ಚುನಾವಣೆ ಹೊತ್ತಲ್ಲಿ ಕಾಂಗ್ರೆಸ್ ನಾಯಕರ (Congress Leader) ಒಳ ಜಗಳಗಳು ಹೊರ ಬಂದಿದೆ. ಪಕ್ಷದ ಇಬ್ಬರು ಹಿರಿಯ ನಾಯಕರ ವಿಚಾರವಾಗಿ ಮಾಜಿ ಸಂಸದೆ ಬಹಿರಂಗವಾಗಿ ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ, ಕೆಪಿಸಿಸಿ ಅಧ್ಯಕ್ಷರು (KPCC President) ತಮ್ಮ ವಿರುದ್ಧ ಟ್ರೋಲ್ ಮಾಡಿಸುತ್ತಿದ್ದಾರೆ ಎಂದು ತಮ್ಮ ಪಕ್ಷದ ನಾಯಕರ ವಿರುದ್ಧವೇ ನೇರವಾಗಿ ಬೊಟ್ಟು ತೋರಿಸಿ ಆರೋಪ ಮಾಡಿದ್ದಾರೆ. ರಾಜಕೀಯದಿಂದ ಅಂತರ ಕಾಯ್ದುಕೊಂಡಿದ್ದ ನಟಿ ರಮ್ಯಾ (Ramya/ Divya Spandana) ಇದೀಗ ರಾಜ್ಯ ಕಾಂಗ್ರೆಸ್ನಲ್ಲಿ ಬಿರುಗಾಳಿ ಮೂಡಿಸಿದ್ದಾರೆ ಎಂದರೆ ತಪ್ಪಾಗಲಾರದು. ಇದು ಡಿಕೆ ಶಿವಕುಮಾರ್ ಅವರಿಗೆ ಬಿಸಿ ತುಪ್ಪ ಕೂಡ ಆಗಿ ಪರಿಣಮಿಸಿದೆ.
ಇಬ್ಬರು ನನಗೆ ಆತ್ಮೀಯರು
ಈ ಎಲ್ಲಾ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಈ ಯಾವುದೇ ವಿಚಾರಗಳು ನನಗೆ ಗೊತ್ತಿಲ್ಲ. ಎಂ.ಬಿ. ಪಾಟೀಲ್ ನಮ್ಮ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷರು. ರಮ್ಯಾ ನಮ್ಮ ಪಕ್ಷದ ಮಾಜಿ ಸಂಸದರು. ಇಬ್ಬರೂ ನನಗೆ ಹತ್ತಿರದವರಾಗಾಗಿದ್ದಾರೆ. ಏನು ಮಿಸ್ ಫೈರ್ ಆಗಿದೆಯೋ ನನಗೆ ಗೊತ್ತಿಲ್ಲ. ಅದು ಯಾಕೆ ಈ ರೀತಿ ಆಗುತ್ತಿದೆಯೋ ಗೊತ್ತಿಲ್ಲ. ಈ ವಿಚಾರದಲ್ಲಿ ರಾಜಕೀಯ ಮಾಡಲು ಹೋಗಲ್ಲ. ಈ ಬಗ್ಗೆ ನಾವು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ. ಈ ಬಗ್ಗೆ ಇಲ್ಲಿ ನಾನು ಹೆಚ್ಚೇನೂ ಹೇಳುವುದಿಲ್ಲ ಎಂದು ಮಾತು ಸಾಗು ಹಾಕಿದ್ದಾರೆ.
ಕೆಸಿ ವೇಣುಗೋಪಲ್ ಮೊರೆ ಹೋದ ರಮ್ಯಾ
ಎಂಬಿ ಪಾಟೀಲ್ ಅಶ್ವತ್ಥ್ ನಾರಾಯಣ ಭೇಟಿ ವಿಚಾರದಲ್ಲಿ ಡಿಕೆ ಶಿವಕುಮಾರ್ ಹೇಳಿಕೆ ನನಗೆ ಅಚ್ಚರಿ ಮೂಡಿಸಿದೆ ಎಂದು ರಮ್ಯಾ ಟ್ವೀಟರ್ನಲ್ಲಿ ತಿಳಿಸಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗಿತ್ತು. ಈ ಟ್ರೋಲ್ ಡಿಕೆ ಶಿವಕುಮಾರ್ ಅವರೇ ಮಾಡಿಸಿದ್ದಾರೆ ಎಂದು ಮಾಜಿ ಸಂಸದೆ ನೇರ ಆರೋಪ ಮಾಡಿದ್ದರು. ಈ ಕುರಿತು ಇಂದು ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹೊರ ಹಾಕಿರುವ ರಮ್ಯಾ, ಕೆಸಿ ವೇಣುಗೋಪಲ್ ಮೊರೆ ಹೋಗಿದ್ದಾರೆ. ನೀವು ಮುಂದೆ ಕರ್ನಾಟಕಕ್ಕೆ ಬಂದಾಗ ಈ ವಿಚಾರ ಕುರಿತು ದಯವಿಟ್ಟು ಮಾಧ್ಯಮಗಳೊಂದಿಗೆ ಸ್ಪಷ್ಟಪಡಿಸಿ ಎಂದಿದ್ದಾರೆ. ನಾನು ನನ್ನ ಜೀವನದುದ್ದಕ್ಕೂ ಈ ನಿಂದನೆ ಮತ್ತು ಟ್ರೋಲಿಂಗ್‌ನೊಂದಿಗೆ ಬದುಕಬೇಕಾಗಿಲ್ಲ. ಹೀಗಾಗಿ ನೀವು ನನಗೆ ಸ್ಪಷ್ಟನೆ ನೀಡಬೇಕಿದೆ ಎಂದು ಮನವಿ ಮಾಡಿದ್ದಾರೆ.
Humble request to @kcvenugopalmp to please clarify with the media about this whenever you’re in Karnataka next. The least you can do for me Venugopal ji, so I don’t have to live with this abuse and trolling for the rest of my life.
— Divya Spandana/Ramya (@divyaspandana) May 12, 2022
ಕಾಂಗ್ರೆಸ್ ಪರ ಅಲೆ ಇದೆ
ಇನ್ನು ಇದೇ ವೇಳೆ ಪಕ್ಷದ ಬೆಳೆವಣಿಗೆ ಕುರಿತು ಮಾತನಾಡಿದ ಅವರು, ಜಿಲ್ಲೆಯ ಹಲವರು ನನ್ನ ಸಂಪರ್ಕದಲ್ಲಿದ್ದಾರೆ. ಬಿಜೆಪಿ, ಜೆಡಿಎಸ್ ಮುಖಂಡರು ಇದ್ದಾರೆ. ಶೀಘ್ರದಲ್ಲೇ ಚನ್ನಪಟ್ಟಣದಲ್ಲಿ ಅವರನ್ನು ಸೇರಿಸಿಕೊಳ್ಳುತ್ತೇವೆ. ಜೆಡಿಎಸ್ ಸರ್ಕಾರವನ್ನು ನಾವು ನೋಡಿದ್ದೇವೆ. ಬಿಜೆಪಿ ಸರ್ಕಾರದ ಆಡಳಿತವನ್ನು ನೋಡಿದ್ದೇವೆ. ನಾವು ಒಂದು ಸರ್ವೆ ಮಾಡಿಸಿದ್ದೇವೆ. ಸಮೀಕ್ಷೆಯಲ್ಲಿ ಕಾಂಗ್ರೆಸ್ ಪರವಾಗಿ ಜನರ ಒಲವಿದೆ ಎಂದು ತಿಳಿಸಿದರು.
ಇದನ್ನು ಓದಿ: DK Shivakumar ಹೇಳಿಕೆಗೆ ರಮ್ಯಾ ಅಚ್ಚರಿ; ಎಂಬಿ ಪಾಟೀಲ್ ಕಟ್ಟಾ ಕಾಂಗ್ರೆಸ್ಸಿಗ ಎಂದ ಮಾಜಿ ಸಂಸದೆ
ಬಿಜೆಪಿಯವರು ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಮಾತುಗಳನ್ನು ಆಡುವುದಿಲ್ಲ. ಅವರು ಕೋಮು ಸಂಘರ್ಷದ ಮೂಲಕ ಅಧಿಕಾರಕ್ಕೆ ಬರುತ್ತಿದ್ದಾರೆ. ಯಾರು ಏನೇ ಮಾಡಲಿ, ಜನ ನಮ್ಮ ಕಡೆ ಇದ್ದಾರೆ. ಅಧಿಕಾರ ಕೊಡದಿದ್ದರೂ ನಮ್ಮಪ್ರೀತಿ ಇರಲಿದೆ. ಬಿಜೆಪಿಯ ಹಲವು ನಾಯಕರು ಮಾತನಾಡಿದ್ದಾರೆ. ಅಣ್ಣಾ ಸ್ವಲ್ಪ ದಿನ ಇರಿ ಅಂತಿದ್ದಾರೆ. ಹಾಗಾಗಿ ನೀವು ಪ್ರತಿ ಮನೆಮನೆಗೆ ಭೇಟಿ ಮಾಡಿ. ಪ್ರತಿಯೊಬ್ಬ ಜನರನ್ನ ತಲುಪುವ ಕೆಲಸ ಮಾಡುತ್ತೇವೆ. ಇನ್ನು ಸ್ಥಳೀಯ ಸಂಸ್ಥೆ ಚುನಾವಣೆ ಯಾವಾಗ ಬೇಕಾದ್ರೂ ಬರಬಹುದು. ಅದನ್ನು ಎದುರಿಸಲು ನಾವಂತೂ ಚುನಾವಣೆಗೆ ರೆಡಿಯಾಗಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ