ಬೆಂಗಳೂರು: ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar), ನನ್ನ ಜೊತೆಗೆ ಕಾಂಗ್ರೆಸ್ನಿಂದ (Congress) ಓರ್ವ ಮಂತ್ರಿಯನ್ನು (Minister) ಈಗ ಹೆದರಿಸುತ್ತಿದ್ದಾನೆ. ಬರುತ್ತಿಯ ಇಲ್ಲ ಸಿ.ಡಿ ಬಿಡಬೇಕಾ ಅಂತ ಎಂದು ಬೆದರಿಸುತ್ತಾರೆ (Threatening) ಎಂದು ಗಂಭೀರ ಆರೋಪ ಮಾಡಿದ್ದ ರಮೇಶ್ ಜಾರಕಿಹೊಳಿಗೆ ಡಿಕೆಶಿ ತಿರುಗೇಟು ನೀಡಿದ್ದಾರೆ. ಬೆಂಗಳೂರಿನ (Bengaluru) ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ನಿಮ್ಹಾನ್ಸ್ ಹಾಸ್ಪಿಟಲ್ (Nimhans Hospital) ಅಭ್ಯರ್ಥಿಗಳ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ. ಅವರ ಪಾರ್ಟಿಯಲ್ಲಿ ಏನಾಗುತ್ತದೆ ಅಂತ ನನಗೆ ಗೊತ್ತಿಲ್ಲ ಎಂದು ಟಾಂಗ್ ನೀಡಿದ್ದಾರೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದೇನು?
ಗೋಕಾಕ್ ಕ್ಷೇತ್ರದಲ್ಲಿ ಕಾರ್ಯಕರ್ತರ ಬೃಹತ್ ಸಮಾರಂಭ ನಡೆಸಿ ಮಾತನಾಡಿದ ರಮೇಶ್ ಜಾರಕಿಹೊಳಿ, ವಿರೋಧಿಗಳ ಅಪಪ್ರಚಾರಕ್ಕೆ ಯಾವುದೇ ಕಾರಣಕ್ಕೂ ಕಿವಿ ಕೊಡಬೇಡಿ. ಎಲ್ಲಾ ಜಾತಿ, ಧರ್ಮದವರನ್ನು ಒಂದೇ ರೀತಿಯಲ್ಲಿ ನೋಡುತ್ತೇನೆ. ಕೇವಲ ನಮ್ಮ ಜಾತಿಯವರನ್ನು ಪ್ರೀತಿ ಮಾಡಿದರೆ ಶಾಸಕರಾಗಿ ಇರಲು ನಾಲಾಯಕ್.
ಇದನ್ನೂ ಓದಿ: NA Haris: ವಿಶ್ವವಿಖ್ಯಾತ ಕರಗದ ಬಗ್ಗೆ ಅವಹೇಳನಕಾರಿ ಹೇಳಿಕೆ; ವಿರೋಧದ ಬೆನ್ನಲ್ಲೇ ಕ್ಷಮಿಸಿ ಎಂದ ಶಾಸಕ ಹ್ಯಾರಿಸ್
ವಿರೋಧಿಗಳು ಕೇವಲ ಕುತಂತ್ರದ ಮೂಲಕ ರಾಜಕೀಯ ಮಾಡಬೇಕಷ್ಟೇ ಹೊರತು ಬೇರೇನೂ ಮಾಡಲು ಸಾಧ್ಯವಿಲ್ಲ. ತಂತ್ರಜ್ಞಾನ ಬಳಸಿ ಕಟ್ & ಪೇಸ್ಟ್ ಮಾಡಬಹುದು, ಯಾರಿಗಾದರೂ ಬೈದಿರೋದನ್ನು ತಂದು ಎಡಿಟ್ ಮಾಡುತ್ತಾರೆ. ತನಿಖೆಯಲ್ಲಿ ಸುಳ್ಳು ಎಂದು ಬರುತ್ತದೆ, ಆದರೆ ಅಲ್ಲಿಯವರೆಗೆ ಡ್ಯಾಮೇಜ್ ಆಗುತ್ತದೆ.
ನೇರ ಯುದ್ಧ ಮಾಡಲು ಸದಾ ಸಿದ್ಧನಿದ್ದೇನೆ, ಆದರೆ ಕುತಂತ್ರ ಮಾಡಿದರೆ ಏನು ಮಾಡೋದು? ಕನಕಪುರಕ್ಕೆ ಬರಲು ನಾನು ಸಿದ್ದವಿದ್ದೇನೆ, ಆದರೆ ಷಡ್ಯಂತ್ರ ಯಾಕೆ ಮಾಡುವುದು? ಕಾಂಗ್ರೆಸ್ನಲ್ಲಿ ಎಲ್ಲರೂ ಬಾಯಿಮುಚ್ಚಿಕೊಂಡು ಕುಳಿತಿದ್ದಾರೆ, ಇಂತಹ ನೂರು ಸಿ.ಡಿ ಬರಲಿ ಎದುರಿಸಲು ನಾನು ಸಿದ್ದವಿದ್ದೇನೆ.
ಸಹೋದರರು, ಪತ್ನಿ, ಮಕ್ಕಳು ನನ್ನ ಜೊತಗೆ ಇದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಅಲ್ಲದೆ, ಕಾಂಗ್ರೆಸ್ ಸಿ.ಡಿ ಇಟ್ಟುಕೊಂಡು ಹೆದರಿಸಿ ಸಚಿವರನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ: Bengaluru: BMTC ಕಂಡಕ್ಟರ್ ಸಜೀವ ದಹನ ಕೇಸ್ಗೆ ಮತ್ತೆ ಟ್ವಿಸ್ಟ್; ಡ್ರೈವರ್ ಕೈವಾಡ ಶಂಕೆ! ತನಿಖೆ ಚುರುಕುಗೊಳಿಸಿದ ಪೊಲೀಸರು
ಇನ್ನು, ಪ್ರಧಾನಿ ಮೋದಿ ರೌಡಿಶೀಟರ್ ಮುಂದೆ ಕೈ ಮುಗಿದು ನಿಂತ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ಬಿಜೆಪಿಯ ನಾಯಕರೆಲ್ಲರೂ ಮುತ್ತು ರತ್ನಗಳು. ಯಾರಿಗಾದರೂ ಮೋದಿ ಕೈ ಮುಗಿಯಲಿ. ರೌಡಿಶೀಟರ್ನಾದರೂ ಸೇರಿಸಿಕೊಳ್ಳಲಿ, ರೇಪಿಸ್ಟ್ ಆದರೂ ಸೇರಿಸಿಕೊಳ್ಳಲಿ. ಅವರ ಮುತ್ತು ರತ್ನಗಳನ್ನ ಚೆನ್ನಾಗಿ ನೋಡಿಕೊಳ್ಳಲಿ ಎಂದರು.
ಅಲ್ಲದೆ, ಧ್ರುವನಾರಾಯಣ ಅವರು ನಮ್ಮ ಪಕ್ಷದ ಆಸ್ತಿ, ಅವರ ಬಗ್ಗೆ ಎಐಸಿಸಿ ಅಧ್ಯಕ್ಷರಿಗೆ ಚೆನ್ನಾಗಿ ಗೊತ್ತಿದೆ. ಅವರ ಸಾವಿಗೆ ನ್ಯಾಯ ಒದಗಿಸುವ ಕೆಲಸ ನಾವು ಮಾಡುತ್ತೇವೆ. ನಾನು ನನ್ನ ಅಭಿಪ್ರಾಯವನ್ನು ತಿಳಿಸುತ್ತೇನೆ. ಈಗಲೂ ನಾವು ಶಾಕ್ನಿಂದ ಹೊರ ಬಂದಿಲ್ಲ. ನಾವು ಪಕ್ಷ ಸಂಘಟನೆಯ ನಾಯಕರನ್ನು ಕಳೆದುಕೊಂಡಿದ್ದೇವೆ. ಬೆಂಗಳೂರಿನಲ್ಲಿ 16ರಂದು ಸಭೆ ಕರೆದಿದ್ದೇವೆ, ಮಾರ್ಚ್ 17 ರಂದು ಎಐಸಿಸಿ ಸಭೆ ಕರೆಯಲಾಗಿದೆ. ಅಂದು ಬಹುತೇಕ ಕ್ಷೇತ್ರಗಳ ಟಿಕೆಟ್ ಫೈನಲ್ ಆಗಲಿದೆ. ಪಕ್ಷ ಹೇಳಿದ ಕೆಲಸವನ್ನು ಮಾಡಿಕೊಂಡು ಹೋಗಬೇಕು. ಈ ಬಗ್ಗೆ ಎಐಸಿಸಿ ಅಧ್ಯಕ್ಷರು ಅಂತಿಮ ತೀರ್ಮಾನ ಮಾಡಲಿದ್ದಾರೆ ಎಂದು ಧ್ರುವನಾರಾಯಣ ಪುತ್ರನಿಗೆ ಟಿಕೆಟ್ ನೀಡುವ ವಿಚಾರಕ್ಕೆ ಸ್ಪಷ್ಟನೆ ಕೊಟ್ಟರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ