• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಮಾರುತಿ ಮಾನ್ಪಡೆ ಸಾವಿಗೆ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಕಾರಣ; ಸಚಿವ ಡಿವಿ ಸದಾನಂದ ಗೌಡ ಗಂಭೀರ ಆರೋಪ

ಮಾರುತಿ ಮಾನ್ಪಡೆ ಸಾವಿಗೆ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಕಾರಣ; ಸಚಿವ ಡಿವಿ ಸದಾನಂದ ಗೌಡ ಗಂಭೀರ ಆರೋಪ

ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ

ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ

ರೈತಪರ ಹೋರಾಟದ ನೆಪದಲ್ಲಿ ರೈತರನ್ನು ಊರಿನಿಂದ ಬೆಂಗಳೂರಿಗೆ ಕರೆಸಿ ಕಾಂಗ್ರೆಸ್ ನಾಯಕರು ಕೊರೋನಾ ಹರಡಿದರು. ರೈತ ಮುಖಂಡ ಮಾರುತಿ ಮಾನ್ಪಡೆ ಕೊರೋನಾದಿಂದ ಸಾಯಲು ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಕಾರಣ ಎಂದು ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಆರೋಪಿಸಿದ್ದಾರೆ.

  • Share this:

ಬೆಂಗಳೂರು (ಅ. 26): ಕೊರೋನಾ ಸೋಂಕಿಗೆ ತುತ್ತಾಗಿ ಹಿರಿಯ ಕಾರ್ಮಿಕ ಹೋರಾಟಗಾರ ಮತ್ತು ರೈತ ಮುಖಂಡ ಮಾರುತಿ ಮಾನ್ಪಡೆ ಕಳೆದ ವಾರ ನಿಧನರಾಗಿದ್ದರು. ಇದಕ್ಕೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರೇ ನೇರ ಹೊಣೆ ಎಂದು ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಕಿಡಿಕಾರಿದ್ದಾರೆ. ಹಳ್ಳಿಗಳಿಂದ ರೈತರನ್ನು ಕರೆದುಕೊಂಡು ಬಂದು ತಮ್ಮ ಸ್ವಾರ್ಥಕ್ಕಾಗಿ ಹೋರಾಟದಲ್ಲಿ ಬಳಸಿಕೊಂಡ ಕಾಂಗ್ರೆಸ್ ಅವರನ್ನು ಬೀದಿಯಲ್ಲೇ ಬಿಡಲು ಯೋಚಿಸಿದೆ. ಹೋರಾಟದಲ್ಲಿ ಭಾಗಿಯಾಗಿದ್ದ ಮಾರುತಿ ಮಾನ್ಪಡೆ ಕೊರೋನಾದಿಂದ ಸಾವನ್ನಪ್ಪಿದರು. ಸೋಂಕಿಗೆ ತುತ್ತಾಗಿ ಅವರು ಸಾವನ್ನಪ್ಪಿದ್ದಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರೇ ಕಾರಣ ಎಂದು ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಗಂಭೀರ ಆರೋಪ ಮಾಡಿದ್ದಾರೆ.


ಕಾಂಗ್ರೆಸ್​ನವರು ರೈತರ ಪರವಾದ ಹೋರಾಟಕ್ಕಾಗಿ ಕೆಲವರನ್ನು ಬಾಡಿಗೆಗೆ ಹೋರಾಟಕ್ಕೆ ಕರೆತಂದರು. ರೈತ ಹೋರಾಟಗಾರ ಮಾರುತಿ ಮಾನ್ಪಡೆ ಕೊರೋನಾದಿಂದ ಸಾವನ್ನಪ್ಪಿದರು. ಅವರು ಹೋರಾಟದಲ್ಲಿ ಭಾಗಿಯಾಗಿದ್ದರಿಂದ ಹಾಗೂ ರೈತ ಹೋರಾಟದ ನೆಪದಲ್ಲಿ ಕಾಂಗ್ರೆಸ್​ ನಾಯಕರು ಕೊರೋನಾ ಹರಡಿದ್ದರಿಂದ ಮಾನ್ಪಡೆ ಸಾವನ್ನಪ್ಪಿದರು ಎಂದು ಆರೋಪಿಸಿದ್ದಾರೆ.


ಇಂದು ಒಂದು ಕೆಜಿ ಈರುಳ್ಳಿ ಬೆಲೆ ಎಷ್ಟು? ರೈತನಿಗೆ ಸಿಗುವ ಬೆಲೆ ಎಷ್ಟು? ನಾನು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ದೇವೇಗೌಡ, ಕುಮಾರಸ್ವಾಮಿ ಅವರಿಗೆ ಪ್ರಶ್ನೆ ಮಾಡುತ್ತೇನೆ. ಕಳೆದ ವಾರ‌ ಎಲ್ಲಾ ರೈತರನ್ನು ಬೀದಿಗಿಳಿಸಿದಿರಲ್ಲ, ಅವರನ್ನು ಬೀದಿಯಲ್ಲೇ ಬಿಡಬೇಕು ಅಂದುಕೊಂಡಿರಾ?‌ ರೈತ ಹೋರಾಟಗಾರ ಮಾರುತಿ ಮಾನ್ಪಡೆ ಕೊರೋನಾದಿಂದ‌ ಸಾವನ್ನಪ್ಪಿದರು. ಮಾನ್ಪಡೆ ಸಾವಿಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಕಾರಣ. ಹಳ್ಳಿಗಳಿಂದ ಕಾಂಗ್ರೆಸ್​ನವರು ರೈತರನ್ನು ಕರೆತಂದರು. ಕೆಲವು ರೈತ ಹೋರಾಟಗಾರನ್ನು ಬಾಡಿಗೆಗೆ‌ ಕರೆತಂದರು. ಪ್ರತಿಭಟನೆ ಮಾಡಿಸಿ ಕೊರೋನಾ ಹಬ್ಬಿಸಿದರು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ದೇವೇಗೌಡರು ರೈತ ವಿರೋಧಿ ಕಾಯಿದೆ ಎಂದು ರೈತರನ್ನು ಬೀದಿಗೆ ಇಳಿಸಿದರು. ನೀವು ರೈತರನ್ನು ಬೀದಿಯಲ್ಲೇ ಬಿಟ್ಟು ಬಿಡಲು ನಿರ್ಧಾರ ಮಾಡಿದ್ರಾ? ಎಂದು ಡಿವಿ ಸದಾನಂದ ಗೌಡ ಪ್ರಶ್ನಿಸಿದ್ದಾರೆ.


ಇದನ್ನೂ ಓದಿ: ನಾನು ಯಾವತ್ತಿದ್ರೂ ಹೀರೋನೇ, ವಿಲನ್ ಆಗೋಕೆ ಸಾಧ್ಯವೇ ಇಲ್ಲ; ಸಿದ್ದರಾಮಯ್ಯ


ಶಿಕ್ಷಕರ ಕ್ಷೇತ್ರ ಮತ್ತು ಪದವೀಧರ ಕ್ಷೇತ್ರ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಅಸ್ತಿತ್ವವಿಲ್ಲ . ನಾವು ಮಾಡಿದ ಕೆಲಸದ ಮೇಲೆ ಬಿಜೆಪಿ ಮತ ಕೇಳುತ್ತದೆ. ಕೇವಲ ನೆಗೆಟಿವ್ ಮಾತಾಡಿ ಮತ ಕೇಳೋದು ಸರಿಯಲ್ಲ. ಈಗ ವಿದ್ಯಾವಂತರ ಸಂಖ್ಯೆ ಹೆಚ್ಚಾಗಿದೆ. ವಿಷಯಾಧಾರಿತ ವಿಚಾರಗಳ ಮೇಲೆ ಚುನಾವಣೆ ನಡೆಯಬೇಕು. ಹಿಂದಿನ ಉಪಚುನಾವಣೆಗಳ‌ ರೀತಿ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದಲ್ಲಿ ಪೈಪೋಟಿ ಕಾಣುತ್ತಿಲ್ಲ. ಕಾಂಗ್ರೆಸ್, ಜೆಡಿಎಸ್ ನವರು ಚುನಾವಣೆಯಲ್ಲಿ ಕಾಣಿಸುತ್ತಲೇ ಇಲ್ಲ. ಕಾಂಗ್ರೆಸ್​ಗೆ ಬಂಡವಾಳ‌ ಇಲ್ಲದ ಕಾರಣ, ಜೆಡಿಎಸ್​ಗೆ ಅಸ್ತಿತ್ವ ಇಲ್ಲದ ಕಾರಣ ಅವರು ಕಾಣಿಸುತ್ತಿಲ್ಲ ಎಂದು ಗೊತ್ತಾಗಿದೆ. ಯಾವಾಗಲೂ ನೆಗೆಟಿವ್ ಮಾತುಗಳ ಮೂಲಕವೇ ಚುನಾವಣೆ ಮಾಡುವುದು ಸೂಕ್ತ ಅಲ್ಲ ಎಂದು ಡಿವಿ ಸದಾನಂದ ಗೌಡ ಹೇಳಿದ್ದಾರೆ.


ಆರ್​ಆರ್​ ನಗರ ಉಪಚುನಾವಣೆಯಲ್ಲಿ ಡಿಕೆ ಶಿವಕುಮಾರ್ ಜಾತಿ ರಾಜಕೀಯ ಮಾಡುತ್ತಿದ್ದಾರೆ. ಈ ಹಿಂದೆ ದೇವೇಗೌಡರು ಜಾತಿ ರಾಜಕೀಯ ಮಾಡಿದರು. ಅದನ್ನು ಈಗ ಡಿಕೆ ಶಿವಕುಮಾರ್ ಮುಂದುವರಿಸಿದ್ದಾರೆ ಎಂದು ಸಚಿವ ಡಿವಿ ಸದಾನಂದ ಗೌಡ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

top videos
    First published: