• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಕೋವಿಡ್ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾದ ಕಾರಣಕ್ಕೆ ಸಚಿವರ ಖಾತೆ ಬದಲು: ಡಿಕೆ ಶಿವಕುಮಾರ್​​

ಕೋವಿಡ್ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾದ ಕಾರಣಕ್ಕೆ ಸಚಿವರ ಖಾತೆ ಬದಲು: ಡಿಕೆ ಶಿವಕುಮಾರ್​​

ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್

ಆರೋಗ್ಯ ಸಚಿವರ  ಖಾತೆ ಬದಲಾಯಿಸಿರುವುದು ಸೋಂಕು ತಡೆಯುವಲ್ಲಿ ಸರ್ಕಾರ ಅಸಮರ್ಥವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

  • Share this:

ಬೆಂಗಳೂರು (ಅ.12): ಕೋವಿಡ್​ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿರುವುದರಿಂದ ಬಿಎಸ್​ ಯಡಿಯೂರಪ್ಪ ಸರ್ಕಾರ ದಿಢೀರ್​ ಎಂದು ಸಚಿವರ ಖಾತೆ ಬದಲಾವಣೆ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಆರೋಪಿಸಿದ್ದಾರೆ. ರಾಜ್ಯ ಸಚಿವ ಸಂಪುಟದಲ್ಲಿನ ಈ ಮಹತ್ವ ಬದಲಾವಣೆ ಕುರಿತು ಟ್ವೀಟ್​ ಮಾಡಿರುವ ಅವರು, ಆರೋಗ್ಯ ಸಚಿವರ  ಖಾತೆ ಬದಲಾಯಿಸಿರುವುದು ಅಸಮರ್ಥತೆಗೆ ಸಾಕ್ಷಿಯಾಗಿದೆ ಎಂದು ಟೀಕಿಸಿದ್ದಾರೆ. ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಆರೋಗ್ಯ ಸಚಿವರ ಖಾತೆ ಬದಲಾವಣೆ ಮಾಡಲಾಗಿದೆ. ಸರ್ಕಾರ ಈ ಸೋಂಕು ತಡೆಯುವಲ್ಲಿ ವಿಫಲವಾಗಿರುವುದು ಇದಕ್ಕೆ ಸ್ಪಷ್ಟ ನಿದರ್ಶನ. ಇದೇ ಕಾರಣಕ್ಕೆ ಸಂಪುಟ ಸರ್ಜರಿ ನಡೆಸಲಾಗಿದೆ. ಸರ್ಕಾರದ ಈ ಅಸಮರ್ಥತೆಯಿಂದ ಜನರು ಪ್ರಾಣ ಹಾಗೂ ಜೀವ ಹಾನಿಯಾಗಿದೆ ಎಂದು ತಿಳಿಸಿದ್ದಾರೆ. 



ಸಚಿವ ಬಿ ಶ್ರೀರಾಮುಲು ಬಳಿಯಿದ್ದ ಆರೋಗ್ಯ ಖಾತೆಯನ್ನು ವೈದ್ಯಕೀಯ ಸಚಿವ ಕೆ ಸುಧಾಕರ್​ಗೆ ಹೆಚ್ಚುವರಿ ಜವಾಬ್ದಾರಿಯಾಗಿ ನೀಡಲಾಗಿದೆ. ಕೊರೋನಾ ನಿರ್ವಹಣೆಯಲ್ಲಿ ಸಚಿವ ಶ್ರೀರಾಮುಲು ಮತ್ತು ಕೆ ಸುಧಾಕರ್​ ನಡುವಿನ ಸಮನ್ವಯತೆ ಕೊರತೆ ಕಾರಣದಿಂದಾಗಿ ಈ ಬದಲಾವಣೆ ಮಾಡಲಾಗಿದೆ. ಅಲ್ಲದೇ ಈ ಹಿಂದೆ ಶ್ರೀರಾಮುಲು ಸಮಾಜ ಕಲ್ಯಾಣ ಖಾತೆಗೆ ಬೇಡಿಕೆ ಇಟ್ಟಿದ್ದನ್ನು ಕೂಡ ಪರಿಗಣಿಸಲಾಗಿದೆ. ಆದರೆ, ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಈ ಮಹತ್ವದ ಖಾತೆ ಬದಲಾವಣೆ ಮಾಡಿರುವುದು ಸರ್ಕಾರದ ಕಾರ್ಯ ನಿರ್ವಹಣೆ ಹಾಗೂ ಸಚಿವರ ಆಡಳಿತ ವೈಖರಿಯ ಬಗ್ಗೆಗಿನ ಅಸಮಾಧಾನ ತೋರಿಸಿದೆ.


ತಮ್ಮ ಖಾತೆ ಬದಲಾವಣೆಯಿಂದ ಸಚಿವ ಶ್ರೀರಾಮುಲು ಕೂಡ ಮುಜುಗರಕ್ಕೆ ಒಳಗಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಆರೋಗ್ಯ ಇಲಾಖೆ ಕೈ ತಪ್ಪಿದರ ಬಗ್ಗೆ ಇಂದು ಸಂಜೆ ಸಚಿವ ಶ್ರೀರಾಮುಲು ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ವಿವರಣೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.


ಇದನ್ನು ಓದಿ: ಜಾತಿ ರಾಜಕಾರಣ ನಡೆಯುವುದಿದ್ದರೆ ದೇವೇಗೌಡ್ರು, ನಿಖಿಲ್​ ಯಾಕೆ ಸೋತರು; ಸಿದ್ದರಾಮಯ್ಯ


ರಾಜ್ಯದಲ್ಲಿ ಕೊರೋನಾ ಹೆಚ್ಚಳದ ಬಗ್ಗೆ ಪ್ರಧಾನಿ ಮೋದಿಯವರು ಆತಂಕ ವ್ಯಕ್ತಪಡಿಸಿದ್ದರು. ಇತ್ತೀಚೆಗೆ ಕೊರೋನಾ ಹೆಚ್ಚಿರುವ ರಾಜ್ಯಗಳೊಂದಿಗೆ ವಿಡಿಯೋ ಕಾನ್ಫರೆನ್ಸ್​ ನಡೆಸಿದ್ದ ಅವರು, ಸೋಂಕು ನಿವಾರಣೆಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದ್ದರು. ಈ ಹಿನ್ನಲೆ ಸಿಎಂ ದಿಢೀರ್​ ಎಂದು ಖಾತೆ ಬದಲಾವಣೇ ಮಾಡಿರುವ ಸಂಭವ ಕೂಡ ಇದೆ. ಈ ಬಗ್ಗೆ ಈಗಾಗಲೇ ಬಿಎಸ್​ವೈ ಹೈಕಮಾಂಡ್​ಗೆ ಸುದ್ದಿ ತಲುಪಿಸಿದ್ದಾರೆ. ಬೆಂಗಳೂರು ಕೊರೋನಾ ನಿರ್ವಹಣೆಯನ್ನು ಸುಧಾಕರ್​ ಹಾಗೂ ರಾಜ್ಯದ ಕೊರೋನಾ ನಿರ್ವಹಣೆಯನ್ನು ಶ್ರೀರಾಮುಲು ನಡೆಸುತ್ತಿದ್ದರು. ಈ ಇಬ್ಬರ ನಡುವೆ ಗೊಂದಲ ಆಗಬಾರದು ಎಂಬ ಕಾರಣಕ್ಕೆ ಈ ಕ್ರಮಕ್ಕೆ ಮುಂದಾಗಿರುವುದಾಗಿ ಸಿಎಂ ವಿವರಣೆ ನೀಡಿದ್ದಾರೆ ಎನ್ನಲಾಗಿದೆ.


ಇನ್ನು ಕೊರೋನಾ ನಿರ್ವಹಣೆ ಸಂದರ್ಭದಲ್ಲಿ ಸುಧಾಕರ್​ ಹಾಗೂ ಶ್ರೀರಾಮಲು ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡುವ ಮೂಲಕ ಇಬ್ಬರ ನಡುವೆ ಸಮನ್ವಯತೆ ಇಲ್ಲ ಎಂಬುದು ಬಹಿರಂಗವಾಗಿತ್ತು. ಅಲ್ಲದೇ, ಕೊರೋನಾ ಜವಾಬ್ದಾರಿಯನ್ನು ಸುಧಾಕರ್​ಗೆವಹಿಸಿದ್ದ ಬಗ್ಗೆ ಶ್ರೀರಾಮುಲು ಅವರು ಅಸಮಾಧಾನ ಹೊರಹಾಕಿದ್ದರು. ಇದಕ್ಕೆ ತೇಪೆ ಹಚ್ಚಿದ ಸಚಿವ ಸುಧಾಕರ್​, ನಮ್ಮ ನಡುವೆ ಯಾವುದೇ ವೈಮನಸ್ಸಿಲ್ಲ. ರಾಮುಲು ಅಣ್ಣನ ರೀತಿ ಎಂದಿದ್ದರು.

Published by:Seema R
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು