ಸೋನಿಯಾಗೆ ನಿಷ್ಠೆ ತೋರಿಸಲು ಡಿಕೆಶಿ ಯಿಂದ ಯೇಸು ಪ್ರತಿಮೆ ಸ್ಥಾಪನೆ ; ಪ್ರಹ್ಲಾದ್ ಜೋಶಿ

ಸರ್ಕಾರಿ ಜಾಗದಲ್ಲಿ ಸರಿಯಾಗಿ ಅನುಮತಿ ಪಡೆಯದೆ ಏಸು ಪ್ರತಿಮೆ ಪ್ರತಿಷ್ಠಾಪನೆ ಮಾಡಲು ಮುಂದಾಗಿರುವದು ತಪ್ಪು. ಇದೇ ಕಾರಣಕ್ಕೆ ಬಿಜೆಪಿ ಪಕ್ಷ ಆಕ್ಷೇಪ ಮಾಡುತ್ತಿದೆ. ಯಾವುದೇ ಧರ್ಮದ ವಿರುದ್ಧವಲ್ಲ. ಬಿಜೆಪಿ ಪಕ್ಷ ಮುಸ್ಲಿಂ ವಿರೋಧಿಯೂ ಅಲ್ಲಾ,

G Hareeshkumar | news18-kannada
Updated:January 13, 2020, 8:11 PM IST
ಸೋನಿಯಾಗೆ ನಿಷ್ಠೆ ತೋರಿಸಲು ಡಿಕೆಶಿ ಯಿಂದ ಯೇಸು ಪ್ರತಿಮೆ ಸ್ಥಾಪನೆ ; ಪ್ರಹ್ಲಾದ್ ಜೋಶಿ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ - ಡಿ ಕೆ ಶಿವಕುಮಾರ್
  • Share this:
ಗದಗ(ಜ.13) : ಡಿ.ಕೆ.ಶಿವಕುಮಾರ್ ಅವರು ಸೋನಿಯಾ ಗಾಂಧಿಯವರಿಗೆ ತಮ್ಮ ನಿಷ್ಠೆ ತೋರಿಸಲು ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಿಸುತ್ತಿದ್ದಾರೆಯೇ ಹೊರತು ನಿಷ್ಠೆ ಏಸು ಕ್ರಿಸ್ತನಿಗೆ ಅಲ್ಲ ಎಂದು ಡಿಕೆಶಿಗೆ ವಿರುದ್ಧ ಕೇಂದ್ರ‌ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದರು.

ಪ್ರತಿಮೆ ನಿರ್ಮಾಣ ಏಸುಕ್ರಿಸ್ತನ ನಿಷ್ಠೆ ಅಲ್ಲ. ಅದು ಸೋನಿಯಾ ಗಾಂಧಿಯ ನಿಷ್ಠೆಯಾಗಿದೆ ಡಿ ಕೆ ಶಿವಕುಮಾರ್ ಅವರು ಏನಾದರೂ ಮಾಡಿ ವಿರೋಧ ಪಕ್ಷದ ನಾಯಕ ಅಥವಾ ರಾಜ್ಯಾಧ್ಯಕ್ಷರಾಗಬೇಕು ಎನ್ನುವ ಮಹಾದಾಸೆ ಹೊಂದಿದ್ದಾರೆ. ಹೀಗಾಗಿ ಅವರಿಗೆ ಏಸು ಒಳ್ಳೆದು ಮಾಡಲಿ ಎಂದು ಹಾರೈಸುತ್ತೆನೆ ಎಂದರು.

ಸರ್ಕಾರಿ ಜಾಗದಲ್ಲಿ ಸರಿಯಾಗಿ ಅನುಮತಿ ಪಡೆಯದೆ ಏಸು ಪ್ರತಿಮೆ ಪ್ರತಿಷ್ಠಾಪನೆ ಮಾಡಲು ಮುಂದಾಗಿರುವದು ತಪ್ಪು. ಇದೇ ಕಾರಣಕ್ಕೆ ಬಿಜೆಪಿ ಪಕ್ಷ ಆಕ್ಷೇಪ ಮಾಡುತ್ತಿದೆ. ಯಾವುದೇ ಧರ್ಮದ ವಿರುದ್ಧವಲ್ಲ. ಬಿಜೆಪಿ ಪಕ್ಷ ಮುಸ್ಲಿಂ ವಿರೋಧಿಯೂ ಅಲ್ಲಾ, ಕ್ರಿಶ್ಚಿಯನ್ ವಿರೂಧಿಯೂ ಅಲ್ಲಾ ಎಂದು ಪ್ರಲ್ಹಾದ್ ಜೋಶಿ ಗುಡುಗಿದರು.

ಇನ್ನು ಕಲ್ಲಡ್ಕ ಪ್ರಭಾಕರ್ ಭಟ್ ಕನಕಪುರಕ್ಕೆ ಹೋಗಿ ಯಾಕೆ ಭಾಷಣ‌ ಮಾಡಬೇಕು ಅನ್ನೋ ಯು.ಟಿ.ಖಾದರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, ಯು ಟಿ ಖಾದರ್​ ಅವರೂ ಸಹ ಬೇರೆ ಬೇರೆ ಕಡೆ ಹೋಗಿ ಭಾಷಣ ಮಾಡುತ್ತಾರೆ. ಅಲ್ಲದೇ ಪೌರತ್ವ ಕಾಯ್ದೆ ಕುರಿತು ಬಾಯಿಗೆ ಬಂದ ಹಾಗೆ ಮಾತನಾಡಿದ್ದಾರೆ. ಕಲ್ಲಡ್ಕ ಪ್ರಭಾಕರ್ ಭಟ್ ಅವರು ಎಲ್ಲಿ ಭಾಷಣ ಮಾಡಬೇಕು ಎಲ್ಲಿ ಮಾಡಬಾರದು ಎನ್ನುವದು ಆಯಾ ಜಿಲ್ಲಾಡಳಿತ ಅದನ್ನ‌ ನಿರ್ಧರಿಸುತ್ತೆ ಎಂದರು.

ಇದನ್ನೂ ಓದಿ : ಮಂಗಳೂರು ಆಯ್ತು, ಈಗ ಬೆಂಗಳೂರು, ಕನಕಪುರ ಮಂದಿಯ ನೆಮ್ಮದಿ ಹಾಳು ಮಾಡುತ್ತಿದ್ದಾರೆ: ಕಲ್ಲಡ್ಕ ವಿರುದ್ಧ ಖಾದರ್ ವಾಗ್ದಾಳಿ

ಇನ್ನು ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿಯೂ ನಕಾರವಾಗಿಯೇ ಉತ್ತರಿಸಿದ ಪ್ರಲ್ಹಾದ ಜೋಶಿ ಸಂಪುಟ ವಿಸ್ತರಣೆ ವಿಚಾರವಾಗಿ ಈಗಾಗಲೇ ಮುಖ್ಯಮಂತ್ರಿ ಮಾತನಾಡಿದ್ದಾರೆ. ಅವರೇನು ಹೇಳಿದ್ದಾರೋ ಅದೇ ನನ್ನ ಮಾತು ಎಂದು ಉತ್ತರಿಸಿದರು.
 
First published:January 13, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ