ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar, KPCC President) ಸಲ್ಲಿಸಿದ್ದ ನಾಲ್ಕು ನಾಮಪತ್ರಗಳು ಸ್ವೀಕೃತವಾಗಿವೆ. ಚುನಾವಣಾ ಆಯೋಗ (Election Commission) ನಾಮಪತ್ರ ಅಂಗೀಕರಿಸಿದ್ದು, ಡಿಕೆ ಶಿವಕುಮಾರ್ ಸ್ಪರ್ಧೆಗೆ ಯಾವುದೇ ಅಡ್ಡಿ ಇಲ್ಲ. ನಾಮಪತ್ರ ತಿರಸ್ಕೃತ ಆತಂಕದ ಹಿನ್ನೆಲೆ ಸೋದರ, ಸಂಸದ ಡಿಕೆ ಸುರೇಶ್ (MP DK Suresh) ಗುರುವಾರ ನಾಮಪತ್ರ ಸಲ್ಲಿಕೆ ಮಾಡಿದ್ದರು. ಇದೀಗ ಡಿಕೆ ಶಿವಕುಮಾರ್ ನಾಮಪತ್ರ ಅಂಗೀಕಾರವಾಗಿದ್ದು, ಸೋಮವಾರ ಡಿಕೆ ಸುರೇಶ್ ನಾಮಪತ್ರ ಹಿಂಪಡೆಯಲಿದ್ದಾರೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ನಿನ್ನೆ ಕೊನೆ ಗಳಿಗೆಯಲ್ಲಿ ಆಪ್ತರೊಂದಿಗೆ ತೆರಳಿದ್ದ ಡಿಕೆ ಸುರೇಶ್ ಕನಕಪುರ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದರು.
ಬುಧವಾರವೇ ಡಿಕೆ ಸುರೇಶ್ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಯಾವ ಕ್ಷೇತ್ರ ಅನ್ನೋ ಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲ. ಆರ್ ಅಶೋಕ್ ತವರು ಕ್ಷೇತ್ರ ಪದ್ಮನಾಭನಗರದಿಂದ ಡಿಕೆ ಸುರೇಶ್ ಸ್ಪರ್ಧೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಅಂತಿಮವಾಗಿ ಕನಕಪುರ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಕೆ ಮಾಡಿದ್ರು.
ಡಿಕೆ ಶಿವಕುಮಾರ್ ಹೇಳಿದ್ದೇನು?
ಇಂದು ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿದ್ದ ಡಿಕೆ ಶಿವಕುಮಾರ್, ಬಿಜೆಪಿ ಅಧಿಕಾರ ದುರಪಯೋಗ ಮಾಡಿಕೊಂಡು ನಾಮಪತ್ರ ಅರ್ಜಿ ತಿರಸ್ಕೃತ ಮಾಡಿದ್ರೆ ಹೇಗೆ? ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಡಿಕೆ ಸುರೇಶ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ ಎಂದು ಹೇಳಿದರು.
ಯಾಕೆ ಡಿಕೆ ಶಿವಕುಮಾರ್ ಭಯ ಪಡ್ತಾರೆ
ತಪ್ಪಿದ್ದರೆ ನಾಮಪತ್ರ ತಿರಸ್ಕೃತ ಆಗುತ್ತೆ. ಅದಕ್ಕೆ ಯಾಕೆ ಡಿಕೆ ಶಿವಕುಮಾರ್ ಭಯ ಪಡ್ತಾರೆ. ನಮ್ಮ ಪಕ್ಷದ ಲೀಗಲ್ ಸೆಲ್ ಅವರು ಕನಕಪುರಕ್ಕೆ ಬಂದಿದ್ದಾರೆ. ವ್ಯತ್ಯಾಸ ಇದ್ದರೆ ಅಲ್ಲೇ ಅಬ್ಜೆಕ್ಷನ್ ಮಾಡ್ತಾರೆ.
ಇದನ್ನೂ ಓದಿ: Pratap Simha: ಸೋಮಣ್ಣ ಪರ ಪ್ರಚಾರಕ್ಕೆ ತೆರಳಿದ್ದ ಸಂಸದ ಪ್ರತಾಪ್ ಸಿಂಹಗೆ ವರುಣಾ ಕ್ಷೇತ್ರದ ಮತದಾರರಿಂದ ಕ್ಲಾಸ್!
ಕನಕಪುರ ಕ್ಷೇತ್ರದ ಚುನಾವಣೆಯನ್ನು ಹೈಕಮಾಂಡ್ ನೋಡಕೊಳ್ಳುತ್ತಿದೆ. ಇಲ್ಲಿ ಯಾವ ರೀತಿ ಪ್ರಚಾರ ಮಾಡಬೇಕು ಅನ್ನೋದನ್ನು ಕೂಡ ಹೈಕಮಾಂಡ್ ನಿರ್ಧಾರ ಮಾಡುತ್ತದೆಕನಕಪುರದಲ್ಲಿ ಯಾರೇ ಅಭ್ಯರ್ಥಿ ಆದರೂ ಕೂಡ ನಾನು ಎದುರಿಸುತ್ತೇನೆ ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ