HOME » NEWS » State » DK SHIVAKUMAR SAYS WE NEED PATIENCE TO HEAR WHAT AMULYA LEONA HAS TO SAY SHM SNVS

ಪಾಕಿಸ್ತಾನಕ್ಕೆ ಜೈ ಎಂದ ಅಮೂಲ್ಯ ಬಗ್ಗೆ ಡಿಕೆಶಿ ಹೇಳಿದ್ದೇನು?

ಸಿಎಎ, ಎನ್​ಆರ್​ಸಿ ವಿಚಾರವನ್ನು ಸಾರ್ವಜನಿಕರ ಪರಾಮರ್ಶೆಗೆ ಬಿಟ್ಟಿದ್ದೇವೆ. ಇವು ಕಾಂಗ್ರೆಸ್​ನ ವಿಚಾರ ಅಲ್ಲ, ಇಡೀ ದೇಶದ ವಿಚಾರ ಎಂದು ಡಿಕೆ ಶಿವಕುಮಾರ್ ತಿಳಿಸಿದ್ಧಾರೆ.

news18-kannada
Updated:February 23, 2020, 3:34 PM IST
ಪಾಕಿಸ್ತಾನಕ್ಕೆ ಜೈ ಎಂದ ಅಮೂಲ್ಯ ಬಗ್ಗೆ ಡಿಕೆಶಿ ಹೇಳಿದ್ದೇನು?
ಪಾಕ್​ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನಾ
  • Share this:
ಬೆಂಗಳೂರು(ಫೆ. 23): ಸಿಎಎ ವಿರುದ್ಧದ ಪ್ರತಿಭಟನಾ ಸಮಾವೇಶಗಳಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ಆರೋಪದ ಮೇಲೆ ಜೈಲುಪಾಲಾಗಿರುವ ಅಮೂಲ್ಯ ಹಾಗೂ ಆರ್ದ್ರಾ ಬಗ್ಗೆ ಡಿಕೆ ಶಿವಕುಮಾರ್ ಪರೋಕ್ಷವಾಗಿ ಅನುಕಂಪದ ಮಾತುಗಳನ್ನಾಡಿದ್ಧಾರೆ. ಯಾರೇ ಯಾವುದೇ ಧ್ವನಿ ಎತ್ತಿದರೂ ಅದನ್ನು ದಮನ ಮಾಡಬಾರದು. ಅವರು ಏನು ಹೇಳಲು ಹೊರಟಿದ್ದಾರೆ ಎಂಬುದನ್ನು ಆಲಿಸಬೇಕು ಎಂದು ಮಾಜಿ ಸಚಿವರೂ ಅದ ಡಿಕೆಶಿ ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಪಾಕಿಸ್ತಾನಕ್ಕೆ ಜೈ ಅಂದವರಿಗೆ ಪ್ರೋತ್ಸಾಹ ಕೊಡುವುದಿಲ್ಲ ಎಂದೂ ಸ್ಪಷ್ಟಪಡಿಸಿದರು. ಹಾಗೆಯೇ, ಅಮೂಲ್ಯ ಏನು ಹೇಳಲು ಹೊರಟಿದ್ದಾಳೋ ಅದನ್ನು ಕೇಳುವ ತಾಳ್ಮೆ ಇಟ್ಟುಕೊಂಡಿರಬೇಕು ಎಂದು ಸಮರ್ಥನೆಯನ್ನೂ ನೀಡಿದರು.

ಇದನ್ನೂ ಓದಿ: ಚಿಕ್ಕಮಗಳೂರು: ಅಕ್ರಮ ಸಂಬಂಧಕ್ಕಾಗಿ ಹೆಂಡತಿ ಕೊಂದು ಆತ್ಮಹತ್ಯೆ ಮಾಡಿಕೊಂಡ ಗಂಡ; ವಿಷಯ ತಿಳಿದು ಪ್ರಿಯತಮೆ ಸಾವು!

“ಒಬ್ಬ ಹೆಣ್ಣು ಮಗಳು ಏನು ಹೇಳುವುದಕ್ಕೆ ಹೊರಟಿದ್ದಳೋ ಏನೋ. ಹಿಂದೆಯೂ ಕೂಡ ಆಕೆಯನ್ನು ನೋಡಿದ್ದೇನೆ. ಅವಳದೇ ಆದ ತತ್ವ, ವಿಶ್ವಮಾನವ ತತ್ವ ಅಂತೆಲ್ಲಾ ಇಟ್ಟುಕೊಂಡಿದ್ದಾಳೆ” ಎಂದು ಅಮೂಲ್ಯ ಲಿಯೋನಾ ಬಗ್ಗೆ ಅವರು ಅನುಕಂಪದ ಮಾತುಗಳನ್ನಾಡಿದರು.

ರಾಜಕಾರಣ ಮಾಡಬೇಕು. ಆದರೆ, ದೇಶದ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ಪಾಕಿಸ್ತಾನಕ್ಕೆ ಜೈ ಅಂದರೆ ನಾನೂ ಕೂಡ ಪ್ರೋತ್ಸಾಹ ಕೊಡುವುದಕ್ಕೆ ತಯಾರಿಲ್ಲ. ಆದರೆ ಧ್ವನಿ ಎತ್ತುವವರನ್ನು ಮೊಟಕುಗೊಳಿಸಬಾರದು. ನೋಡೋಣ ಏನಾಗುತ್ತೆ ಅಂತ ಹರಿಬರಿ ಮಾಡುವುದು ಬೇಡ ಎಂದು ಡಿಕೆ ಶಿವಕುಮಾರ್ ಹೇಳಿದರು.

ಬಿಜೆಪಿಯವರಿಗೆ ಕಾಂಗ್ರೆಸ್ ಬಿಟ್ಟರೆ ಬೇರೇನೂ ಕಾಣಿಸುತ್ತದೆ? ಸಿಎಎ, ಎನ್​ಆರ್​ಸಿ ವಿಚಾರವನ್ನು ಸಾರ್ವಜನಿಕರ ಪರಾಮರ್ಶೆಗೆ ಬಿಟ್ಟಿದ್ದೇವೆ. ಇವು ಕಾಂಗ್ರೆಸ್​ನ ವಿಚಾರ ಅಲ್ಲ, ಇಡೀ ದೇಶದ ವಿಚಾರ ಎಂದವರು ತಿಳಿಸಿದರು.

ಅಮೂಲ್ಯಾ ಲಿಯೋನಾ ಮತ್ತು ಆರುದ್ರಾ ಇಬ್ಬರೂ ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಿದ್ದರು. ಇಬ್ಬರನ್ನೂ ಪೊಲೀಸರು ಬಂಧಿಸಿ ಜೈಲಿನಲ್ಲಿಟ್ಟಿದ್ಧಾರೆ. ಅವರ ಪೂರ್ವಾಪರ ಹಾಗೂ ಸೈದ್ಧಾಂತಿಕ ಪ್ರೇರಕರನ್ನು ಪೊಲೀಸರ ಜಾಲಾಡುತ್ತಿದ್ದಾರೆ.ಇದನ್ನೂ ಓದಿ: ಪಾಕ್ ಘೋಷಣೆ ಕೂಗಿದ ಅಮೂಲ್ಯ ಲಿಯೋನಾಳನ್ನು ಕೊಂದರೆ 10 ಲಕ್ಷ; ಶ್ರೀರಾಮ ಸೇನೆ ಕಾರ್ಯಕರ್ತ ಘೋಷಣೆ!

ಕ್ಯಾಸಿನೋ ಬಗ್ಗೆ:

ವಿದೇಶಗಳಲ್ಲಿ ಖ್ಯಾತವಾಗಿರುವ ಕ್ಯಾಸಿನೋಗಳನ್ನು ರಾಜ್ಯದಲ್ಲೂ ಸ್ಥಾಪಿಸುವ ಪ್ರಸ್ತಾವದ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಕಾದು ನೋಡಿ ಮಾತನಾಡುವುದಾಗಿ ತಿಳಿಸಿದರು.

ಕ್ಯಾಸಿನೋ ಬಗ್ಗೆ ಯಡಿಯೂರಪ್ಪ ತಮ್ಮ ಬಜೆಟ್​​ನಲ್ಲಿ ತರಲಿ ನೋಡೋಣ. ಬಜೆಟ್ ಅಧಿವೇಶನದಲ್ಲಿ ಅದರ ಬಗ್ಗೆ ವಿವರಣೆ ಕೊಡಲಿ. ಈ ಕ್ಯಾಸಿನೋಗಳ ಮೂಲಕ ರಾಜ್ಯಕ್ಕೆ  ಹೇಗೆಲ್ಲಾ ಒಳ್ಳೆಯದು ಮಾಡುತ್ತಾರೆ ಎಂದು ಹೇಳಲಿ ನೋಡೋಣ ಎಂದರು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: February 23, 2020, 3:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories