ಅಕ್ರಮ ಹಣ ವರ್ಗಾವಣೆ ಪ್ರಕರಣ​​: ಡಿಕೆಶಿ ತಾಯಿ ಇಂದಿನ ಇಡಿ ವಿಚಾರಣೆ ಅಂತ್ಯ

ಇಂದು ಬೆಳಿಗ್ಗೆಯೇ ಕನಕಪುರ ತಾಲೂಕಿನ ಕೋಡಿಹಳ್ಳಿಯಲ್ಲಿನ ತೋಟದ ಮನೆಗೆ ಎರಡು ಕಾರ್​​ಗಳಲ್ಲಿ ಬಂದ ಐವರು ಅಧಿಕಾರಿಗಳ ತಂಡ ಡಿಕೆಶಿ ತಾಯಿ ಗೌರಮ್ಮರ ವಿಚಾರಣೆ ನಡೆಸಿದರು. ಈ ವಿಚಾರಣೆ ಮಧ್ಯೆಯೇ ಒಮ್ಮೆ ಗೌರಮ್ಮರ ಆರೋಗ್ಯದ ಬಗ್ಗೆ ಕುಟುಂಬ ವೈದ್ಯರು ತಪಾಸಣೆ ನಡೆಸಿದರು.

news18-kannada
Updated:February 11, 2020, 8:29 PM IST
ಅಕ್ರಮ ಹಣ ವರ್ಗಾವಣೆ ಪ್ರಕರಣ​​: ಡಿಕೆಶಿ ತಾಯಿ ಇಂದಿನ ಇಡಿ ವಿಚಾರಣೆ ಅಂತ್ಯ
ಇಂದು ಬೆಳಿಗ್ಗೆಯೇ ಕನಕಪುರ ತಾಲೂಕಿನ ಕೋಡಿಹಳ್ಳಿಯಲ್ಲಿನ ತೋಟದ ಮನೆಗೆ ಎರಡು ಕಾರ್​​ಗಳಲ್ಲಿ ಬಂದ ಐವರು ಅಧಿಕಾರಿಗಳ ತಂಡ ಡಿಕೆಶಿ ತಾಯಿ ಗೌರಮ್ಮರ ವಿಚಾರಣೆ ನಡೆಸಿದರು. ಈ ವಿಚಾರಣೆ ಮಧ್ಯೆಯೇ ಒಮ್ಮೆ ಗೌರಮ್ಮರ ಆರೋಗ್ಯದ ಬಗ್ಗೆ ಕುಟುಂಬ ವೈದ್ಯರು ತಪಾಸಣೆ ನಡೆಸಿದರು.
  • Share this:
ರಾಮನಗರ(ಫೆ.11): ಮಾಜಿ ಸಚಿವ ಡಿಕೆ ಶಿವಕುಮಾರ್ ಅಕ್ರಮ ಹಣ ವರ್ಗಾವಣೆ ಮತ್ತು ಬೇನಾಮಿ ಆಸ್ತಿ ಪ್ರಕರಣ ಸಂಬಂಧ ತಾಯಿ ಗೌರಮ್ಮರನ್ನು ಇಡಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದರು. ಇಲ್ಲಿನ ಕನಕಪುರ ತಾಲೂಕಿನ ಕೋಡಿಹಳ್ಳಿ ನಿವಾಸದಲ್ಲಿ ಸತತ 8 ಗಂಟೆಗಳ ಡಿಕೆಶಿ ತಾಯಿ ಗೌರಮ್ಮರ ವಿಚಾರಣೆ ಮಾಡಲಾಯ್ತು. ಈ ವೇಳೆ ಇಡಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿ ಡಿಕೆಶಿ ತಾಯಿ ಗೌರಮ್ಮ ಉತ್ತರ ನೀಡಿದ್ದಾರೆ. ಇದೀಗ ಗೌರಮ್ಮ ನೀಡಿದ ಉತ್ತರದ ಆಧಾರದ ಮೇಲೆ ಸಂಪೂರ್ಣ ವರದಿ ಪಡೆಯಲಾಗಿದೆ. ಅದೇ ವರದಿಗೆ ಡಿಕೆಶಿ ಕುಟುಂಬ ಸದಸ್ಯರ ಸಹಿ ಹಾಕಿಸಿಕೊಂಡ ನಂತರ ಇಂದಿನ ವಿಚಾರಣೆಯನ್ನು ಇಡಿ ಅಧಿಕಾರಿಗಳು ಅಂತ್ಯಗೊಳಿಸಿದ್ಧಾರೆ.

ಇಂದು ಬೆಳಿಗ್ಗೆಯೇ ಕನಕಪುರ ತಾಲೂಕಿನ ಕೋಡಿಹಳ್ಳಿಯಲ್ಲಿನ ತೋಟದ ಮನೆಗೆ ಎರಡು ಕಾರ್​​ಗಳಲ್ಲಿ ಬಂದ ಐವರು ಅಧಿಕಾರಿಗಳ ತಂಡ ಡಿಕೆಶಿ ತಾಯಿ ಗೌರಮ್ಮರ ವಿಚಾರಣೆ ನಡೆಸಿದರು. ಈ ವಿಚಾರಣೆ ಮಧ್ಯೆಯೇ ಒಮ್ಮೆ ಗೌರಮ್ಮರ ಆರೋಗ್ಯದ ಬಗ್ಗೆ ಕುಟುಂಬ ವೈದ್ಯರು ತಪಾಸಣೆ ನಡೆಸಿದರು.

ಈ ಹಿಂದೆಯೇ ವಿಚಾರಣೆಗಾಗಿ ದೆಹಲಿಗೆ ಬರುವಂತೆ ಇ.ಡಿ. ಅಧಿಕಾರಿಗಳು ಗೌರಮ್ಮ ಅವರಿಗೆ ನೋಟಿಸ್ ನೀಡಿದ್ದರು. ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದ ಗೌರಮ್ಮ, ವಯಸ್ಸಾದ ಕಾರಣ ವಿಚಾರಣೆಗೆ ವಿನಾಯಿತಿ ನೀಡಬೇಕು ಎಂದಿದ್ದರು. ಹಾಗೆಯೇ ತನ್ನ ನಿವಾಸದಲ್ಲಿಯೇ ವಿಚಾರಣೆ ನಡೆಸಬೇಕು ಎಂದು ಮನವು ಮಾಡಿದ್ದರು. ಗೌರಮ್ಮರ ಅರ್ಜಿ ಮಾನ್ಯ ಮಾಡಿದ ನ್ಯಾಯಾಲಯ, ಕೋಡಿಹಳ್ಳಿ ನಿವಾಸದಲ್ಲಿ ವಿಚಾರಣೆ ಮಾಡುವಂತೆ ಇಡಿಗೆ ಸೂಚಿಸಿತ್ತು.

ಇದನ್ನೂ ಓದಿ: ನಿರ್ಭಯಾ ಕೇಸ್​​: ಕ್ಷಮಾದಾನ ಅರ್ಜಿ ತಿರಸ್ಕಾರ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಅತ್ಯಾಚಾರಿ

ಏನಿದು ಪ್ರಕರಣ?: ತಾಯಿ, ಪತ್ನಿ ಸೇರಿ ಇತರರ ಹೆಸರಲ್ಲಿ ಡಿಕೆ ಶಿವಕುಮಾರ್ ಬೇನಾಮಿ ಆಸ್ತಿ ಮಾಡಿರುವುದು ಕಂಡು ಬಂದಿದ್ದರಿಂದ ಇಡಿ ಅಧಿಕಾರಿಗಳ ವಿಚಾರಣೆ ಮುಂದುವರಿದಿದೆ. ಇಡಿ ತನಿಖೆ ಮುಗಿದ ಬಳಿಕ ಸರ್ಕಾರ ಅಧಿಕೃತವಾಗಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆಯಿದೆ. ಈ ಹಿಂದೆ 2017ರ ಆಗಸ್ಟ್​ನಲ್ಲಿ ಐಟಿ ಅಧಿಕಾರಿಗಳು ಶಿವಕುಮಾರ್ ಮೇಲೆ ನಡೆಸಿದ ದಾಳಿ ವೇಳೆ ಸುಮಾರು 400 ಕೋಟಿ ರೂ.ಗೂ ಅಧಿಕ ಮೌಲ್ಯದ ಅಘೋಷಿತ ಆಸ್ತಿ ಪತ್ತೆಯಾಗಿತ್ತು. ಆ ಬಗ್ಗೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿದಾಗ ಹಲವರ ಹೆಸರಲ್ಲಿ ಆಸ್ತಿ ಮಾಡಿರುವುದು ಬೆಳಕಿಗೆ ಬಂದಿತ್ತು ಎನ್ನಲಾಗಿದೆ.
First published:February 11, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading