ಪಕ್ಷ ಅಧಿಕಾರಕ್ಕೆ ತರಲು ವಿಧಾನಸೌಧದ ಮೆಟ್ಟಲಿನ ಚಪ್ಪಡಿ ಕಲ್ಲಾಗಿ ನನ್ನನ್ನು ಬಳಸಿಕೊಳ್ಳಿ; ಡಿಕೆ ಶಿವಕುಮಾರ್

ವಿಧಾನ ಸೌಧಕ್ಕೆ ನನ್ನ ಚಪ್ಪಡಿ ಕಲ್ಲು ಆಗಿ ಮಾಡಿಕೊಳ್ಳಿ ಎಂದು ಹೇಳಿದ್ದೆ. ಪಕ್ಷ ಅಧಿಕಾರ ತರುವುದು ನಮ್ಮ ಉದ್ದೇಶ. ಪಕ್ಷದ ಹೈಕಮಾಂಡ್ ಏನು ಹೇಳಬೇಕೋ ಅದನ್ನ ಹೇಳಿದೆ ಎಂದು ಹೇಳಿದರು.

ಡಿ.ಕೆ. ಶಿವಕುಮಾರ್​.

ಡಿ.ಕೆ. ಶಿವಕುಮಾರ್​.

 • Share this:
  ಬೆಂಗಳೂರು: ಕಾಂಗ್ರೆಸ್​ನಲ್ಲಿ ಮುಂದಿನ ಸಿಎಂ ರೇಸ್ ವಿಚಾರವಾಗಿ ಇಂದು ಮತ್ತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಮುಂದಿನ ಸಿಎಂ ವಿಚಾರವಾಗಿ ಶಾಸಕರು ಮಾತಾಡ್ತಿರುವ ಬಗ್ಗೆ ಸಿ.ಎಲ್.ಪಿ ನಾಯಕರು ನೋಡಿಕೊಳ್ತಾರೆ. ಒಂದು ವೇಳೆ ಸಿಎಲ್.ಪಿ ನಾಯಕರು ನೋಡಿಕೊಳ್ಳದಿದ್ದರೆ, ಕಾಂಗ್ರೆಸ್ ಪಕ್ಷ ಬದುಕಿದೆ. ಸಿಎಂ ರೇಸ್ ವಿಚಾರ ಬಿಜೆಪಿಯಲ್ಲಿರೋದಕ್ಕೂ ಕಾಂಗ್ರೆಸ್ ನಲ್ಲಿ ಇರುವುದಕ್ಕೂ ವ್ಯತ್ಯಾಸ ಇದೆ. ನಮ್ಮ ರೇಸ್ ಏನಿದರೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರುವುದು. ಪಕ್ಷ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನಾವು ಟೈಮ್ ಸ್ಪೆಂಡ್ ಮಾಡಬೇಕು. ಬೇರೆ ವಿಚಾರಗಳ ಬಗ್ಗೆ ಮಾತಾಡ್ತಾ ಹೋದ್ರೆ ಟೈಮ್ ವೇಸ್ಟ್ ಆಗುತ್ತೆ. ನಾನೇನು ಅರ್ಜೆಂಟ್ ನಲ್ಲಿ ಇಲ್ಲ. ಪಕ್ಷ ಅಧಿಕಾರಕ್ಕೆ ತರುವುದಕ್ಕೆ ವಿಧಾನ ಸೌಧದ ಮೆಟ್ಟಲಿನ ಚಪ್ಪಡಿ ಕಲ್ಲಾಗಿ ನನ್ನ ಬಳಸಿಕೊಳ್ಳಿ ಎಂದಿದ್ದೇನೆ ಎಂದು ಹೇಳಿದರು.

  ಚುನಾವಣಾ ನೇತೃತ್ವ ಸಿದ್ದರಾಮಯ್ಯ ವಹಿಸಿಕೊಳ್ಳಬೇಕು ಎಂಬ ವಿಚಾರವಾಗಿ ಡಿಕೆಶಿ ಹೌದಾ ಎಂದು ವ್ಯಂಗ್ಯವಾಗಿ ಉತ್ತರ ನೀಡಿದರು. 2023ಕ್ಕೆ ಸಿದ್ದರಾಮಯ್ಯ ಸಿಎಂ ಆಗಬೇಕು. ಮುಂದೆ ಡಿಕೆಶಿ ಆಗ್ಲಿ ಎಂದು ರಾಮಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿ, ನನಗೆ ಅರ್ಜೆಂಟ್ ಇಲ್ಲ. ವಿಧಾನ ಸೌಧಕ್ಕೆ ನನ್ನ ಚಪ್ಪಡಿ ಕಲ್ಲು ಆಗಿ ಮಾಡಿಕೊಳ್ಳಿ ಎಂದು ಹೇಳಿದ್ದೆ. ಪಕ್ಷ ಅಧಿಕಾರ ತರುವುದು ನಮ್ಮ ಉದ್ದೇಶ. ಪಕ್ಷದ ಹೈಕಮಾಂಡ್ ಏನು ಹೇಳಬೇಕೋ ಅದನ್ನ ಹೇಳಿದೆ ಎಂದು ಹೇಳಿದರು.

  ಇದನ್ನು ಓದಿ: ಎಂಟಿಬಿಗೆ ಬೆಂಗಳೂರು ಗ್ರಾಮಾಂತರ ಉಸ್ತುವಾರಿ; ತನ್ನ ಅಭ್ಯಂತರವಿಲ್ಲ ಎಂದು ಸಿಎಂಗೆ ಪತ್ರ ಬರೆದ ಆರ್. ಅಶೋಕ್

   ಸಿದ್ದರಾಮಯ್ಯ ಬಣದ ಶಾಸಕರ ವಿರುದ್ಧ ಡಿ.ಕೆ. ಸುರೇಶ್ ಕೆಂಡಾಮಂಡಲ

  ಸಿದ್ದರಾಮಯ್ಯ ಮುಂದಿನ ಸಿಎಂ ವಿಚಾರವಾಗಿ ಡಿ.ಕೆ. ಸುರೇಶ್ ಮಾತನಾಡಿ, ಈ ಹೇಳಿಕೆ ನೀಡಿದ ಶಾಸಕರ  ವಿರುದ್ಧ ಕೆಂಡಾಮಂಡಲರಾದರು. ಈಗ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಮೊದಲು ಚುನಾವಣೆ ಎದುರಿಸಲಿ. ಮಾತನಾಡಿದ ಶಾಸಕರೆಲ್ಲ ಅಧಿಕಾರಕ್ಕಾಗಿ ಬಂದವರು. ಕಾಂಗ್ರೆಸ್ ಶಿಸ್ತು ಗೊತ್ತಿದ್ದವರು ಹೀಗೆ ಮಾತನಾಡಲ್ಲ. ಮಲಗಿದ್ದವರೆಲ್ಲ ಈಗ ಎದ್ದಿದ್ದಾರೆ. ಈಗಿರುವ ಶಾಸಕರೆಲ್ಲ ಮುಂದಿನ ಶಾಸಕಾಂಗ ಪಕ್ಷದ ಸದಸ್ಯರಲ್ಲ. ಚುನಾವಣೆ ಎದುರಿಸಿ ಇವರು ಶಾಸಕರಾಗಬೇಕು. ಡಿಕೆಶಿ ಕೆಪಿಸಿಸಿ ಅಧ್ಯಕ್ಷರು, ಪಕ್ಷದ ಕೆಲಸ ಮಾಡುತ್ತಿದ್ದಾರೆ. ಸಿಎಲ್‌ಪಿ ನಾಯಕರಾಗಿ ಸಿದ್ದರಾಮಯ್ಯ ಕೆಲಸ ಮಾಡುತ್ತಿದ್ದಾರೆ. ಇವರ ಮಧ್ಯೆ ಬೇರೆಯವರಿಗೆ ಏನು ಕೆಲಸ. ಜಿಲ್ಲೆಯಲ್ಲಿ ಕಾಂಗ್ರೆಸ್ ಕಟ್ಟುವ ಕೆಲಸ ಮಾಡಲಿ.  ಮುಂದಿನ ಚುನಾವಣೆ ಬಳಿಕ ಶಾಸಕಾಂಗ ಪಕ್ಷ ಸಭೆ ನಡೆಯಲಿ. ಈಗ ಮಾತನಾಡುವವರೆಲ್ಲ, ಆ ಸಭೆಗೆ ಬರಲಿ. ನಾವು ಅವರಿಗೆ ಸವಾಲು ಹಾಕುತ್ತೇವೆ. ಶಾಸಕರ ಹೇಳಿಕೆಯಿಂದ ಪಕ್ಷದಲ್ಲಿ ಗೊಂದಲ ಸೃಷ್ಟಿಯಾಗುತ್ತದೆ. ಒಳಗೊಳಗೆ ಇವರು ಉರಿದುಕೊಂಡರೆ ನಾವೇನು ಮಾಡಲು ಸಾಧ್ಯ ಎಂದರು.

  ಕಳೆದ ಹಲವು ದಿನಗಳಿಂದ ರಾಜ್ಯ ಕಾಂಗ್ರೆಸ್​ನಲ್ಲಿ ಮುಂದಿನ ಸಿಎಂ ವಿಚಾರದ ಚರ್ಚೆ ಭಾರೀ ಮುನ್ನೆಲೆಗೆ ಬಂದಿದೆ. ಒಂದು ಬಣದ ಶಾಸಕರು ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ ಎಂದು ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಈ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ತೆರಳಿ ಮೂರು ದಿನಗಳ ಕಾಲ ಕಾದು ರಾಹುಲ್ ಗಾಂಧಿ, ರಣದೀಪ್ ಸುರ್ಜೆವಾಲಾ ಸೇರಿ ಇತರೆ ನಾಯಕರನ್ನು ಭೇಟಿಯಾಗಿ ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ್ದಾರೆ ಎನ್ನಲಾಗಿದೆ. ಆದರೆ, ಈ ವಿಚಾರವಾಗಿ ಸಿದ್ದರಾಮಯ್ಯ ಅವರು ಎಲ್ಲಿಯೂ ಹೇಳಿಕೆಯನ್ನು ಇದುವರೆಗೂ ನೀಡಿಲ್ಲ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: