• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • DK Shivakumar: ಡಿಕೆಶಿ ಪರ ಒಕ್ಕಲಿಗ ಮಠಾಧೀಶರ ಬ್ಯಾಟಿಂಗ್, ಬರ್ತ್‌ ಡೇಗೆ ಸಿಎಂ ಸ್ಥಾನದ ಗಿಫ್ಟ್ ಕೊಡಿ ಎಂದ ನಿರ್ಮಲಾನಂದನಾಥ ಸ್ವಾಮೀಜಿ

DK Shivakumar: ಡಿಕೆಶಿ ಪರ ಒಕ್ಕಲಿಗ ಮಠಾಧೀಶರ ಬ್ಯಾಟಿಂಗ್, ಬರ್ತ್‌ ಡೇಗೆ ಸಿಎಂ ಸ್ಥಾನದ ಗಿಫ್ಟ್ ಕೊಡಿ ಎಂದ ನಿರ್ಮಲಾನಂದನಾಥ ಸ್ವಾಮೀಜಿ

ಡಿಕೆ ಶಿವಕುಮಾರ್- ನಿರ್ಮಲಾನಂದನಾಥ ಸ್ವಾಮೀಜಿ

ಡಿಕೆ ಶಿವಕುಮಾರ್- ನಿರ್ಮಲಾನಂದನಾಥ ಸ್ವಾಮೀಜಿ

ಮಾಜಿ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ (DK Shivkumar) ಇಬ್ಬರೂ ಸಿಎಂ ಸ್ಥಾನಕ್ಕೆ ಆಕಾಂಕ್ಷಿಗಳಾಗಿದ್ದಾರೆ. ಈ ಬಗ್ಗೆ ಕಾಂಗ್ರೆಸ್​ ಪಾಳಯದಲ್ಲಿ ಬೆಳವಣಿಗೆಗಳು ಜರುಗುತ್ತಿವೆ. ಆದರೆ ಇದೀಗ ಸ್ವಾಮೀಜಿಗಳು ಕೂಡ ತಮ್ಮ ಸಮುದಾಯದ ನಾಯಕರಿಗೆ ಸಿಎಂ ಸ್ಥಾನ ನೀಡಬೇಕೆಂದು ಬ್ಯಾಟಿಂಗ್ ಮಾಡಿದ್ದಾರೆ.

ಮುಂದೆ ಓದಿ ...
 • Share this:

ಬೆಂಗಳೂರು: ಕಾಂಗ್ರೆಸ್​ಗೆ (Congress) ರಾಜ್ಯದಲ್ಲಿ ಬಹುಮತ (Majority) ಬಂದ ಖುಷಿ ಒಂದು ಕಡೆಯಾದರೆ, ಮುಖ್ಯಮಂತ್ರಿ (Chief Minister) ಯಾರನ್ನ ಮಾಡಬೇಕು ಎಂಬುದು ದೊಡ್ಡ ಸಮಸ್ಯೆಯಾಗಿದೆ. ಈಗಾಗಲೇ ಬಣಗಳು ಸೃಷ್ಟಿಯಾಗಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ತಮ್ಮ ತಮ್ಮ ನಾಯಕರ ಪರ ಘೋಷಣೆ, ಲಾಭಿ ಆರಂಭಿಸಿದ್ದಾರೆ. ಪಕ್ಷದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮಾಜಿ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ (DK Shivkumar) ಇಬ್ಬರೂ ಸಿಎಂ ಸ್ಥಾನಕ್ಕೆ ಆಕಾಂಕ್ಷಿಗಳಾಗಿದ್ದಾರೆ. ಈ ಬಗ್ಗೆ ಕಾಂಗ್ರೆಸ್​ ಪಾಳಯದಲ್ಲಿ ಬೆಳವಣಿಗೆಗಳು ಜರುಗುತ್ತಿವೆ. ಆದರೆ ಇದೀಗ ಸ್ವಾಮೀಜಿಗಳು ಕೂಡ ತಮ್ಮ ಸಮುದಾಯದ ನಾಯಕರಿಗೆ ಸಿಎಂ ಸ್ಥಾನ ನೀಡಬೇಕೆಂದು ಬ್ಯಾಟಿಂಗ್ ಮಾಡಿದ್ದಾರೆ.


ಬೆಂಗಳೂರಿನ ವಿಜಯನಗರದ ಆದಿಚುಂಚನಗಿರಿ ಮಠದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ವಿವಿಧ ಒಕ್ಕಲಿಗ ಸಮುದಾಯದ ಮಠಾಧೀಶರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರೇ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ಒತ್ತಾಯಿಸಲು ಸಭೆ ನಡೆಸಿದ್ದಾರೆಂದು ತಿಳಿದುಬಂದಿದೆ. ಈ ಬಗ್ಗೆ ಚರ್ಚಿಸಲು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನಿವಾಸದಲ್ಲಿಯೇ ಭೇಟಿಯಾಗಿ ಮಾತನಾಡಲು ಚಿಂತಿಸಿದ್ದಾರೆ. ಸ್ವಾಮೀಜಿಗಳಲ್ಲದೆ ಒಕ್ಕಲಿಗ ಸಮುದಾಯದ ವಿವಿಧ ಸಂಘಟನೆಗಳು ಕೂಡ ನಾಯಕರನ್ನು ಸಹ ಡಿಕೆಶಿಗೆ ಸಿಎಂ ಸ್ಥಾನ ಸಿಗಬೇಕೆಂದು ಒತ್ತಡ ಏರಲು ಸಿದ್ಧವಾಗುತ್ತಿವೆ ಎಂದು ತಿಳಿದುಬಂದಿದೆ.


ಇದನ್ನೂ ಓದಿ: Congress Politics: ಸಿದ್ದರಾಮಯ್ಯ ಬಣದ ರಹಸ್ಯ ಮೀಟಿಂಗ್​ನಲ್ಲಿ ಯಾರೆಲ್ಲಾ ಭಾಗಿಯಾಗಿದ್ರು?

 ನಮ್ಮ ಸಮುದಾಯಕ್ಕೂ ಒಂದು ಅವಕಾಶ ನೀಡಿ


ಈ ಬಗ್ಗೆ ಮಾತನಾಡಿರುವ ನಿರ್ಮಲಾನಂದನಾಥ ಸ್ವಾಮೀಜಿ, ಡಿಕೆ ಶಿವಕುಮಾರ್​ ಊಹೆಗೂ ಮೀರಿದ ರೀತಿಯಲ್ಲಿ ಪಕ್ಷವನ್ನ ಅಧಿಕಾರಕ್ಕೆ ತಂದಿದ್ದಾರೆ. ನಮ್ಮ ಸಮುದಾಯದ ವ್ಯಕ್ತಿ ರಾಷ್ಟ್ರೀಯ ಪಕ್ಷವೊಂದನ್ನ ಮೂರು ದಶಕಗಳಿಂದ ಎತ್ತರಕ್ಕೆ ತರಲು ಶ್ರಮಿಸಿದ್ದಾರೆ. ಸಂಪ್ರದಾಯದಂತೆ ಮನೆಯ ಯಜಮಾನ ಸಿಎಂ ಆಗುವ ಸತ್‌ ಸಂಪ್ರದಾಯ ಮುಂದುವರೆಸಲು ಮನವಿ ಮಾಡುತ್ತೇವೆ. ಡಿಕೆ ಶಿವಕುಮಾರ್​ಗೆ ಸಿಎಂ ಹುದ್ದೆಗೆ ಇರಬೇಕಾದ ಎಲ್ಲಾ ಅರ್ಹತೆಗಳು ಇವೆ. ಎಲ್ಲಾ ಸಮುದಾಯವನ್ನು ಮುನ್ನಡೆಸುವುದು ಒಕ್ಕಲಿಗ ಸಮುದಾಯ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಎಲ್ಲರಿಗೂ ಹೇಳುವುದೊಂದೆ, ಸಹಜವಾಗಿ ಕೊಡುವ ಅವಕಾಶವನ್ನ ನಮಗೆ ಕೊಡಿ ಎಂದು ಡಿಕೆಶಿ ಪರ ಬ್ಯಾಟ್ ಬೀಸಿದ್ದಾರೆ.
ಸಿದ್ದರಾಮಯ್ಯಗೆ ಕೆಲವು ನಾಯಕರ ಬೆಂಬಲ


ಮತ್ತೊಂಮಡೆ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡಬೇಕೆಂದು ಕಾಂಗ್ರೆಸ್​ನ ಹಿರಿಯ ನಾಯಕರು ಒತ್ತಡ ಹೇರುತ್ತಿದ್ದಾರೆ. ಹಲವು ನಾಯಕರು ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ.


ಸಿದ್ದರಾಮಯ್ಯ ನಡುವೆ ಭಿನ್ನಾಭಿಪ್ರಾಯವಿಲ್ಲ


ಸಿಎಂ ಸ್ಥಾನದ ಗೊಂದಲ ನಡುವೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್​, ನನ್ನ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಾನು ಎಲ್ಲರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿದ್ದೇನೆ ಮತ್ತು ತನಗಾಗಿ ಏನನ್ನೂ ಮಾಡಿಲ್ಲ. ಪಕ್ಷಕ್ಕಾಗಿ ದುಡಿದಿದ್ದೇನೆ ಎಂದು ಪರೋಕ್ಷವಾಗಿ ತಾನೂ ಸಿಎಂ ಅಭ್ಯರ್ಥಿ ಎಂದು ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: Congress Politics: ಸಿದ್ದರಾಮಯ್ಯ ಬಣದ ರಹಸ್ಯ ಮೀಟಿಂಗ್​ನಲ್ಲಿ ಯಾರೆಲ್ಲಾ ಭಾಗಿಯಾಗಿದ್ರು?

 ಫ್ಲೆಕ್ಸ್​ ವಾರ್


ಬಹುಮತ ಪಡೆದರೂ ಕಾಂಗ್ರೆಸ್​ ಪಕ್ಷದಿಂದ ಸಿಎಂ ಯಾರಾಗಬೇಕೆಂದು ಇನ್ನೂ ತೀರ್ಮಾನವಾಗಿಲ್ಲ. ಆದರೆ ಇಬ್ಬರ ಅಭಿಮಾನಿಗಳು ತಮ್ಮ ನಾಯಕರನ್ನೇ ಮುಂದಿನ ಸಿಎಂ ಅಂತಾ ಬ್ಯಾನರ್ ಹಾಕುತ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ನಿವಾಸದ ಮುಂದೆ ಈ ಸಿಎಂ ಫೋಸ್ಟರ್​ಗಳು ರಾರಾಜಿಸುತ್ತಿವೆ.


ಪರಮೇಶ್ವರ ನಿವಾಸದಲ್ಲೂ ಸಭೆ

top videos


  ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಲು ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಸ್ಪರ್ಧೆ ನಡೆಯುತ್ತಿರುವ ಬೆನ್ನಲ್ಲೇ ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್ ಕೂಡ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿದ್ದಾರೆ. ದಲಿತರಿಗೆ ಮುಖ್ಯಮಂತ್ರಿ ಸ್ಥಾನ ಕಲ್ಪಿಸಬೇಕು ಎಂದು ಒತ್ತಾಯಿಸಿರುವ ಅವರು, ತಮ್ಮ ಬೆಂಬಲಿಗ ಕಾಂಗ್ರೆಸ್ ಶಾಸಕರ ಜೊತೆ ಸಮಾಲೋಚನೆ ನಡೆಸಿದ್ದಾರೆ.

  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು