• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Kanakapura: ಡಿಕೆಶಿಗೆ ಸಾಥ್ ಕೊಟ್ಟ ಪತ್ನಿ ಉಷಾ; ಆರ್ ಅಶೋಕ್ ಸ್ಪರ್ಧೆ ಬಗ್ಗೆ ಹೇಳಿದ್ದು ಹೀಗೆ

Kanakapura: ಡಿಕೆಶಿಗೆ ಸಾಥ್ ಕೊಟ್ಟ ಪತ್ನಿ ಉಷಾ; ಆರ್ ಅಶೋಕ್ ಸ್ಪರ್ಧೆ ಬಗ್ಗೆ ಹೇಳಿದ್ದು ಹೀಗೆ

ಡಿಕೆ ಶಿವಕುಮಾರ್ ಪತ್ನಿ ಚುನಾವಣಾ ಪ್ರಚಾರ

ಡಿಕೆ ಶಿವಕುಮಾರ್ ಪತ್ನಿ ಚುನಾವಣಾ ಪ್ರಚಾರ

DK Shivakumar: ಡಿಕೆ ಶಿವಕುಮಾರ್, ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದೆ. ಈ ಹಿನ್ನೆಲೆ ಡಿಕೆ ಶಿವಕುಮಾರ್ ಪರವಾಗಿ ಉಷಾ ಅವರು ಪ್ರಚಾರ ನಡೆಸುತ್ತಿದ್ದಾರೆ.

 • News18 Kannada
 • 2-MIN READ
 • Last Updated :
 • Ramanagara, India
 • Share this:

ರಾಮನಗರ: ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President DK Shivakumar) ಪತ್ನಿ ಉಷಾ (Usha Shivakumar) ಅವರು ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಇಂದಿನಿಂದ ಕ್ಷೇತ್ರದ ಮನೆ ಮನೆಗೆ ತೆರಳಿ ಪತಿ ಪರವಾಗಿ ಮತಯಾಚನೆ ಮಾಡಲಿದ್ದಾರೆ. ಇಂದು ಬೆಳಗ್ಗೆ ಕನಕಪುರ ನಗರ (Kanakapur) ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ ಉಷಾ ಶಿವಕುಮಾರ್, ಮಹಿಳೆಯೊಬ್ಬರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು. ಚುನಾವಣಾ ಪ್ರಚಾರದ ವೇಳೆ ನ್ಯೂಸ್ 18 ಜೊತೆ ಮಾತನಾಡಿದ ಉಷಾ ಶಿವಕುಮಾರ್, ನಾನು ವೋಟಿಂಗ್ ಕೊನೆಯವರೆಗೂ ಕ್ಯಾಂಪೇನ್ ಮಾಡುತ್ತೇನೆ. ನಾನು ವೋಟ್ ಕೇಳುವುದೇ ಬೇಕಿಲ್ಲ, ಜನರೇ ಮತ ಕೊಡ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಕನಕಪುರದಲ್ಲಿ ಸಚಿವ ಆರ್.ಅಶೋಕ್ ಸ್ಪರ್ಧೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಉಷಾ ಶಿವಕುಮಾರ್, ನನಗೆ ರಾಜಕೀಯ ಗೊತ್ತಿಲ್ಲ, ಸಾಹೇಬರ ಪರವಾಗಿ ಮತ ಕೇಳುತ್ತೇನೆ. ಕಳೆದ ಬಾರಿಯೂ ಪ್ರಚಾರ ಮಾಡಿದ್ದೆ, ಈ ಬಾರಿಯೂ ಪ್ರಚಾರ ಮಾಡ್ತೇನೆ, ಜನರು ನಮಗೆ ಮತ ಕೊಡುತ್ತಾರೆ ಎಂದು ಹೇಳಿದರು.


ಕೆಪಿಸಿಸಿ ಅಧ್ಯಕ್ಷರಾಗಿರುವ ಹಿನ್ನೆಲೆ ಡಿಕೆ ಶಿವಕುಮಾರ್, ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದೆ. ಈ ಹಿನ್ನೆಲೆ ಡಿಕೆ ಶಿವಕುಮಾರ್ ಪರವಾಗಿ ಉಷಾ ಅವರು ಪ್ರಚಾರ ನಡೆಸುತ್ತಿದ್ದಾರೆ.
ಸೋಮಣ್ಣ ಪತ್ನಿ ಭರ್ಜರಿ ಪ್ರಚಾರ


ಸಚಿವ ವಿ.ಸೋಮಣ್ಣ (Minister V Somanna) ಎರಡು ಕಡೆ ಸ್ಪರ್ಧಿಸ್ತಿದ್ದಾರೆ. ವರುಣಾದಲ್ಲಿ ಸೋಮಣ್ಣ ಪ್ರಚಾರ ಮಾಡ್ತಿದ್ರೆ, ಚಾಮರಾಜನಗರದಲ್ಲಿ ಸೋಮಣ್ಣ ಪತ್ನಿ ಶೈಲಜಾ ಪ್ರಚಾರ ಮಾಡುತ್ತಿದ್ದಾರೆ.


ಇದನ್ನೂ ಓದಿ: Basavaraj Bommai: 'ಕಾಮನ್ ಮ್ಯಾನ್‌'ನಿಂದ 'ಸಿಎಂ' ಹುದ್ದೆಯವರೆಗೆ ಬಸವರಾಜ ಬೊಮ್ಮಾಯಿ ಹೆಜ್ಜೆಗುರುತು

top videos


  ಸೋಮಣ್ಣ ವಿರುದ್ದದ ಬಂಡಾಯ ಶಮನದಲ್ಲೂ ಪ್ರಮುಖ ಪಾತ್ರ ವಹಿಸಿದ್ದ ಶೈಲಜಾ, ನಾಗಶ್ರೀ ಪ್ರತಾಪ್ ಮನವೊಲಿಸಿದ್ರು. ಇದೀಗ ಚಾಮರಾಜನಗರದಲ್ಲಿ ಬೀಡು ಬಿಟ್ಟು ಮತಸೆಳೆಯಲು ಯತ್ನಿಸ್ತಿದ್ದಾರೆ.

  First published: