ಶೋಭಾಕ್ಕ ಶುಭ ಹಾರೈಸಿದ್ದು ಕೇಳಿ ಸಂತೋಷವಾಯಿತು, ಅಕ್ಕ ಏನು ಹೇಳಿದರೂ ಶಿಸ್ತಿನಿಂದ ಪಾಲಿಸುತ್ತೇನೆ; ಡಿಕೆಶಿ

ಕಾಂಗ್ರೆಸ್‌ನವರು ನರಸತ್ತವರು ಎಂಬ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, ಯಾರು ನರ ಸತ್ತವರು ಅಂತಾ ಬೇಕಾದರೆ ಪರೀಕ್ಷೆಗೆ ಹೋಗೋಣ. ಇಂತಹ ಮಾತುಗಳಿಂದ ಈಶ್ವರಪ್ಪನ ಸಂಸ್ಕೃತಿ ಏನು ಅಂತಾ ಗೊತ್ತಾಗುತ್ತೆ. ಈಶ್ವರಪ್ಪನಿಗೆ ಒಳ್ಳೆಯದಾಗಲಿ ಎಂದರು.

HR Ramesh | news18
Updated:June 2, 2020, 4:14 PM IST
ಶೋಭಾಕ್ಕ ಶುಭ ಹಾರೈಸಿದ್ದು ಕೇಳಿ ಸಂತೋಷವಾಯಿತು, ಅಕ್ಕ ಏನು ಹೇಳಿದರೂ ಶಿಸ್ತಿನಿಂದ ಪಾಲಿಸುತ್ತೇನೆ; ಡಿಕೆಶಿ
ಸಚಿವ ಡಿ.ಕೆ.ಶಿವಕುಮಾರ್
  • News18
  • Last Updated: June 2, 2020, 4:14 PM IST
  • Share this:
ಹುಬ್ಬಳ್ಳಿ‌: ನನ್ನ ಜನ್ಮದಿನಕ್ಕೆ ನಮ್ಮಕ್ಕ ಶೋಭಾಕ್ಕ ಶುಭ ಹಾರೈಸಿದ್ದಾರೆ ಎಂಬುದನ್ನು ತಿಳಿದು ಬಹಳ ಸಂತೋಷ ಆಯ್ತು. ಶೋಭಾಕ್ಕ ಏನೇ ಹಿತವಚನ ಹೇಳಲಿ, ಶಿಸ್ತಿನಿಂದ ಪಾಲಿಸುತ್ತೇನೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

ಇಂದು 58ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ಇರುವ ಸಚಿವ ಡಿ.ಕೆ.ಶಿವಕುಮಾರ್​ ಅವರು,  ಹುಬ್ಬಳ್ಳಿಯಲ್ಲಿ ನ್ಯೂಸ್​ 18 ಕನ್ನಡದೊಂದಿಗೆ ಮಾತನಾಡಿ, ನಾನೇನು ಕಠಿಣವಲ್ಲ. ತುಂಬಾ ಪಾರದರ್ಶಕ ವ್ಯಕ್ತಿ. ಮತದಾರರನ್ನು ಕುರಿ, ಕೋಳಿ ತರಾ ಖರೀದಿ ಮಾಡೋಕಾಗುತ್ತಾ. ಶೋಭಕ್ಕಾ ದುಡ್ಡುಕೊಟ್ಟು ಮಂಗಳೂರು ಜನರನ್ನು ಖರೀದಿಸಿದ್ರು ಅಂತಾ ಹೇಳೋಕಾಗುತ್ತಾ? ಶೋಭಕ್ಕಾ ಆರಾಮಾಗಿ ಅವರ ಕ್ಷೇತ್ರ ನೋಡ್ಕೊಂಡು ಗೆದ್ದು ಬರೋಕೆ ಹೇಳಿ ಎಂದು ಕುಟುಕಿದರು.

ಕಾಂಗ್ರೆಸ್‌ನವರು ನರಸತ್ತವರು ಎಂಬ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, ಯಾರು ನರ ಸತ್ತವರು ಅಂತಾ ಬೇಕಾದರೆ ಪರೀಕ್ಷೆಗೆ ಹೋಗೋಣ. ಇಂತಹ ಮಾತುಗಳಿಂದ ಈಶ್ವರಪ್ಪನ ಸಂಸ್ಕೃತಿ ಏನು ಅಂತಾ ಗೊತ್ತಾಗುತ್ತೆ. ಈಶ್ವರಪ್ಪನಿಗೆ ಒಳ್ಳೆಯದಾಗಲಿ ಎಂದರು.

ಇದನ್ನು ಓದಿ: ಸಿದ್ದರಾಮಯ್ಯ ಸಿಎಂ ಆಗಬೇಕೆಂದು ಆಸೆ ಪಡುವುದರಲ್ಲಿ ತಪ್ಪೇನಿದೆ, ಆಗ್ಲಿ ಬಿಡಿ ಸಂತೋಷ; ಸಚಿವ ಡಿಕೆಶಿ

ಯಡಿಯೂರಪ್ಪಗೆ ದಲಿತರ ಬಗ್ಗೆ ಮಾತಾಡುವ ನೈತಿಕ ಹಕ್ಕಿಲ್ಲ. ಪಕ್ಷದ ಅಧ್ಯಕ್ಷ, ವಿರೋಧ ಪಕ್ಷದ ನಾಯಕ ಎಲ್ಲವೂ ಯಡಿಯೂರಪ್ಪನಿಗೆ ಬೇಕು. ಒಂದು ಸಣ್ಣ ಅಧಿಕಾರಾನೂ ದಲಿತರಿಗೆ ಕೊಡೋಕೆ ಆಗಲ್ಲ‌. ಶ್ರೀರಾಮುಲುನನ್ನು ಉಪಮುಖ್ಯಮಂತ್ರಿ ಅಂದ್ರು. ಶ್ರೀರಾಮುಲುನನ್ನು ಯಾಕೆ ಉಪಮುಖ್ಯಮಂತ್ರಿ ಮಾಡಲಿಕ್ಕೆ ಆಗಲಿಲ್ಲ? ಕಾಂಗ್ರೆಸ್ ಪಕ್ಷ ಖರ್ಗೆಯವರನ್ನು ರಾಷ್ಟ್ರಮಟ್ಟದಲ್ಲಿ ವಿರೋಧ ಪಕ್ಷದ ನಾಯಕನನ್ನಾಗಿ ಮಾಡಿದೆ ಎಂದು ಹೇಳಿದರು.
First published: May 15, 2019, 1:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading