'13 ಅಲ್ಲ ಬಿಜೆಪಿ 15 ಕ್ಷೇತ್ರದಲ್ಲೂ ಗೆಲ್ಲುತ್ತೇ'; ಸಿಎಂ ಬಿಎಸ್​ವೈ ಹೇಳಿಕೆಗೆ ವ್ಯಂಗ್ಯವಾಡಿದ ಡಿ.ಕೆ. ಶಿವಕುಮಾರ್

ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ 13 ಸ್ಥಾನ ಅಂತಾ ಹೇಳಿದ್ಯಾರು ? ಇಬ್ಬರಿಗೆ ಅವರು ಮೋಸ ಮಾಡಬಾರದು ಅಲ್ವಾ ? ಹಾಗಾಗಿ ಅವರು 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸ್ತಾರೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಸಿಎಂ ಬಿಎಸ್​ವೈ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಡಿ.ಕೆ. ಶಿವಕುಮಾರ್.

ಡಿ.ಕೆ. ಶಿವಕುಮಾರ್.

  • Share this:
ಬೆಂಗಳೂರು (ಡಿಸೆಂಬರ್ 08); ರಾಜ್ಯ ಉಪ ಚುನಾವಣೆಯಲ್ಲಿ ಬಿಜೆಪಿ 13 ಅಲ್ಲ 15 ಕ್ಷೇತ್ರದಲ್ಲೂ ಗೆಲುವು ಸಾಧಿಸಲಿದೆ. ಪಾಪಾ ಯಾರೋ ಇಬ್ಬರು ಅನರ್ಹರಿಗೆ ಮಾತ್ರ ಯಾಕೆ ಮೋಸ ಮಾಡಬೇಕು ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

ಉಪ ಚುನಾವಣೆ ಕುರಿತು ನಿನ್ನೆ ಹೇಳಿಕೆ ನೀಡಿದ್ದ ಸಿಎಂ ಬಿ.ಎಸ್. ಯಡಿಯೂರಪ್ಪ ರಾಜ್ಯ ಉಪ ಚುನಾವಣೆಯಲ್ಲಿ ಬಿಜೆಪಿ 15 ಕ್ಷೇತ್ರಗಳ ಪೈಕಿ ಕನಿಷ್ಟ 13 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದರು.

ಆದರೆ, ಯಡಿಯೂರಪ್ಪ ಅವರ ಹೇಳಿಕೆಯ ಕುರಿತು ಇಂದು ವ್ಯಂಗ್ಯವಾಡಿರುವ ಡಿ.ಕೆ. ಶಿವಕುಮಾರ್, “ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ 13 ಸ್ಥಾನ ಅಂತಾ ಹೇಳಿದ್ಯಾರು ? ಇಬ್ಬರಿಗೆ ಅವರು ಮೋಸ ಮಾಡಬಾರದು ಅಲ್ವಾ ? ಹಾಗಾಗಿ ಅವರು 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸ್ತಾರೆ” ಎಂದು ಅಪಹಾಸ್ಯ ಮಾಡಿದ್ದಾರೆ. ಅಲ್ಲದೆ, “ಬಿಜೆಪಿ 13 ಸ್ಥಾನ ಗೆಲ್ಲಲಿದೆ ಎಂಬುದು ಯಡಿಯೂರಪ್ಪ ಅವರ ಭ್ರಮೆ ಅಷ್ಟೇ” ಎಂದು ಕಿಡಿಕಾರಿದ್ದಾರೆ.

ಇದೇ ಸಂದರ್ಭದಲ್ಲಿ ಕನಕಪುರಕ್ಕೆ ಮೆಡಿಕಲ್ ಕಾಲೇಜು ರದ್ದು ಮಾಡಿರುವ ಬಿಜೆಪಿ ಸರ್ಕಾರದ ನಡೆಯನ್ನು ಖಂಡಿಸಿರುವ ಡಿ.ಕೆ. ಶಿವಕುಮಾರ್, “ಸಿಎಂ ಬಿ.ಎಸ್. ಯಡಿಯೂರಪ್ಪ ಈ ವಿಚಾರದಲ್ಲಿ ನಡೆದುಕೊಂಡ ರೀತಿ ಸರಿಯಲ್ಲ. ಹೀಗಾಗಿ ಕನಕಪುರ ಕ್ಕೆ ಮೆಡಿಕಲ್ ಕಾಲೇಜು ರದ್ದು ಆದೇಶ ವಾಪಸ್ ಪಡೆದು ಕಾಲೇಜು ಸ್ಥಾಪನೆಗೆ ಅವಕಾಶ ಮಾಡಿ ಕೊಡಿ ಅಂತಾ ಸಿಎಂ ಗೆ ಪತ್ರ ಬರೆದಿದ್ದೇನೆ.

ಶೀಘ್ರದಲ್ಲಿ ಬಿಜೆಪಿ ಸರ್ಕಾರ ಈ ಕುರಿತು ಒಳ್ಳೆಯ ನಿರ್ಧಾರ ತೆಗೆದುಕೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ : ಹೈದರಾಬಾದ್ ಅತ್ಯಾಚಾರಿಗಳ ಎನ್​ಕೌಂಟರ್​ ಪ್ರಕರಣ; ಹತ್ಯೆಯ ಸಾಚಾತನದ ಕುರಿತು ಇಂದಿನಿಂದಲೇ ತನಿಖೆ ಆರಂಭ
First published: