ವ್ಯಕ್ತಿ ಪೂಜೆಗಿಂತ ಪಕ್ಷ ಪೂಜೆಯಲ್ಲಿ ನಂಬಿಕೆಯಿಟ್ಟವನು ನಾನು; ಡಿಕೆ ಶಿವಕುಮಾರ್​

ಪಕ್ಷದಲ್ಲಿ ಏನು ಚರ್ಚೆಯಾಗುತ್ತಿದೆ ಎಂಬುದು ನನಗೆ ಗೊತ್ತಿಲ್ಲ. ಪಕ್ಷದಲ್ಲಿ ಬಣಗಳಿವೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ನನಗೆ ಗೊತ್ತಿರುವ ಒಂದೇ ಬಣ ಕಾಂಗ್ರೆಸ್​ ಬಣ. ನಾನು ವ್ಯಕ್ತಿ ಪೂಜೆಗಿಂತ. ಪಕ್ಷ ಪೂಜೆಯಲ್ಲಿ ನಂಬಿಕೆ ಇಟ್ಟವನು

news18-kannada
Updated:January 20, 2020, 12:42 PM IST
ವ್ಯಕ್ತಿ ಪೂಜೆಗಿಂತ ಪಕ್ಷ ಪೂಜೆಯಲ್ಲಿ ನಂಬಿಕೆಯಿಟ್ಟವನು ನಾನು; ಡಿಕೆ ಶಿವಕುಮಾರ್​
ಡಿ.ಕೆ. ಶಿವಕುಮಾರ್.
  • Share this:
ಬೆಂಗಳೂರು (ಜ.20): ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್​ ಆಯ್ಕೆ ಬಹುತೇಕ ಖಚಿತ ಎನ್ನುವ ಜೊತೆಗೆ ಈ ಸ್ಥಾನವನ್ನು ಅವರಿಗೆ ತಪ್ಪಿಸಲು ಕಾಂಗ್ರೆಸ್​ನ ಮತ್ತೊಂದು ಬಣ ಮುಂದಾಗಿದೆ.  ಇದೇ ಕಾರಣಕ್ಕೆ ಕಾಂಗ್ರೆಸ್​ ಅಧ್ಯಕ್ಷರ ಆಯ್ಕೆ ಕಗ್ಗಂಟಾಗಿದೆ ಎಂದು ಮೂಲಗಳು ತಿಳಿಸಿವೆ. 

ಪಕ್ಷದಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳು ಪಕ್ಷ ಒಡೆದ ಮನೆಯಾಗಿದೆ ಎಂಬುದನ್ನು ಸಾರಿ ಹೇಳುತ್ತಿದ್ದು, ಈ ಕುರಿತು ಖುದ್ದು ಡಿಕೆ ಶಿವಕುಮಾರ್​ ಪ್ರತಿಕ್ರಿಯಿಸಿದ್ದಾರೆ.

ಪಕ್ಷದಲ್ಲಿ  ಏನು ಚರ್ಚೆಯಾಗುತ್ತಿದೆ ಎಂಬುದು ನನಗೆ ಗೊತ್ತಿಲ್ಲ. ಪಕ್ಷದಲ್ಲಿ ಬಣಗಳಿವೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ನನಗೆ ಗೊತ್ತಿರುವ ಒಂದೇ ಬಣ ಕಾಂಗ್ರೆಸ್​ ಬಣ. ನಾನು ವ್ಯಕ್ತಿ ಪೂಜೆಗಿಂತ, ಪಕ್ಷ ಪೂಜೆಯಲ್ಲಿ ನಂಬಿಕೆ ಇಟ್ಟವನು ಎಂದಿದ್ದಾರೆ.

ಇನ್ನು ಕಾಂಗ್ರೆಸ್​ ಸ್ಥಾನಮಾನದ ಬಗ್ಗೆ ನನಗೆ ಏನು ಕೇಳಬೇಡಿ. ಈ ಕುರಿತು ಯಾರು ಯಾರೋ ಏನೇನೋ ಹೇಳಿಕೆ ನೀಡುತ್ತಿದ್ದಾರೆ. ಇದೆಲ್ಲವನ್ನು ನಾನು ಗಮನಿಸಿದ್ದೇನೆ. ನಾನು ಯಾವ ಗುಂಪಿಗೂ ಸೇರುವುದಿಲ್ಲ. ಯಾರು ಯಾವ ಬಣ ಮಾಡಿಕೊಂಡಿಕೊಂಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದರು.

ಇದನ್ನು ಓದಿ: ಸಾಮಾಜಿಕ ನ್ಯಾಯದ ಆಧಾರದ ಮೇಲೆ ಕೆಪಿಸಿಸಿ ಅಧ್ಯಕ್ಷರ ನೇಮಕ ಮಾಡಿ - ಸೋನಿಯಾಗೆ ಪತ್ರ ಬರೆದ ಪರಮೇಶ್ವರ್

 

ಇನ್ನು ಇದೇ ವೇಳೆ ರಾಜ್ಯಕ್ಕೆ ಬಂದ ಕೇಂದ್ರ ಗೃಹ ಸಚಿವ ಅಮಿತ್​ ಶಾ, ಮಹದಾಯಿ ವಿಚಾರ ಕುರಿತು ಪ್ರಸ್ತಾಪ ನಡೆಸದ ಬಗ್ಗೆ ಟೀಕಿಸಿದ ಅವರು, ಬಿಜೆಪಿಯವರಿಗೆ ಮಹದಾಯಿ, ಕಾವೇರಿ, ಕೃಷ್ಣ ನದಿ ವಿಚಾರಗಳು ಬೇಕಾಗಿಲ್ಲ. ಅವರಿಗೆ ಅವರ ಅಭಿವೃದ್ಧಿ, ಅವರ ಶಾಸಕರ ಕ್ಷೇತ್ರದ ಅಭಿವೃದ್ಧಿ ಮಾತ್ರ ಬೇಕು. ನಮ್ಮ ಶಾಸಕರ ಕ್ಷೇತ್ರದ ಅಭಿವೃದ್ಧಿಯನ್ನು ಅವರು ನಿಲ್ಲಿಸಿದ್ದಾರೆ. ಇದರ ಬಗ್ಗೆ ನಮ್ಮ ನಾಯಕರೆಲ್ಲಾ ಎಲ್ಲರೂ ಒಟ್ಟಾಗಿ ಕೂತು ಚರ್ಚಿಸಿ ಮುಂದಿನ ರೂಪುರೇಷೆ ರೂಪಿಸುತ್ತೇವೆ ಎಂದರು.
First published:January 20, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ