ವಿದ್ಯಾರ್ಥಿಗಳಿಗೆ ಕೊಟ್ಟ ವಾಚ್​ಗಳಲ್ಲಿ ಡಿಕೆಶಿ ಫೋಟೋ; ಸರ್ಕಾರಿ ಕಾರ್ಯಕ್ರಮ ದುರುಪಯೋಗಿಸಿದ ಆರೋಪ

ಶೈಕ್ಷಣಿಕ ಸಾಧನ ಪ್ರಶಸ್ತಿ - 2019 ಹೆಸರನಲ್ಲಿ ವಿದ್ಯಾರ್ಥಿಗಳಿಗೆಲ್ಲಾ ವಾಚ್​ ಅನ್ನು ಉಡುಗೊರೆಯಾಗಿ ​ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ನೀಡಲಾದ  ಪ್ರತಿಯೊಂದು ವಾಚ್​ನಲ್ಲಿಯೂ ಡಿಕೆ ಶಿವಕುಮಾರ್​ ಫೋಟೋ ಹಾಕಲಾಗಿದೆ.

Seema.R | news18-kannada
Updated:December 28, 2019, 5:34 PM IST
ವಿದ್ಯಾರ್ಥಿಗಳಿಗೆ ಕೊಟ್ಟ ವಾಚ್​ಗಳಲ್ಲಿ ಡಿಕೆಶಿ ಫೋಟೋ; ಸರ್ಕಾರಿ ಕಾರ್ಯಕ್ರಮ ದುರುಪಯೋಗಿಸಿದ ಆರೋಪ
ವಾಚ್​ನಲ್ಲಿ ಕಂಡು ಬಂದ ಡಿಕೆ ಶಿವಕುಮಾರ್​ ಫೋಟೋ
  • Share this:
ರಾಮನಗರ(ಡಿ. 28): ಕಾಂಗ್ರೆಸ್​ ನಾಯಕ ಡಿಕೆ ಶಿವಕುಮಾರ್​ ಮೇಲಿಂದ ಮೇಲೆ ವಿವಾದಕ್ಕೆ ಗುರಿಯಾಗುತ್ತಲೇ ಇದ್ದಾರೆ. ಇತ್ತೀಚೆಗಷ್ಟೇ ಏಸು ಪ್ರತಿಮೆ ವಿಚಾರದಲ್ಲಿ ಬಿಜೆಪಿ ನಾಯಕರ ಟೀಕೆಗೆ ಗುರಿಯಾಗಿರುವ ಅವರು, ಈಗ ಸರ್ಕಾರಿ ಕಾರ್ಯಕ್ರಮವನ್ನು ತಮ್ಮ ಪ್ರಚಾರಕ್ಕೆ ದುರುಪಯೋಗ ಮಾಡಿಕೊಂಡಿರುವ ಆರೋಪ ಎದುರಿಸುತ್ತಿದ್ದಾರೆ.

ಜಿಲ್ಲೆಯ ಕನಕಪುರ ತಾಲೂಕಿನ ಹಾರೋಹಳ್ಳಿಯ ಜೈನ್ ಕಾಲೇಜಿನಲ್ಲಿ ಉತ್ತಮ ಅಂಕ ಪಡೆದ ಎಸ್​ಎಸ್​ಎಲ್​ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ನಡೆಯುತ್ತಿದ್ದ ಸಮಾರಂಭದಲ್ಲಿ ಉತ್ತಮ ಅಂಕ ಪಡೆದ ಸುಮಾರು 3 ಸಾವಿರ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಉಡುಗೊರೆ ಕೊಟ್ಟು ಸನ್ಮಾನ ಮಾಡಲಾಯಿತು. ವಿದ್ಯಾರ್ಥಿಗಳಿಗೆ ನೀಡಿದ ಉಡುಗೊರೆಗಳಲ್ಲಿ ಡಿಕೆ ಶಿವಕುಮಾರ್​ ಫೋಟೋ ಕಂಡು ಬಂದಿದ್ದು, ಸರ್ಕಾರಿ ಕಾರ್ಯಕ್ರಮವನ್ನು ತಮ್ಮ ಲಾಭಕ್ಕೆ ಬಳಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇದನ್ನು ಓದಿ: ಕಪಾಲ ಬೆಟ್ಟದಲ್ಲಿ ಯೇಸು ಪ್ರತಿಮೆಗೆ ಮಂಜೂರಾದ ಜಮೀನಿನ ಸುತ್ತ ವಿವಾದ; ತನಿಖೆಗೆ ಸರ್ಕಾರ ಚಿಂತನೆ

ಶೈಕ್ಷಣಿಕ ಸಾಧನ ಪ್ರಶಸ್ತಿ - 2019 ಹೆಸರನಲ್ಲಿ ವಿದ್ಯಾರ್ಥಿಗಳಿಗೆಲ್ಲಾ ವಾಚ್​ ಅನ್ನು ಉಡುಗೊರೆಯಾಗಿ ​ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ನೀಡಲಾದ  ಪ್ರತಿಯೊಂದು ವಾಚ್​ನಲ್ಲಿಯೂ ಡಿಕೆ ಶಿವಕುಮಾರ್​ ಫೋಟೋ ಹಾಕಲಾಗಿದೆ.

(ವರದಿ: ಎ.ಟಿ. ವೆಂಕಟೇಶ್​)
Published by: Seema R
First published: December 28, 2019, 5:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading