LIVE NOW

(Live)ಒತ್ತಡದ ರಾಜನೀತಿ; ದೆಹಲಿಗೆ ಹೊರಟ ಡಿಕೆ ಶಿವಕುಮಾರ್​; ಪ್ರಧಾನಿ ಮೋದಿ ಭೇಟಿ ಸಾಧ್ಯತೆ

Kannada.news18.com | September 8, 2018, 9:24 PM IST
facebook Twitter google Linkedin
Last Updated September 8, 2018
auto-refresh

Highlights

ಬೆಂಗಳೂರು (ಸೆ.8): ದೆಹಲಿ ಡಿಕೆ ಶಿವಕುಮಾರ್​ ಫ್ಲ್ಯಾಟ್​ನಲ್ಲಿ 4 ಕೋಟಿ ರೂ. ಪತ್ತೆ ಪ್ರಕರಣದಲ್ಲಿ ದೆಹಲಿ ಇಡಿ ಕಚೇರಿಯಲ್ಲಿ ಎಫ್​ಐಆರ್​ ದಾಖಲಿಸಲು ಸಿದ್ಧತೆಗಳು ನಡೆಸುತ್ತಿದೆ.  ಈ ಸಂಬಂಧ ಈಗಾಗಲೇ ಜಾರಿ ನಿರ್ದೇಶನಾಲಯ ಡಿ.ಕೆ. ಶಿವಕುಮಾರ್​ ಅವರಿಗೆ ನೋಟಿಸ್​ ನೀಡಿ ವಿವರಣೆ ಪಡೆದಿದೆ.

ಒಂದುವೇಳೆ, ಸಚಿವ ಡಿಕೆಶಿ ವಿರುದ್ಧದ ಆರೋಪ ಸಾಬೀತಾದರೆ 3ರಿಂದ 7 ವರ್ಷ ಜೈಲು ಶಿಕ್ಷೆ ಖಚಿತ. ಡಿಕೆಶಿ ವಿರುದ್ಧ ಎಫ್​ಐಆರ್​ ದಾಖಲಾದರೆ ಡಿಕೆಶಿ ಹೆಸರಿನಲ್ಲಿ ಇರುವ ಆಸ್ತಿಪಾಸ್ತಿ ಜಪ್ತಿ ಮಾಡಬಹುದು, ಅವರ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಬೇಕಾಗಬಹುದು.

ಡಿಕೆಶಿ ಮೇಲೆ ಜಾರಿ ನಿರ್ದೇಶನಾಲಯದಲ್ಲಿ ಎಫ್​ಐಆರ್​ ದಾಖಲು ಮಾಡುವಂತೆ ಕುಮ್ಮಕ್ಕು ನೀಡುತ್ತಿರುವುದು.  ವಿಧಾನಸಭಾ ಚುನಾವಣೆಗೂ ಮುನ್ನ ಕೂಡ ಐಟಿ ದಾಳಿ ಮೂಲಕ ಡಿಕೆಶಿ ಮಣಿಸಲು ಬಿಜೆಪಿ ತಂತ್ರ ರೂಪಿಸಿತ್ತು ಎಂಬ ಆರೋಪವಿತ್ತು. ಆದರೆ ಇದು ಫಲಿಸಲಿಲ್ಲ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಡಿಕೆಶಿವಕುಮಾರ್​ ಪ್ರಬಲರಾಗಿದ್ದು ಅವರನ್ನ ಮೆತ್ತಗಾಗಿಸಬೇಕಾದರೆ ಅದು  ಜಾರಿ ನಿರ್ದೇಶನಾಲಯದ ಮೊರೆ ಹೋಗಿದೆ ಎಂದು ಕಾಂಗ್ರೆಸ್​, ಜೆಡಿಎಸ್​ ನಾಯಕರು ಆರೋಪಿಸಿದ್ದಾರೆ.

ಈ ಮೂಲಕ ಕರ್ನಾಟಕದಲ್ಲಿ ಮತ್ತೊಮ್ಮೆ ಸರ್ಕಾರವನ್ನು ಅಸ್ಥಿರಗೊಳಿಸಿ ಲೋಕಸಭೆಗೂ ಮುನ್ನ ಬಿಜೆಪಿ ಸರ್ಕಾರ ರಚಿಸುವ ಯತ್ನಕ್ಕೆ ಕೈ ಹಾಕಿದೆಯೇ ಎಂಬ ಪ್ರಶ್ನೆ ಮೇಲೆದ್ದಿದೆ. ಡಿಕೆ ಶಿವಕುಮಾರ್ ಸುತ್ತ ನಡೆಯುತ್ತಿರುವ ರಾಜಕೀಯ ಲೆಕ್ಕಾಚಾರಗಳು, ಸಮ್ಮಿಶ್ರ ಸರ್ಕಾರದ ಅಳಿವು-ಉಳಿವು ಇವುಗಳ ಕ್ಷಣ ಕ್ಷಣದ ಮಾಹಿತಿ ನ್ಯೂಸ್​ 18 ನೀಡಲಿದೆ
7:02 pm (IST)

ಡಿಕೆ ಶಿವಕುಮಾರ್ ಮೇಲೆ ಐಟಿ ದಾಳಿ ಹಿನ್ನಲೆ

ಸಚಿವ ಡಿ.ಕೆ.ಶಿವಕುಮಾರ್​ಗೆ ಇ.ಡಿ ಸಂಕಷ್ಟದ ಆತಂಕ

ಅಕ್ರಮ ಸಂಪತ್ತು ಹೊಂದಿರುವ ಹಿನ್ನಲೆ ಕಾನೂನು ಕ್ರಮ

ಇಷ್ಟೆಲ್ಲ ತಪ್ಪು ಮಾಡಿದರು ಕೂಡ ಡಿಕೆಶಿ ಹಾಗೂ ಡಿಕೆ ಸುರೇಶ್

ಅಧಿಕಾರ ನಡೆಸುವ ಭ್ರಮೆಯಲ್ಲಿದ್ದಾರೆ - ಕೋಟ ಶ್ರೀನಿವಾಸ್

ಉಡುಪಿಯಲ್ಲಿ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿಹೇಳಿಕೆ

ಯಾವುದೇ ಅಕ್ರಮ ಸಂಪತ್ತಿಲ್ಲ ನಾವು ಅಧಿಕಾರಲ್ಲಿ ಇರುತ್ತೇವೆ

ಹಣ ಬಲದಿಂದಲೇ ಅಧಿಕಾರ ನಡೆಸುತ್ತೆವೆ ಎನ್ನುವ ಭ್ರಮೆಯಲ್ಲಿದ್ದಾರೆ

ಸಿಎಂ ಕುಮಾರಸ್ವಾಮಿ ಸರ್ಕಾರ ಪಾರದರ್ಶಕವಾಗಿರಬೇಕಾದರೆ

ಡಿ.ಕೆ ಶಿವಕುಮಾರ್​ರನ್ನ ಸಂಪುಟದಿಂದ ಕೈಬಿಡಬೇಕು

ಡಿ.ಕೆ ಬ್ರದರ್ಸ್ ಆಟ ಜಾಸ್ತಿ ದಿನ ನಡೆಯಲ್ಲ - ಕೋಟ ಶ್ರೀನಿವಾಸ್​

ವಿ. ಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ಉಡುಪಿಯಲ್ಲಿ ಹೇಳಿಕೆ

7:01 pm (IST)

ರಾಜ್ಯ ರಾಜಕೀಯದಲ್ಲಿ ಸಂಚಲನ

ಸರ್ಕಾರ ಉರುಳಿಸಲು ಬಿಜೆಪಿಯಿಂದ ತೆರೆಮರೆ ಕಸರತ್ತು ?

ಬಿಜೆಪಿ ತಿರುಗೇಟು ನೀಡಲು ಕಾಂಗ್ರೆಸ್ ತಂತ್ರ

ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್,

ಪೂರ್ಣಿಮಾ ಶ್ರೀನಿವಾಸ್ ಜೊತೆ ಡಿಕೆಶಿ ಸಂಪರ್ಕ?

ನಿನ್ನೆ ರಾತ್ರಿಯೇ ಪೂರ್ಣಿಮಾ ಶ್ರೀನಿವಾಸ್,

ಗೂಳಿಹಟ್ಟಿ ಶೇಖರ್ ಡಿಕೆಶಿ ಜೊತೆ ಮಾತುಕತೆ

ಖಾಸಗಿ ಹೊಟೇಲವೊಂದರಲ್ಲಿ ಸುದೀರ್ಘ ಮಾತುಕತೆ

ಕಾಂಗ್ರೆಸ್​ಗೆ ಬಂದ್ರೆ ಮಂತ್ರಿಸ್ಥಾನ, ಕೋಟಿ ಹಣದ ಆಮಿಷ

ಭೇಟಿ ಮಾಹಿತಿಯನ್ನು ಖಚಿತ ಪಡಿಸಿದ ಡಿಕೆಶಿ ಆಪ್ತರು

ಬಿಎಸ್​ವೈದೆಹಲಿಯಿಂದ ದಿಢೀರನೇ ಬೆಂಗಳೂರಿಗೆ ವಾಪಸ್

ಈ ಹಿನ್ನೆಲೆ ಮೈತ್ರಿ ಸರ್ಕಾರದಲ್ಲಿ ಮೂಡಿಸಿದೆ ಸಂಚಲನ

ಬಿಜೆಪಿ ನಡೆಗೆ ಕಾಂಗ್ರೆಸ್​ ಪಕ್ಷದಿಂದ ಪ್ರತಿತಂತ್ರ

ಸರ್ಕಾರ ರಚನೆಗೆ ಡಿಕೆಶಿ ಅಡ್ಡಿಯಾಗಬಾರದೆಂಬ ಹಿನ್ನೆಲೆ

ಇ.ಡಿ ದಾಳ ಛೂ ಡಿಕೆಶಿ ಬೆಂಬಲಿಗರ ಆರೋಪ

ಬಿಜೆಪಿ ಏಟಿಗೆ ಎದುರೇಟು ನೀಡಲು ಕಾಂಗ್ರೆಸ್ ಸಜ್ಜು

Load More