ಅಧಿಕಾರ ಇರಲಿ‌ ಇಲ್ಲದಿರಲಿ ಸಿದ್ದರಾಮಯ್ಯ ನಮ್ಮ ಲೀಡರ್​; ವಿಪಕ್ಷ ನಾಯಕನ ಭೇಟಿ ನಂತರ ಡಿಕೆಶಿ ಮಾತು

ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರು. ಅವರ ಕೈ ಕೆಳಗೆ ನಾನು ಕೆಲಸ ಮಾಡಿದ್ದೇನೆ. ಹೀಗಾಗಿ ಭೇಟಿ ಮಾಡಿ ಅವರ ಜೊತೆ ಚರ್ಚೆ ನಡೆಸಿದ್ದೇನೆ ಎಂದು ಭೇಟಿ ನಂತರ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

news18-kannada
Updated:January 5, 2020, 3:28 PM IST
ಅಧಿಕಾರ ಇರಲಿ‌ ಇಲ್ಲದಿರಲಿ ಸಿದ್ದರಾಮಯ್ಯ ನಮ್ಮ ಲೀಡರ್​; ವಿಪಕ್ಷ ನಾಯಕನ ಭೇಟಿ ನಂತರ ಡಿಕೆಶಿ ಮಾತು
ಸಿದ್ದರಾಮಯ್ಯ, ಡಿಕೆ ಶಿವಕುಮಾರ್​
  • Share this:
ಬೆಂಗಳೂರು (ಜ.5): ಡಿ.ಕೆ. ಶಿವಕುಮಾರ್​ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಾಭಿ ನಡೆಸುತ್ತಿದ್ದಾರೆ ಎನ್ನುವ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿದೆ. ಈ ಮಧ್ಯೆ ಡಿಕೆಶಿ ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಆದರೆ, ನಾನು ಯಾವ ಸ್ಥಾನಕ್ಕೂ ಆಸೆ ಪಟ್ಟಿಲ್ಲ ಎಂದು ಡಿಕೆಶಿ ಸ್ಪಷ್ಟನೆ ನೀಡಿದ್ದಾರೆ.

ಭೇಟಿ ನಂತರ ಮಾಧ್ಯಮದ ಜೊತೆ ಡಿಕೆಶಿ ಮಾತನಾಡಿದರು. “ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರು. ಅವರ ಕೈ ಕೆಳಗೆ ನಾನು ಕೆಲಸ ಮಾಡಿದ್ದೇನೆ. ಹೀಗಾಗಿ ಭೇಟಿ ಮಾಡಿ ಅವರ ಜೊತೆ ಚರ್ಚೆ ನಡೆಸಿದ್ದೇನೆ. ಅದರಲ್ಲಿ ವಿಶೇಷ ಏನೂ ಇಲ್ಲ. ಭೇಟಿಯಲ್ಲಿ ಯಾವುದೇ ಸ್ಪೆಷಲ್ ಇಲ್ಲ,” ಎಂದು ಸ್ಪಷ್ಟಪಡಿಸಿದರು.

ನಾನು ಒಬ್ಬರ ಬಳಿ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ ಎಂದ ಟ್ರಬಲ್​ ಶೂಟರ್​ “ಕುಮಾರಸ್ವಾಮಿ ಜೊತೆ ಎಷ್ಟೇ ಭಿನ್ನಾಭಿಪ್ರಾಯ ಇದ್ದರೂ ಹೈಕಮಾಂಡ್ ಹೇಳಿದ್ದಕ್ಕೆ ಕೆಲಸ ಮಾಡಿದೆ. ಸರ್ಕಾರ ಹೋಯ್ತು ಎಂದು ಕುಮಾರಸ್ವಾಮಿ ವಿರುದ್ಧ ಮಾತನಾಡಲು ಆಗುತ್ತದೆಯೇ? ನನಗೆ ಎಸ್.ಎಂ. ಕೃಷ್ಣ ಸೇರಿದಂತೆ ಎಲ್ಲರ ಮೇಲೆ ಗೌರವ ಇದೆ. ಅಧಿಕಾರ ಇರಲಿ‌ ಇಲ್ಲದೆ‌ ಇರಲಿ ಸಿದ್ದರಾಮಯ್ಯ ನಮ್ಮ ನಾಯಕರು,” ಎಂದು ಘೋಷಿಸಿದರು.

ಹಾಗಾದರೆ ಭೇಟಿ ವೇಳೆ ಏನೆಲ್ಲ ಚರ್ಚೆ ಆಯ್ತು? ಈ ಬಗ್ಗೆಯೂ ಡಿಕೆಶಿ ಮಾತನಾಡಿದ್ದಾರೆ. “ಪ್ರಸಕ್ತ ರಾಜಕೀಯ ವಿದ್ಯಮಾನ, ಪಕ್ಷದ ಬಗ್ಗೆ ಚರ್ಚೆ ಮಾಡಿದ್ದೇನೆ. ನಾನು ಯಾವುದೇ ಹುದ್ದೆ ಕೇಳೊಲ್ಲ. ಯಾರು ಯಾವ ಹುದ್ದೆ ಬೇಕಾದರೂ ಕೇಳಲಿ. ನಾನು ಯಾವುದೇ ಸ್ಥಾನಕ್ಕೆ ಕಾಂಪಿಟೇಟರ್ ಅಲ್ಲ. ಹೈಕಮಾಂಡ್, ಪಕ್ಷದ ಅಧ್ಯಕ್ಷರು, ವಿಪಕ್ಷ ನಾಯಕರು ಹೇಳೋದೇ ಫೈನಲ್,” ಎಂದು ಪುನರಚ್ಚುರಿಸಿದರು.

ಇದನ್ನೂ ಓದಿ: ರಾಮನಗರ ಹೆಸರು ಬದಲು: ನನ್ನ ಮೇಲಿನ ದ್ವೇಷ, ಬಡವರ ಭೂಮಿ ಕಬಳಿಸುವ ಹುನ್ನಾರ – ಕುಮಾರಸ್ವಾಮಿ

ಪಕ್ಷದಲ್ಲಿ ಒಗ್ಗಟ್ಟಿದೆ ಎನ್ನುವ ಸಂದೇಶವನ್ನು ಡಿಕೆಶಿ ಸಾರಿದ್ದಾರೆ. “ನಮ್ಮ‌ ಪಕ್ಷದಲ್ಲಿ ಯಾರೂ ಕಿತ್ತಾಡಿಕೊಂಡಿಲ್ಲ. ನಾವೇನು ವೈರಿಗಳಲ್ಲ. ನಾವು ಎಲ್ಲರೂ ಒಟ್ಟಾಗಿದ್ದೇವೆ. ನಮ್ಮನ್ನ‌ ನಂಬಿಕೆ ಸಾವಿರಾರು ಕಾರ್ಯಕರ್ತರು ಇದ್ದಾರೆ. ಅವರಿಗಾಗಿ ನಾವು ಕೆಲಸ ಮಾಡಬೇಕು. ನನಗೆ ಕಾಂಗ್ರೆಸ್ ಪಕ್ಷ ಎಲ್ಲವನ್ನು ಕೊಟ್ಟಿದೆ,” ಎಂದರು ಅವರು.
Published by: Rajesh Duggumane
First published: January 5, 2020, 3:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading