೆ ಶಿವಕುಮಾರ್​ ಕಿಡಿಕಾರಿದ್ರು.

ಇದನ್ನೂ ಓದಿ: Pramoda Devi Wadiyar: ಬೇಬಿ ಬೆಟ್ಟ ವಿವಾದ, ಸರ್ಕಾರದ ವಿರುದ್ಧ 'ರಾಜಮಾತೆ' ಗರಂ; ಯಾಕಿಷ್ಟು ಹಿಂಸೆ ಕೊಡುತ್ತಿದ್ದೀರಾ?

ಬಿಜೆಪಿ ಸರ್ಕಾರ ವಿರುದ್ಧ ಸಿದ್ದು ಕಿಡಿ

ಇದೇ ವೇಳೆ ಮಾತಾಡಿದ ಸಿದ್ದರಾಮಯ್ಯ ಸಹ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಹಿಂದೆಂದೂ ನಡೆಯವ ರೀತಿಯಲ್ಲಿ ಇವರ ಅವಧಿಯಲ್ಲಿ ಭ್ರಷ್ಟಾಚಾರ ಆಗಿದೆ. 40% ಕಮಿಷನ್ ಇವರಿಗೆ ಕೊಡಬೇಕು. ಓರ್ವ ಗುತ್ತಿಗೆದಾರ ಡೆತ್ ನೋಟ್ ಬರೆದಿಟ್ಟು‌ ಆತ್ಮಹತ್ಯೆ ಮಾಡಿಕೊಂಡ. ಈ ಕೇಸಲ್ಲಿ ಓರ್ವ ಸಚಿವ ರಾಜೀನಾಮೆ ನೀಡಿದ್ರ, ಆಮೇಲೆ ಪೊಲೀಸರು ಸಚಿವರಿಗೆ ಕ್ಲೀನ್ ಚಿಟ್ ಕೊಟ್ಟು ಅವರದ್ದೇನು ತಪ್ಪಿಲ್ಲ ಅಂದ್ರು, ಇಂಥಾ ಕೇಸನ್ನು ಪೊಲೀಸರು ತನಿಖೆ ಮಾಡದೆ ನ್ಯಾಯಾಂಗ ತನಿಖೆ ಮಾಡಬೇಕು . ಈಗಲೂ ನಾನು ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಇದನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದ್ರು.
Published by:Pavana HS
First published: