ದೆಹಲಿ ಪೊಲೀಸ್​ ಠಾಣೆಗೆ ತೆರಳಿದ ಡಿಕೆ ಶಿವಕುಮಾರ್​; ಅಷ್ಟಕ್ಕೂ ಆಗಿದ್ದೇನು?

ಡಿಕೆಶಿಗೆ ಸೇರಿದ ದೆಹಲಿ ನಿವಾಸದಲ್ಲಿ ಸಿಕ್ಕ ಅಕ್ರಮ ಹಣದ ಕುರಿತು ವಿಚಾರಣೆಗೆ ಹಾಜರಾಗುವಂತೆ ಇಡಿ ಅಧಿಕಾರಿಗಳು ಸಮನ್ಸ್​ ಜಾರಿಗೊಳಿಸಿದ್ದರು. ಅದರಂತೆ ಕಳೆದ ಆ. 30ರಂದು ಡಿಕೆ ಶಿವಕುಮಾರ್ ದೆಹಲಿಯ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದರು. ಆದರೆ, ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ಇಡಿ ಅಧಿಕಾರಿಗಳು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನುಕಳೆದ ಸೆ.​​​ 3ರಂದು ವಶಕ್ಕೆ ಪಡೆದಿದ್ದರು. ನಂತರ ಜೈಲಿನಿಂದ ಅವರು ಹೊರ ಬಂದಿದ್ದರು. ಈಗ ಅವರು ಮತ್ತೆ ಠಾಣೆಗೆ ತೆರಳಿದ್ದಾರೆ.

ದೆಹಲಿ ಪೊಲೀಸರ ಜೊತೆ ಡಿಕೆಶಿ

ದೆಹಲಿ ಪೊಲೀಸರ ಜೊತೆ ಡಿಕೆಶಿ

 • Share this:
  ನವದೆಹಲಿ (ಜ.26): ಕಳೆದ ಎರಡು ದಿನಗಳಿಂದದೆಹಲಿಯಲ್ಲಿರುವ ಕಾಂಗ್ರೆಸ್​ ಹಿರಿಯ ನಾಯಕ ಡಿಕೆ ಶಿವುಕುಮಾರ್​ ದೆಹಲಿಯ ಪೊಲೀಸ್​ ಠಾಣೆಗಳಿಗೆ ಇಂದು ಭೇಟಿ ನೀಡಿದ್ದಾರೆ. ಈ ಬಾರಿ ಅವರು ಜೈಲಿಗೆ ತೆರಳಲು ಕಾರಣ ಮಾತ್ರ ವಿಶೇವಾಗಿದೆ. ಅಷ್ಟಕ್ಕೂ ಅವರು ಜೈಲಿಗೆ ತೆರಳಿದ್ದೇಕೆ? ಈ ಪ್ರಶ್ನೆಗೆ ಇಲ್ಲಿದೆ ಉತ್ತರ. 

  ಡಿಕೆಶಿಗೆ ಸೇರಿದ ದೆಹಲಿ ನಿವಾಸದಲ್ಲಿ ಸಿಕ್ಕ ಅಕ್ರಮ ಹಣದ ಕುರಿತು ವಿಚಾರಣೆಗೆ ಹಾಜರಾಗುವಂತೆ ಇಡಿ ಅಧಿಕಾರಿಗಳು ಸಮನ್ಸ್​ ಜಾರಿಗೊಳಿಸಿದ್ದರು. ಅದರಂತೆ ಕಳೆದ ಆ. 30ರಂದು ಡಿಕೆ ಶಿವಕುಮಾರ್ ದೆಹಲಿಯ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದರು. ಆದರೆ, ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ಇಡಿ ಅಧಿಕಾರಿಗಳು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಕಳೆದ ಸೆ.​​​ 3ರಂದು ವಶಕ್ಕೆ ಪಡೆದಿದ್ದರು. ನಂತರ 50 ದಿನಗಳ ಕಾಲ ಡಿಕೆಶಿ ದೆಹಲಿ ಜೈಲಿನಲ್ಲಿದ್ದರು. ಈ ವೇಳೆ ಒಳ್ಳೆಯ ರೀತಿಯಲ್ಲಿ ವಿಚಾರಿಸಿದ ಪೊಲೀಸರಿಗೆ ಧನ್ಯವಾದ ಹೇಳಲು ಡಿಕೆಶಿ ಪೊಲೀಸ್​ ಠಾಣೆಗೆ ತೆರಳಿದ್ದರು.

  ತುಘಲಕ್ ರಸ್ತೆ ಹಾಗೂ ಖಾನ್ ಮಾರ್ಕೆಟ್ ಠಾಣೆಗಳಿಗೆ ಡಿಕೆಶಿ ಇಂದು ಭೇಟಿ ನೀಡಿದ್ದಾರೆ. ಈ ವೇಳೆ ಅಲ್ಲಿನ ಪೊಲೀಸ್ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ಇಡಿ ವಿಚಾರಣೆ ವೇಳೆ ತುಘಲಕ್ ಪೊಲೀಸ್ ಠಾಣೆಯಲ್ಲಿ ಡಿಕೆಶಿ ಇದ್ದರು.

  ಇದನ್ನೂ ಓದಿ: ಪಕ್ಷದಲ್ಲಿ ಯಾವುದೇ ಹುದ್ದೆ ಕೇಳಿಲ್ಲ. ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ; ಡಿಕೆ ಶಿವಕುಮಾರ್​

  ಕೆಪಿಸಿಸಿ ಅಧ್ಯಕ್ಷ ಹುದ್ದೆಗಾಗಿ ಡಿಕೆ ಶಿವಕುಮಾರ್ ಭಾರೀ ಲಾಬಿ ನಡೆಸುತ್ತಿದ್ದು, ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ನಿನ್ನೆ ರಾಜ್ಯ ಉಸ್ತುವಾರಿ ವೇಣುಗೋಪಾಲ್​ ಅವರನ್ನು ಭೇಟಿ ಮಾಡಿರುವ ಅವರ ನಡೆ ಸಾಕಷ್ಟು ಕುತೂಹಲ ಮೂಡಿಸಿತ್ತು.
  First published: