ರಾಮನಗರ: ಚನ್ನಪಟ್ಟಣದ (Channapatna) ಕಾಂಗ್ರೆಸ್ (Congress) ಸಂಭಾವ್ಯ ಅಭ್ಯರ್ಥಿ ಪ್ರಸನ್ನ ಜೆಡಿಎಸ್ (JDS) ಪಕ್ಷದತ್ತ ಮುಖ ಮಾಡಿದ್ದಾರೆ. ಇಂದು ಮೈಸೂರಿನಲ್ಲಿ (Mysuru) ನಡೆಯುತ್ತಿರುವ ಪಂಚರತ್ನ ರಥಯಾತ್ರೆ (Pancharatna Yatre) ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿರುತ್ತಿರುವುದಾಗಿ ಕಾಂಗ್ರೆಸ್ (Congress) ಟಿಕೆಟ್ ಆಕಾಂಕ್ಷಿಯಾಗಿದ್ದ ಪ್ರಸನ್ನ ಪಿ ಗೌಡ ಹೇಳಿದ್ದು, ಇದೇ ವೇಳೆ ತಾವು ಜೆಡಿಎಸ್ ಸೇರ್ಪಡೆಯಾಗುವುದಾಗಿಯೂ ಹೇಳಿದ್ದಾರೆ. ಇದಕ್ಕೆ ರಾಮನಗರದಲ್ಲಿ ತಿರುಗೇಟು ನೀಡಿರುವ ಸಂಸದ ಡಿ.ಕೆ ಸುರೇಶ್ (DK Suresh), ಯಾರು ಕೆಲಸ ಮಾಡುತ್ತಾರೋ ಅಂತವರಿಗೆ ಮೊದಲ ಹಂತದಲ್ಲಿ ಟಿಕೆಟ್ ಘೋಷಣೆ ಆಗಿದೆ. ಕೆಲವರಿಗೆ ಆತುರ ಇರುತ್ತದೆ ಅಂತಹವರಿಗೆ ಏನು ಮಾಡಲು ಆಗಲ್ಲ. ಇದು ನಿರೀಕ್ಷಿತ ಬೆಳವಣಿಗೆ ಎಂದಿದ್ದಾರೆ.
ಪಂಚರತ್ನ ಯಾತ್ರೆಯ ಸಮಾರೋಪ ಯಾತ್ರೆಯಲ್ಲಿ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ
ಜೆಡಿಎಸ್ ಸೇರ್ಪಡೆ ಕುರಿತಂತೆ ಮಾತನಾಡಿರುವ ಪ್ರಸನ್ನ, ನಾನು ಕಾಂಗ್ರೆಸ್ ಪಕ್ಷ ಬಿಟ್ಟು ಜೆಡಿಎಸ್ ಸೇರುತ್ತಿದ್ದೇನೆ. ಚನ್ನಪಟ್ಟಣದಲ್ಲೇ ಸುದ್ದಿಗೋಷ್ಠಿ ಮಾಡಿ ಈ ಬಗ್ಗೆ ತಿಳಿಸುತ್ತೇನೆ. ಇಂದು ಜೆಡಿಎಸ್ ಸಮಾವೇಶದಲ್ಲಿ ಭಾಗಿಯಾಗುತ್ತಿದ್ದೇನೆ. ಕಾಂಗ್ರೆಸ್ ತೊರೆದು ಜೆಡಿಎಸ್ ಸೇರುತ್ತಿರುವುದಾಗಿ ತಿಳಿಸಿದ್ದಾರೆ. ನಿನ್ನೆಯಷ್ಟೇ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿತ್ತು. ಚನ್ನಪಟ್ಟಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿರಲಿಲ್ಲ.
ಇದನ್ನೂ ಓದಿ: Crime News: ದಾರಿಯಲ್ಲಿ ಹಿಂಬಾಲಿಸಿ ಬಂದ ಸರಗಳ್ಳರು, ಪ್ರತಿರೋಧ ತೋರಿದ್ದಕ್ಕೆ ಮಹಿಳೆಯ ಕೈ ಕಟ್!
ಇನ್ನು, ಕಳೆದ ವಾರವಷ್ಟೇ ಚನ್ನಪಟ್ಟಣದಲ್ಲಿ ನೂತನ ಕಾಂಗ್ರೆಸ್ ಕಚೇರಿ ತೆರೆಯಲು ಸಿದ್ಧತೆ ನಡೆಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ಗೆ ಸ್ವಂತ ಜಿಲ್ಲೆಯಲ್ಲಿಯೇ ಮುಖಭಂಗವಾಗಿದೆ ಎಂಬ ಮಾತು ಕ್ಷೇತ್ರದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಚನ್ನಪಟ್ಟಣ್ಣ ನೂತನ ಕಾಂಗ್ರೆಸ್ ಕಚೇರಿ ತೆರೆಯುವ ಬಗ್ಗೆ ಅಳವಡಿಸಿದ್ದ ಫ್ಲೆಕ್ಸ್ನಲ್ಲೂ ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಫೋಟೋದೊಂದಿಗೆ ಪ್ರಸನ್ನ ಪಿ ಗೌಡ ತಮ್ಮ ಫೋಟೋ ಹಾಕಿಕೊಂಡು ಮಿಂಚಿದ್ದರು. ಆದರೆ ಈಗ ಯಾವುದೇ ಸುಳಿವು ನೀಡದೆ ಡಿ.ಕೆ ಬ್ರದರ್ಸ್ಗೆ ಶಾಕ್ ಕೊಟ್ಟಿದ್ದಾರೆ ಎನ್ನಲಾಗಿದೆ.
ಪ್ರಸನ್ನ ಜೆಡಿಎಸ್ ಸೇರ್ಪಡೆ ನಿರೀಕ್ಷಿತ ಬೆಳಕಿಗೆ ಎಂದ ಡಿ.ಕೆ ಸುರೇಶ್
ರಾಮನಗರದಲ್ಲಿ ಚನ್ನಪಟ್ಟಣ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ ಪ್ರಸನ್ನ ಜೆಡಿಎಸ್ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ ಸುರೇಶ್ ಅವರು, ಇದು ಕಾಂಗ್ರೆಸ್ ಪಕ್ಷ ಪ್ರಾಮಾಣಿಕರಿಗೆ ಅವಕಾಶ ಇದೆ. ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡುವವರನ್ನು ಗಮನದಲ್ಲಿ ಇಟ್ಟುಕೊಂಡು ಮೊದಲ ಹಂತದಲ್ಲಿ ಟಿಕೆಟ್ ಘೋಷಣೆ ಆಗಿದೆ. ಕೆಲವರಿಗೆ ಆತುರ ಇರುತ್ತದೆ, ಅಂತಹವರಿಗೆ ಏನು ಮಾಡಲು ಆಗಲ್ಲ. ಇದು ನಿರೀಕ್ಷಿತ ಬೆಳವಣಿಗೆ ಎಂದಿದ್ದಾರೆ.
ಇದೇ ವೇಳೆ ನಾಳೆ ನಡೆಯಲಿರುವ ಸಿಎಂ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಂಸದರು, ಬೆಳಗ್ಗೆ ಯಾರೋ ಬಂದು ಆಹ್ವಾನ ಪತ್ರ ನೀಡಿದ್ದಾರೆ. ರಾಜೀವ್ ಗಾಂಧಿ ವಿಶ್ವವಿದ್ಯಾಲಯಕ್ಕೆ ಹಲವು ಬಾರಿ ಶಂಕುಸ್ಥಾಪನೆ ಮಾಡಿದ್ದಾರೆ. ಈಗಲು ಮಾಡುತ್ತಿದ್ದಾರೆ. ಮುಂದೆ ಹೊಸ ಸರ್ಕಾರ ಬರುತ್ತದೆ, ಆಗ ಏನಾಗುತ್ತದೆ ನೋಡೋಣಾ ಎಂದರು.
ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಗುಮಾನಿ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಇದರ ಬಗ್ಗೆ ನನಗೆ ಗೊತ್ತಿಲ್ಲ. ಇದನ್ನು ನಮ್ಮ ವರಿಷ್ಠರನ್ನು ಕೇಳಬೇಕು ಇಲ್ಲ, ಯೋಗೇಶ್ವರ್ ಅವರನ್ನು ಕೇಳಬೇಕು. ನಾವು ಎಲ್ಲರನ್ನು ಮುಕ್ತವಾಗಿ ಆಹ್ವಾನ ಮಾಡಿದ್ದೇವೆ. ಇಡೀ ರಾಜ್ಯದ ನಾಯಕರು ಆಹ್ವಾನ ಮಾಡಿದ್ದಾರೆ. ನಮ್ಮ ಪಕ್ಷ ತತ್ವ ಸಿದ್ಧಾಂತ ಮೆಚ್ಚಿ ಯಾರು ಬೇಕಿದ್ದರೂ ಬರಬಹುದು. ಆದರೆ ಚನ್ನಪಟ್ಟಣ ಅಭ್ಯರ್ಥಿಗಳಿಗೆ ಕೊರತೆ ಇಲ್ಲ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ