ನನಗೂ ಇದಕ್ಕೂ ಯಾವ ಸಂಬಂಧ ಇಲ್ಲ; ಸಂತ್ರಸ್ತೆ ಪೋಷಕರ ಆರೋಪದ ಬಳಿಕ ಡಿಕೆ ಶಿವಕುಮಾರ್​​ ಪ್ರತಿಕ್ರಿಯೆ

ನನಗೂ ಇದಕ್ಕೂ ಯಾವ ಸಂಬಂಧವೂ ಇಲ್ಲ. ಇದು ಅವರ ವೈಯಕ್ತಿಯ ವಿಷಯ ಅವರೇ ಸರಿಪಡಿಸಿಕೊಳ್ಳಬೇಕು

ಡಿ.ಕೆ. ಶಿವಕುಮಾರ್​.

ಡಿ.ಕೆ. ಶಿವಕುಮಾರ್​.

 • Share this:
  ಬೆಂಗಳೂರು (ಮಾ. 27): ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಡಿಕೆ ಶಿವಕುಮಾರ್​ ವಿರುದ್ಧ ಸಂತ್ರಸ್ತ ಯುವತಿಯ ಪೋಷಕರು ನೇರ ಆರೋಪ ಮಾಡಿದ್ದಾರೆ. ತಮ್ಮ ಹೊಲಸು ರಾಜಕಾರಣಕ್ಕೆ ಮಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು  ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ರಮೇಶ್​ ಜಾರಕಿಹೊಳಿ, ಮಹಾನ್​ ನಾಯಕ ರಾಜಕಾರಣಕ್ಕೆ ನಾಲಾಯಕ್​. ಆತನನ್ನು ಪೊಲೀಸರು ಒದ್ದು ಒಳಗೆ ಹಾಕಿಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಮುಂದಿನ ಚುನಾವಣೆಯಲ್ಲಿ ಕನಕಪುರದಲ್ಲಿ ಆತನನ್ನು ಸೋಲಿಸುವುದೇ ನನ್ನ ಗುರಿ ಎಂದು ಶಪಥ ಮಾಡಿದ್ದಾರೆ. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಮೊದಲ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​, ನನಗೂ ಇದಕ್ಕೂ ಯಾವ ಸಂಬಂಧವೂ ಇಲ್ಲ. ಇದು ಅವರ ವೈಯಕ್ತಿಯ ವಿಷಯ ಅವರೇ ಸರಿಪಡಿಸಿಕೊಳ್ಳಬೇಕು ಎಂದು ತಿರುಗೇಟು ನೀಡಿದ್ದಾರೆ.

  ಅಧಿಕಾರಿಗಳು ಈ ಕುರಿತು ತನಿಖೆ ಮಾಡಬೇಕು. ಇದಕ್ಕೆ ನನಗೂ ಯಾವುದೇ ಸಂಬಂಧವಿಲ್ಲ. ಅವರು ದಿನಕ್ಕೊಂದು ಹೇಳಿಕೆ ನೀಡುತ್ತಾರೆ. ಅದಕ್ಕೆಲ್ಲಾ ನಾನು ಉತ್ತರಿಸುತ್ತಾ ಕೂರಲು ಸಾಧ್ಯವಿಲ್ಲ. ಅದರ ಅವಶ್ಯಕತೆಯೂ ನನಗೆ ಇಲ್ಲ. ನಾನು ನನ್ನ ಡ್ಯೂಟಿ ಮಾಡುತಿದ್ದೇನೆ. ನನಗೆ ಅದರ ಅವಶ್ಯಕತೆ ಇಲ್ಲ. ಅವರು ಏನು ಬೇಕಾದರೂ ಹೇಳಲಿ. ಸರ್ಕಾರ ಇದೆ. ಒಳ್ಳೆ ಅಧಿಕಾರಿಗಳು ಇದ್ದಾರೆ, ಅವರೇ ತನಿಖೆ ಮಾಡುತ್ತಾರೆ. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆಯಾಗಲಿ ಎಂದರು.

  ಯುವತಿ ಪೋಷಕರ ಆರೋಪ ಕುರಿತು ಪ್ರತಿಕ್ರಿಯಿಸಿ, ಈ ಕುರಿತು ನಾನು ಈಗಾಗಲೇ ಹೇಳಿದ್ದೇನೆ. ಯಾರನ್ನು ನಾನು ಭೇಟಿಯಾಗಿಲ್ಲ. ನನ್ನ ಬಳಿ ಕೂಡ ಯಾರು ಬರಲಿಲ್ಲ ಎಂದು ಸ್ಪಷ್ಟಪಡಿಸಿದರು.

  ಇದಕ್ಕೂ ಮೊದಲು ಮಾತನಾಡಿದ ರಮೇಶ್​ ಜಾರಕಿಹೊಳಿ, ಡಿಕೆ ಶಿವಕುಮಾರ್​ ವಿರುದ್ಧ ಅಟ್ರಾಸಿಟಿ ದೂರು ಕೊಡುತ್ತೇನೆ. ನನ್ನ ಬಳಿ 11 ದಾಖಲೆ ಇದೆ. ಅದನ್ನು ಎಸ್​ಐಟಿಗೆ ನೀಡುತ್ತೇನೆ. ನರೇಶ್ ಗೌಡನ ಜೊತೆ ಸಂಬಂಧ ಇದೆ ಎಂದು ಆತ ಒಪ್ಪಿಕೊಂಡಿದ್ದಾನೆ‌. ಆತ ಕ್ರಿಮಿನಲ್​ ಮೈಂಡೆಡ್​. ನಿನ್ನೆ ಆಡಿಯೋ ಬಿಡುಗಡೆಯಾಗುತ್ತಿದ್ದಂತೆ ಇಂದು ಆತ ಹೇಳಿಕೆಯನ್ನೇ ತಿರುಚಿದ್ದಾನೆ. ಹಾಗಾಗಿ ನಾನು ಈಗ ಯಾವುದೇ ಸಾಕ್ಷ್ಯವನ್ನು ಬಿಡುಗಡೆ ಮಾಡುವುದಿಲ್ಲ. ಎಲ್ಲವನ್ನು ಎಸ್​ಐಟಿಗೆ ನೀಡುತ್ತೇನೆ. ಕಾನೂನಿನ ಮೇಲೆ ನಂಬಿಕೆ ಇದೆ. ಇದರಲ್ಲಿ ಯಾರೆಲ್ಲಾ ಇದ್ದರೆ ಎಂಬುದು ಹೊರ ಬರಲಿದೆ
  Published by:Seema R
  First published: