ಬೆಂಗಳೂರು/ಕಾರವಾರ: ಮಾಜಿ ಸಿಎಂ ಜಗದೀಶ್ ಶೆಟ್ಟರ್ (Former CM Jagadish Shettar) ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಶಿರಸಿಯಲ್ಲಿ ಸ್ಪೀಕರ್ ವಿಶ್ವೇಶ್ವರಯ್ಯ ಕಾಗೇರಿ (Vishweshwar Hegde Kageri) ಅವರನ್ನು ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದರು. ರಾಜೀನಾಮೆ ಸಲ್ಲಿಸಿರುವ ಜಗದೀಶ್ ಶೆಟ್ಟರ್ ಮುಂದಿನ ನಡೆ ಏನು ಅನ್ನೋದು ಇನ್ನೂ ನಿಗೂಢವಾಗಿದೆ. ಕಳೆದ ಒಂದು ವಾರದಿಂದ ಶೆಟ್ಟರ್ ಮನವೊಲಿಕೆಗೆ ಸಿಎಂ ಬೊಮ್ಮಾಯಿ (CM Basavaraj Bommai) ಆದಿಯಾಗಿ ಎಲ್ಲರೂ ಪ್ರಯತ್ನಿಸಿದ್ದರು. ಆದರೆ ಶೆಟ್ಟರ್ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯಲಿಲ್ಲ. ಹೀಗಾಗಿ ಇಂದು ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.
ಇನ್ನು ಜಗದೀಶ್ ಶೆಟ್ಟರ್ ಮುಂದೆ ಕಾಂಗ್ರೆಸ್ ಸೇರ್ತಾರೆ ಎಂಬ ಮಾತುಗಳು ಕೇಳಿ ಬಂದಿವೆ. ಕಾಂಗ್ರೆಸ್ ರಾಜ್ಯ ಚುನಾವಣಾ ಉಸ್ತುವಾರಿ ರಣ್ದೀಪ್ ಸುರ್ಜೇವಾಲ ಕರೆ ಮಾಡಿ ಪಕ್ಷಕ್ಕೆ ಆಹ್ವಾನಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತ್ರ ಈ ಸಂಬಂಧ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಆಮೇಲೆ ನೋಡೋಣ
ಅವರು ಕಾಂಗ್ರೇಸ್ ಸೇರ್ತೀನಿ ಅಂತ ಹೇಳಿದ್ದಾರಾ? ನಮಗೆ ಅವರು ಬರ್ತೀನಿ ಅಂತ ಹೇಳಿಲ್ಲ. ಅವರು ರಾಜೀನಾಮೆ ಕೊಡ್ತೀನಿ ಅಂತಿದ್ದಾರೆ. ಮೊದಲು ರಾಜೀನಾಮೆ ಕೊಡಲಿ ಆಮೇಲೆ ನೋಡೋಣ ಎಂದು ಹೇಳಿದರು.
ಮೊದಲು ಶೆಟ್ಟರ್ ತೀರ್ಮಾನ ಮಾಡಲಿ
ಶೆಟ್ಟರ್ ಅವರ ಹೆಸರನ್ನ ತೆಗೆದುಕೊಂಡು ಮಿಸ್ ಗೈಡ್ ಮಾಡಬಾರದು. ಜಗದೀಶ್ ಶೆಟ್ಟರ್ ಅವರ ತೀರ್ಮಾನ ಏನು ಅಂತ ನೋಡೋಣ. ರಾಜ್ಯದಲ್ಲಿ ಬಿಜೆಪಿಯನ್ನು ಬೆಳಸಿದ ನಾಯಕರಿಗೆ ಈ ರೀತಿ ಮಾಡಬಾರದು ಎಂದು ಶೆಟ್ಟರ್ ಪರ ಸಾಫ್ಟ್ ಕಾರ್ನರ್ ತೋರಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ