AICC ಸಮೀಕ್ಷೆ ಆಧರಿಸಿ ಸಿದ್ದು-ಡಿಕೆಶಿ ಜೊತೆ ರಾಹುಲ್ ಗಾಂಧಿ ಸಮಾವೇಶ! ಜೊತೆಯಲ್ಲೇ ಭೋಜನ

ಮಂಗಳವಾರ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಜೊತೆ ಒಟ್ಟಿಗೆ ಸಮಾಲೋಚನೆ ನಡೆಸಿದ್ದ ರಾಹುಲ್ ಗಾಂಧಿ ಅವರು ಬುಧವಾರ ಇಬ್ಬರ ಜೊತೆಯೂ ಪ್ರತ್ಯೇಕವಾಗಿ ಚರ್ಚೆ ನಡೆಸಿ ಇಬ್ಬರ ಅಭಿಪ್ರಾಯವನ್ನು ಸಂಗ್ರಹಿಸಿದರು.

ರಾಹುಲ್ ಗಾಂಧಿ ಜೊತೆ ಸಿದ್ದು, ಡಿಕೆಶಿ ಭೋಜನ

ರಾಹುಲ್ ಗಾಂಧಿ ಜೊತೆ ಸಿದ್ದು, ಡಿಕೆಶಿ ಭೋಜನ

  • Share this:
ನವದೆಹಲಿ(ಜೂ. 30): ಮುಂದಿನ‌ ವರ್ಷ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Elections) ಬಗ್ಗೆ ಅಪಾರ ನಿರೀಕ್ಷೆ ಇಟ್ಟುಕೊಂಡಿರುವ ಕಾಂಗ್ರೆಸ್ ಹೈಕಮಾಂಡ್ (Congress High Command) ಈಗಾಗಲೇ ತಯಾರಿ ಆರಂಭಿಸಿದೆ. ನಿನ್ನೆ ಮತ್ತು ಇಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ (Former President of AICC, Rahul Gandhi) ಅವರು ರಾಜ್ಯದ ಮುಂಚೂಣಿ ನಾಯಕರಾದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ (Opposition Leader Siddaramaiah) ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (KPCC President D.K. Shivakumar) ಅವರ ಜೊತೆ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ. ವಿಶೇಷವಾಗಿ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಮಾಡಿಸಿರುವ ಸಮೀಕ್ಷೆ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ನಿನ್ನೆ 4 ಗಂಟೆ ಸಮಾಲೋಚನೆ

ದೆಹಲಿಯ ತುಘಲಕ್ ಲೇನ್ ನಲ್ಲಿ ಇರುವ ರಾಹುಲ್ ಗಾಂಧಿ ಅವರ ನಿವಾಸದಲ್ಲಿ ಸಂಜೆ 4.30ಕ್ಕೆ ಸಭೆ ಸೇರಿದ ನಾಯಕರು ರಾತ್ರಿ 8.30ರವರೆಗೂ ಸಮಾಲೋಚನೆ ನಡೆಸಿದರು. ಕರ್ನಾಟಕದ ಸ್ಥಿತಿಗತಿ ಅರಿಯಲು ಇತ್ತೀಚೆಗೆ ಎಐಸಿಸಿ ವತಿಯಿಂದ ಚುನಾವಣಾ ತಂತ್ರಜ್ಞ ಸುನೀಲ್ ಕುನಗೋಲು ನೇತೃತ್ವದ ತಂಡ ಸಮೀಕ್ಷೆ ನಡೆಸಿದೆ. ಇದು ಹಲವು ಆಯಾಮಗಳಿಂದ ನಡೆಸಿರುವ ಸಮೀಕ್ಷೆ ಎನ್ನಲಾಗಿದ್ದು ಆ ಸಮೀಕ್ಷೆ ಆಧರಿಸಿ ರಾಹುಲ್ ಗಾಂಧಿ ರಾಜ್ಯದ ನಾಯಕರ ಜೊತೆ ಚರ್ಚೆ ಮಾಡಿದ್ದರು.

ಇಂದು ಸಿದ್ದು-ಡಿಕೆಶಿ ಜೊತೆ ಪ್ರತ್ಯೇಕ ಸಭೆ

ಮಂಗಳವಾರ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಜೊತೆ ಒಟ್ಟಿಗೆ ಸಮಾಲೋಚನೆ ನಡೆಸಿದ್ದ ರಾಹುಲ್ ಗಾಂಧಿ ಅವರು ಬುಧವಾರ ಇಬ್ಬರ ಜೊತೆಯೂ ಪ್ರತ್ಯೇಕವಾಗಿ ಚರ್ಚೆ ನಡೆಸಿ ಇಬ್ಬರ ಅಭಿಪ್ರಾಯವನ್ನು ಸಂಗ್ರಹಿಸಿದರು. ಬಳಿಕ ಇಬ್ಬರ ಜೊತೆಗೇ ತೆರಳಿ ಊಟ ಮಾಡಿದ್ದು ವಿಶೇಷವಾಗಿತ್ತು.
ಪ್ರತಿ ವಿಧಾನಸಭಾ ಕ್ಷೇತ್ರದ ಬಗ್ಗೆಯೂ ಚರ್ಚೆ
ಸಮೀಕ್ಷೆಯಲ್ಲಿ ಇರುವಂತೆ ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದ ಬಗ್ಗೆಯೂ ಸಮಾಲೋಚನೆ ನಡೆಸಿದ್ದಾರೆ.

ಇದನ್ನೂ ಓದಿ: ಸಂಧಾನಕ್ಕೆ ಕರೆಸಿ ಮಾವನಿಗೆ ಬೆಂಕಿ ಇಟ್ಟ ಪಾಪಿ ಅಳಿಯ! ನೋಡ ನೋಡುತ್ತಲೇ ಇಬ್ಬರ ಸಜೀವ ದಹನ

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿರುವ ಮತ್ತು ವಿರೋಧ ಇರುವ ಅಂಶಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳ ಬಗ್ಗೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ಅಭಿಪ್ರಾಯ ಮತ್ತು ಅವರು ಮಾಡಿಕೊಂಡಿರುವ ತಯಾರಿಗಳ ಬಗ್ಗೆ ರಾಹುಲ್ ಗಾಂಧಿ ಸ್ಪಷ್ಟೀಕರಣ ಕೇಳಿದ್ದಾರೆ‌.

ಕ್ಷೇತ್ರವಾರು ಸಮಾಲೋಚನೆ

ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಕೂಡ ಉಪಸ್ಥಿತರಿದ್ದು ಅವರಿಂದಲೂ ಸಲಹೆ ಸೂಚನೆ ಪಡೆಯಲಾಗಿದೆ. ಕ್ಷೇತ್ರವಾರು ಸಮಾಲೋಚನೆ ಅಲ್ಲದೆ ಸೋಷಿಯಲ್ ಇಂಜನಿಯರಿಂಗ್, ರಾಜ್ಯ ಬಿಜೆಪಿಯ ಬ್ರಹ್ಮಾಂಡ ಭ್ರಷ್ಟಾಚಾರ, ದುರ್ಬಲ ಮುಖ್ಯಮಂತ್ರಿ ಮತ್ತಿತರ ವಿಚಾರಗಳ ಬಗ್ಗೆಯೂ ಸಮಾಲೋಚನೆ ನಡೆಸಲಾಗಿದೆ.

ಇದನ್ನೂ ಓದಿ: Hubli: ಯುವತಿಯ ಕಿಡ್ನ್ಯಾಪ್​​ ಕೇಸ್​ಗೆ ಟ್ವಿಸ್ಟ್; ಪಾಲಿಕೆ ಸದಸ್ಯ ಚೇತನ್ ಸೇರಿ ಐವರಿಗೆ ಕೋರ್ಟ್ ವಾರೆಂಟ್

ಸಭೆಯ ಬಳಿಕ ಕರ್ನಾಟಕ ಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರಾಜ್ಯದಲ್ಲಿ ಭ್ರಷ್ಟ ಬಿಜೆಪಿ ಸರಕಾರದ ಆಡಳಿತವನ್ನು ಕೊನೆಗಾಣಿಸಬೇಕಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಗೆ ಕಾರ್ಯತಂತ್ರ ರೂಪಿಸಿದ್ದೇವೆ.‌ ನಮ್ಮ ಪ್ಲಾನ್ ಆಪ್ ಆಕ್ಷನ್ ಕೊಟ್ಟು ರಾಹುಲ್ ಗಾಂಧಿ ಅವರ ಜತೆ ಚರ್ಚೆ ನಡೆಸಿದ್ದೇವೆ. ನಮ್ಮ ಸರ್ವೆಗಳಲ್ಲಿ ಸ್ವಂತ ಬಲದ ಮೇಲೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ಪ್ರತಿಯೊಬ್ಬ ನಾಯಕರಿಗೂ ಒಂದೊಂದು ರೀತಿಯ ಬಲವಿದೆ. ಒಗ್ಗಟ್ಟಿನಿಂದ ಚುನಾವಣೆ ಎದುರಿಸಲಿದ್ದೇವೆ ಎಂದು ಹೇಳಿದರು.
Published by:Divya D
First published: