• Home
 • »
 • News
 • »
 • state
 • »
 • DK Shivakumar: ಕುಕ್ಕರ್ ಬಾಂಬ್ ಬ್ಲಾಸ್ಟ್ ಏನು ಮುಂಬೈ ದಾಳಿ, ಪುಲ್ವಾಮಾ ರೀತಿಯ ಘಟನೆಯಾ? ಡಿಕೆ ಶಿವಕುಮಾರ್ ಬೇಜವಾಬ್ದಾರಿ ಹೇಳಿಕೆ

DK Shivakumar: ಕುಕ್ಕರ್ ಬಾಂಬ್ ಬ್ಲಾಸ್ಟ್ ಏನು ಮುಂಬೈ ದಾಳಿ, ಪುಲ್ವಾಮಾ ರೀತಿಯ ಘಟನೆಯಾ? ಡಿಕೆ ಶಿವಕುಮಾರ್ ಬೇಜವಾಬ್ದಾರಿ ಹೇಳಿಕೆ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. "ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಮುಂಬೈ ಟೆರರಿಸ್ಟ್ ಅಟ್ಯಾಕ್ ತರಹದ ಘಟನೆ ಆಗಿತ್ತಾ ಅದು? ಕಾಶ್ಮೀರದ ಪುಲ್ವಾಮಾ ತರಹದ ಘಟನೆ ಆಗಿತ್ತಾ ಅದು?" ಅಂತ ಲಘುವಾಗಿ ಹೇಳಿಕೆ ನೀಡಿದ್ದಾರೆ.

ಮುಂದೆ ಓದಿ ...
 • News18 Kannada
 • 5-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು: ವೋಟರ್ ಐಡಿ ಹಗರಣ (Karnataka voter ID Scam) ಮುಚ್ಚಿ ಹಾಕಲು ಮಂಗಳೂರು (Mangaluru) ಕುಕ್ಕರ್ ಬ್ಲಾಸ್ಟ್ (Cooker Blast) ಘಟನೆಯನ್ನು ಹೊರಗೆ ತಂದರು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar), ರಾಜ್ಯ ಬಿಜೆಪಿ ಸರ್ಕಾರದ (State Government) ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಿವಕುಮಾರ್, ಕಳೆದ ಮೂರು ವರ್ಷಗಳಿಂದ ಅಧಿಕಾರದಲ್ಲಿರೋ ಬಿಜೆಪಿ ಸರ್ಕಾರ ಹೇಳಿಕೊಳ್ಳುವಂತಹ ಒಂದೇ ಒಂದು ಸಾಧನೆ ಮಾಡಿಲ್ಲ. ವೋಟರ್ ಹಗರಣ ಸಂದರ್ಭದಲ್ಲಿ ಅದೆನೋ ಕುಕ್ಕರ್ ಟೆರರಿಸ್ಟ್ ಅಂತೆ, ಕುಕ್ಕರ್​ನಲ್ಲಿ ಬ್ಲಾಸ್ಟ್​ ಆಯ್ತಂತೆ. ಎನ್​​ಐಎ ಹೇಳ್ತು ಟೆರರಿಸ್ಟ್​ ಬಂದು ಬಿಟ್ಟಿದ್ದಾನೆ ಅಂತ. ಎಲ್ಲಿಂದ ಬಂದ ಟೆರರಿಸ್ಟ್​? ಎಲ್ಲಾ ಪ್ಲಾನ್​ ಮಾಡಿಕೊಂಡು ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.


ಬಿಜೆಪಿ ಟೀಕಿಸೋ ಭರದಲ್ಲಿ ಡಿಕೆಶಿ ಬೇಜವಾಬ್ದಾರಿ ಹೇಳಿಕೆ


ಯಾವುದೇ ತನಿಖೆ ಮಾಡದೆಯೇ ಟೆರರಿಸ್ಟ್ ಅಂತ ಹೇಗೆ ಘೋಷಣೆ ಮಾಡಿದ್ರಿ? ಮುಂಬೈ ಟೆರರಿಸ್ಟ್ ಅಟ್ಯಾಕ್ ತರಹದ ಘಟನೆ ಆಗಿತ್ತಾ ಅದು? ಕಾಶ್ಮೀರದ ಪುಲ್ವಾಮಾ ತರಹದ ಘಟನೆ ಆಗಿತ್ತಾ ಅದು? ಅದನ್ನು ಹೇಗೆ ಪ್ರೊಜೆಕ್ಟ್ ಮಾಡಿದ್ದೀರಿ ನೀವು? ಡಿಜಿ ಏಕೆ ಅಷ್ಟು ಸ್ಪೀಡ್ ಆಗಿ ಟ್ವೀಟ್ ಮಾಡಿದ್ದು? ಯಾವುದೇ ತನಿಖೆ ಮಾಡದೆಯೇ ಟೆರರಿಸ್ಟ್ ಅಂತ ಹೇಗೆ ಘೋಷಣೆ ಮಾಡಿದ್ದೇಗೆ? ಮುಂಬೈ ಟೆರರಿಸ್ಟ್ ಅಟ್ಯಾಕ್ ತರಹದ ಘಟನೆ ಆಗಿತ್ತಾ ಅದು? ಅದನ್ನು ಹೇಗೆ ಪ್ರೊಜೆಕ್ಟ್ ಮಾಡಿದ್ದೀರಿ ನೀವು? ಎನ್ನುವ ಬೇಜಬ್ದಾರಿ ಹೇಳಿಕೆ ನೀಡಿದ್ದಾರೆ. ಬಿಜೆಪಿಯನ್ನು ಟೀಕಿಸೋ ಭರದಲ್ಲಿ ಲಘು ಹೇಳಿಕೆ ನೀಡಿದ್ದಾರೆ.  ಮತದಾನದ ಹಕ್ಕನ್ನು ಕದಿಯುವುದಕ್ಕೆ ಇದನ್ನು ಮಾಡಿದ್ದಾರೆ. ಈ ಮೂಲಕ ವೋಟರ್ ಐಡಿ ಹಗರಣ ಮುಚ್ಚಿ ಹಾಕಿದರು ಎಂದು ಗಂಭೀರವಾಗಿ ಆರೋಪಿಸಿದರು.


ಇದನ್ನೂ ಓದಿ: Karnataka Politics: ನಿಮಗೆ ನಿಮ್ಮ ಅಪ್ಪ, ಅಮ್ಮ ಯಾರೂ ಎಂದೇ ಗೊತ್ತಿಲ್ಲ: ಸಿದ್ದುಗೆ ಈಶ್ವರಪ್ಪ ಗುದ್ದು


ಸಂಕ್ರಾಂತಿ ಸೀಕ್ರೆಟ್ ಬಗ್ಗೆ ಹಿಂಟ್​ ಕೊಟ್ಟ ಡಿಕೆಎಸ್​


ಆಪರೇಷನ್ ಕಮಲಕ್ಕೆ ಒಳಗಾದ ಶಾಸಕರು, ಮರಳಿ ಕಾಂಗ್ರೆಸ್ ಸೇರ್ತಾರಾ ಎಂಬ ಪ್ರಶ್ನೆಗೆ ಇದೇ ವೇಳೆ ಉತ್ತರಿಸಿದ ಡಿಕೆ ಶಿವಕುಮಾರ್ ಅವರು, ಸಂಕ್ರಾಂತಿ ಬಳಿಕ ಎಲ್ಲಾ ಗೊತ್ತಾಗುತ್ತದೆ. ಸದ್ಯ ಇದು ಗುಟ್ಟು, ಗುಟ್ಟಾಗಿಯೇ ಇರುತ್ತದೆ ಎಂದು ಮಾರ್ಮಿಕವಾಗಿ ಉತ್ತರ ನೀಡಿದರು. ಆ ಮೂಲಕ ಮರಳಿ ಆಪರೇಷನ್​​ ಆಗುತ್ತೆ ಎಂಬ ಚರ್ಚೆಗೆ ಮತ್ತಷ್ಟು ಪುಷ್ಟಿ ನೀಡಿದರು.


ಬಿಜೆಪಿ ಆರೋಪಗಳಿಗೆ ತಿರುಗೇಟು


ನಾನು ಕೊತ್ವಾಲ್ ಶಿಷ್ಯನೋ, ಗುರುನೋ ಅನ್ನೋದಕ್ಕೇ ಸಾಕ್ಷಿ ತೋರಿಸಿ. 1985ರಲ್ಲಿ ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರ ಮೇಲೆ ಆಸೆಂಬ್ಲಿ ಚುನಾವಣೆಗೆ ನಿಂತವನು‌ ನಾನು. 1980ರಲ್ಲೇ ನಾನು‌ ಆಕ್ಟೀವ್ ಪಾಲಿಟಿಕ್ಸ್ ನಲ್ಲಿ ಇದ್ದೇ. ನಾನು ಕೊತ್ವಾಲ್ ರಾಮಚಂದ್ರ ಶಿಷ್ಯನೋ, ಗುರುನೋ ಅನ್ನೋದಕ್ಕೆ ಏನು ದಾಖಲೆ ಇದೆ ತೋರಿಸಿ. ದೇವರಾಜ್ ಅರಸು ಕಾಲದಲ್ಲಿ, ಎಂ.ಬಿ.ನಟರಾಜ್‌ ಕಾಲದಲ್ಲಿ ವಿದ್ಯಾರ್ಥಿಗಳ ನಾಯಕರಾಗಿದ್ದ ಸಮಯದಲ್ಲಿ ಹಲವರು ಭೇಟಿಯಾಗಿ ಹೋಗಿದ್ದಾರೆ. ಆದರೆ ನನಗೆ ನನ್ನದೇ ಆದ ಇತಿಹಾಸ ಇದೆ ಎಂದರು.


mangaluru blast case update adgp alok kumar press meet mrq
ಶಾರೀಕ್


ನನ್ನ, ಸಿದ್ದರಾಮಯ್ಯ ನಡುವೆ ಯಾವುದೇ ಕಿತ್ತಾಟ ಇಲ್ಲ


ಕಾಂಗ್ರೆಸ್ ಪಕ್ಷದಲ್ಲಿ ಅವರವರ ಭಾವನೆಯನ್ನು ವಿಶ್ವಾಸ ವ್ಯಕ್ತಪಡಿಸುವುದಕ್ಕೆ ಅಡ್ಡಿ ಪಡಿಸುವುದಿಲ್ಲ. ಅವರವರ ಅಭಿಮಾನಿಗಳು ಮಾಡ್ತಾರೆ, ಅದನ್ನು ಬಿಡಿ. ಆದರೆ ಸಿದ್ದರಾಮಯ್ಯಗೆ ನನಗೆ ಕಿತ್ತಾಟ ಮಾಡಿದ ಸಣ್ಣ ಉದಾಹರಣೆ ತೋರಿಸಿ ನೋಡೋಣ? ಮಾಧ್ಯಮದವರಿಗೆ ಬೇಕೂ ಅಂತ ಸಿಎಂ ವಿಚಾರ ಮಾತಾಡ್ತೀದ್ದೀರಿ ಅಷ್ಟೇ.


ಇದನ್ನೂ ಓದಿ: Janardhan Reddy: ಜನಾರ್ದನ ರೆಡ್ಡಿ ಮತ್ತೆ ಬಿಜೆಪಿಗೆ? ಗಣಿ ಧಣಿಯನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳೋ ಸುಳಿವು ನೀಡಿದ ರಾಜಾಹುಲಿ


ಯಾವ ದೆಹಲಿಯ ನಾಯಕರೂ ನನ್ನ ಕೂರಿಸಿ ಮಾತನಾಡಿಲ್ಲ. ನಾನು ಕೆಪಿಸಿಸಿ ಅಧ್ಯಕ್ಷ ಅವರು ಶಾಸಕಾಂಗ ಪಕ್ಷದ ನಾಯಕರಾಗಿದ್ದಾರೆ. ನಾವು ಮುಂದೆ ಹೋಗಬೇಕಾದ ಪ್ಲ್ಯಾನ್ ಆಫ್ ಆ್ಯಕ್ಷನ್ ಬಗ್ಗೆ ನಮಗೆ ಮಾರ್ಗದರ್ಶನ ಕೊಟ್ಟಿದ್ದಾರೆ. ಆದರೆ ನಮ್ಮ ನಡುವೆ ಯಾವುದೇ ಕಿತ್ತಾಟ ಇಲ್ಲ ಎಂದು ಸ್ಪಷ್ಟಪಡಿಸಿದರು.


ಇದೇ ವೇಳೆ ಕುಮಾರಸ್ವಾಮಿ ಜೊತೆ ಎಷ್ಟು ಅಂತಾ ಕುಸ್ತಿ ಮಾಡಲಿ ಎಂದು ಪ್ರಶ್ನಿಸಿದ ಡಿಕೆ ಶಿವಕುಮಾರ್, ಅವಾಗ ಏನೋ ಹುಡುಗ ಇದ್ದೋ ಕುಸ್ತಿ ಮಾಡಿದ್ವಿ, ಇವಾಗ ಕೂದಲು ಎಲ್ಲಾ ಬೆಳ್ಳಗಾಗಿದೆ, ಈಗ ಕುಸ್ತಿ ಮಾಡೋಕೆ ಆಗುತ್ತಾ? ಆದರೆ ಅವರ ವಿರುದ್ಧ ಸೈದ್ಧಾಂತಿಕವಾಗಿ ಕುಸ್ತಿ ಮಾಡುತ್ತೇನೆ ಎಂದರು.

Published by:Sumanth SN
First published: